ಕಪ್ಪು ಹಾಗೂ ಲ್ಯಾಟಿನ್ ಅಮೆರಿಕನ್ನರಲ್ಲಿ ಕೊರೊನಾ ಸೋಂಕು ಹೆಚ್ಚು
ನ್ಯೂಯಾರ್ಕ್, ಆಗಸ್ಟ್ 23: ಬಿಳಿಯರಿಗಿಂತ ಕಪ್ಪು ಹಾಗೂ ಲ್ಯಾಟಿನ್ ಅಮರಿಕದ ಜನರು ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಅಮೆರಿಕದಲ್ಲಿ ಪಿಫೈಜರ್ ಹಾಗೂ ಜರ್ಮನ್ ಸಹಭಾಗಿತ್ವದಲ್ಲಿ ಬಯೋಎನ್‌ಟೆಕ್ ಕೊವಿಡ್ ಲಸಿಕೆ ಪ್ರಯೋಗ ನಡೆಸುತ್ತಿದ್ದು, ಅದರಲ್ಲಿ 30 ಸಾವಿರ ಮಂದಿ ಭಾಗಿಯಾಗಿದ್ದು, ಅದರಲ್ಲಿ 11 ಸಾವಿರ ಮಂದಿ ಕಪ್ಪು ಹಾಗೂ ಲ್ಯಾಟಿನ್ ಅಮೆರಿಕನ್ನರಾಗಿದ್ದಾರೆ.
ಬಿಳಿಯರಿಗಿಂತ ಎರಡು ಪಟ್ಟು ಲ್ಯಾಟಿನ್ ಅಮೆರಿಕನ್ನರು ಹಾಗೂ ಕಪ್ಪು ವರ್ಣೀಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವೈದ್ಯರು ಹಾಗೂ ವಿಜ್ಞಾನಿಗಳು ಲಸಿಕೆ ಪ್ರಯೋಗದಲ್ಲಿ ಕಪ್ಪು ಹಾಗೂ ಲ್ಯಾಟಿನ್ ಅಮೆರಿಕರನ್ನು ಒಳಗೊಳ್ಳುವಂತೆ ಒತ್ತಡ ಹೇರುತ್ತಿರುದ್ದಾರೆ.

ಕೊರೊನಾ ಸೋಂಕಿನ ಕುರಿತು ಕಪ್ಪು ವರ್ಣೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.ಅವರನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಕೊವಿಡ್ ಲಸಿಕೆಯನ್ನು ಪಡೆಯಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಅಕ್ಟೋಬರ್ ವೇಳೆಗೆ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿದೆ.
ಒಟ್ಟು 30 ಸಾವಿರ ಮಂದಿ ಸ್ವಯಂ ಸೇವಕರು ಈ ಪ್ರಯೋಗದಲ್ಲಿ ಪಾಲ್ಗೊಂಡಿದ್ದಾರೆ.18-55 ವರ್ಷದೊಳಗಿನ ಶೇ.17 ರಷ್ಟು ಮಂದಿಗೆ ಜ್ವರ ಬಂದ ಬಳಿಕ ಪಿಫೈಜರ್ ಲಸಿಕೆ ನೀಡಲಡಾಗಿದೆ. 65-85 ವರ್ಷದವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳೇ ಇರಲಿಲ್ಲ.ಮಕ್ಕಳಲ್ಲಿ ವಿಪರೀತ ಜ್ವರ ಕಂಡುಬಂದಿತ್ತು.












Click it and Unblock the Notifications