ಈ ಐತಿಹಾಸಿಕ ಫೋಟೋದಲ್ಲಿ ಮುತ್ತಿಟ್ಟಿದ್ದ ಯುವಕ 95ನೇ ವಯಸ್ಸಿನಲ್ಲಿ ನಿಧನ

ವಾಷಿಂಗ್ಟನ್, ಫೆಬ್ರವರಿ 19: ಇದೊಂದು ಭಾವಚಿತ್ರಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಇದೆ. ಎರಡನೇ ವಿಶ್ವ ಯುದ್ಧ ಕೊನೆಗೊಂಡ ಸಂಭ್ರಮದಲ್ಲಿ ನಾವಿಕನೊಬ್ಬ ಮಹಿಳೆಯ ತುಟಿಗೆ ತುಟಿ ಬೆಸೆದ ಚಿತ್ರವಿದು. ಇದರಲ್ಲಿರುವ ನಾವಿಕ 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಮಗಳು ತಿಳಿಸಿರುವುದಾಗಿ ವರದಿ ಆಗಿದೆ.

ಜಾರ್ಜ್ ಮೆಂಡೋನ್ಸ ಭಾನುವಾರದಂದು ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ರೋಡ್ ದ್ವೀಪದ ಮಿಡ್ಲ್ ಟನ್ ನಲ್ಲಿ ಸಾವನ್ನಪ್ಪಿದ್ದರು ಎಂದು ಅವರ ಮಗಳು ಶರೋನ್ ಮೊಲ್ಯೂರ್ ತಿಳಿಸಿದ್ದಾರೆ.

ಐತಿಹಾಸಿಕವಾದ ಭಾವಚಿತ್ರವನ್ನು ಟೈಮ್ಸ್ ಸ್ಕ್ವೇರ್ ನಲ್ಲಿ ತೆಗೆಯಲಾಗಿತ್ತು. ಬಿಳಿ ನರ್ಸ್ ದಿರಿಸು ಧರಿಸಿದ್ದ ಮಹಿಳೆಯು ಬಾಗಿ, ಆಕೆಗೆ ಮುತ್ತಿಡುತ್ತಿರುವ ಚಿತ್ರವನ್ನು ಲೈಫ್ ನಿಯತಕಾಲಿಕಕ್ಕೆ ಸೆರೆ ಹಿಡಿಯಲಾಗಿತ್ತು. ಮೆಂಡೋನ್ಸಾ ಅವರು ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಪೆಸಿಫಿಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಜಾದ ಮೇಲೆ ಮನೆಗೆ ಹಿಂತಿರುಗಿದ ವೇಳೆ ತೆಗೆದ ಚಿತ್ರ ಇದಾಗಿತ್ತು.

Kissing Sailor

ಇನ್ನು ಆ ಭಾವಚಿತ್ರದಲ್ಲಿ ಇರುವ ಮಹಿಳೆ ಗ್ರೇಟಾ ಜಿಮ್ಮರ್ ಫ್ರೀಡ್ ಮನ್ 2016ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಅಂದಹಾಗೆ ಫೋಟೋ ತೆಗೆದಿದ್ದ ಎಲ್ಸೆನ್ ಸ್ಟಡ್ ಗೆ ಅವರಿಬ್ಬರ ಹೆಸರು ಕೂಡ ಗೊತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+