ಫೈಜರ್ ಕೊರೊನಾ ಲಸಿಕೆ ತುರ್ತು ಬಳಕೆಗೆ ಎಫ್‌ಡಿಎ ಅನುಮತಿ
ವಾಷಿಂಗ್ಟನ್, ಡಿಸೆಂಬರ್ 11:ತುರ್ತು ಸಂದರ್ಭಗಳಲ್ಲಿ ಫೈಜರ್ ಲಸಿಕೆ ಬಳಕೆ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಒಪ್ಪಿಗೆ ನೀಡಿದೆ.
Recommended Video
ಬಯೋಎನ್‌ಟೆಕ್‌ನ ಫೈಜರ್ ಲಸಿಕೆಗೆ ತುರ್ತು ಅನುಮತಿ ದೊರೆತಂತಾಗಿದೆ. ಎಫ್‌ಡಿಎ ಸಲಹಾ ಸಮಿತಿಯು ಹಾಗೂ ಕೆಲವು ವಿಜ್ಞಾನಿಗಳು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಕೆಲವೇ ದಿನಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಜನವರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಬಳಿಕ ಲಸಿಕೆಯ ಪರಿಣಾಮದ ಬಗ್ಗೆ ನಿಗಾ ಇರಿಸಲಾಗುತ್ತದೆ.

ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ, ಫೈಜರ್ ಬಯೋ ಎನ್ ಟೆಕ್ ಕೊವಿಡ್ ಲಸಿಕೆ 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ.
ಬ್ರಿಟನ್, ಕೆನಡಾ, ಬಹ್ರೇನ್, ಸೌದಿ ಅರೇಬಿಯಾ ಈಗಾಗಲೇ ಲಸಿಕೆಗೆ ಅನುಮತಿ ನೀಡಿದೆ. ಲಸಿಕೆಯು ಮೂರನೇ ಪ್ರಯೋಗವನ್ನೂ ಮುಗಿಸಿದೆ.
ರಷ್ಯಾ ಹಾಗೂ ಚೀನಾದ ಹಲವು ಲಸಿಕೆಗಳು ಮಾರುಕಟ್ಟೆಗೆ ಬಂದಿವೆ ಆದರೆ ಸರಿಯಾಗಿ ಕ್ಲಿನಿಕಲ್ ಪ್ರಯೋಗಗಳನ್ನು ಪೂರೈಸಿಲ್ಲ. ಫೈಜರ್ ಲಸಿಕೆಯನ್ನು 44 ಸಾವಿರ ಮಂದಿ ಮೇಲೆ ಈಗಾಗಲೇ ಪ್ರಯೋಗಿಸಲಾಗಿದೆ. ಉತ್ತಮ ಫಲಿತಾಂಶ ಲಭ್ಯವಾಗಿದೆ.
ಔಷಧಿ, ಆಹಾರ ಅಥವಾ ಲಸಿಕೆ ತೆಗೆದುಕೊಂಡರೆ ಅಲರ್ಜಿಗೆ ಒಳಗಾಗುವ ಜನರಿಗೆ, ಕೊರೊನಾ ವೈರಸ್ ಗೆ ನೀಡಲಾಗುತ್ತಿರುವ ಫೈಜರ್ ಲಸಿಕೆ ತೆಗೆದುಕೊಳ್ಳದಂತೆ ಬ್ರಿಟನ್ ಔಷಧ ನಿಯಂತ್ರಕ ಬುಧವಾರ ಎಚ್ಚರಿಕೆಯನ್ನು ನೀಡಿದೆ.
ಬ್ರಿಟನ್ ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಎರಡು ಡೋಸ್ ಗಳ ಲಸಿಕೆ ನೀಡಿದ ನಂತರ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇಬ್ಬರು ರಾಷ್ಟ್ರೀಯ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ತೆಗೆದುಕೊಂಡ ನಂತರ "ಅನಾಫಿಲ್ಯಾಕ್ಟಾಯ್ಡ್" ಅಲರ್ಜಿ (ಉಸಿರಾಟದಲ್ಲಿ ತೊಂದರೆ, ಚರ್ಮದ ಸಮಸ್ಯೆ, ರಕ್ತದೊತ್ತಡ) ಕಾಣಿಸಿಕೊಂಡಿದೆ. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆಯ ನಂತರ, ಲಸಿಕೆಯ ಪ್ರತಿಕೂಲ ಪರಿಣಾಮವನ್ನರಿತು ಇಂಗ್ಲೆಂಡ್ ನ ಆರೋಗ್ಯ ಸೇವಾ ಇಲಾಖೆಯು ಸಮೂಹ ಲಸಿಕಾ ಕಾರ್ಯಕ್ರಮದ ಪಟ್ಟಿಯಲ್ಲಿರುವವರಿಗೆ ಅಲರ್ಜಿಯ ಹಿನ್ನೆಲೆಯಿದೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಿದೆ.
ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications