ಅಮೆರಿಕದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಟ್ರಂಪ್ ಕುಟುಂಬ
ವಾಷಿಂಗ್ಟನ್, ಏಪ್ರಿಲ್ 17: ದೇಶಾದ್ಯಂತ ಕೊರೊನಾ ಲಾಕ್‌ಡೌನ್ ವಿಧಿಸಿ ದಿನ ಬೆಳಗಾದರೆ ಕೊರೊನಾ ಪರಿಸ್ಥಿತಿ ಕುರಿತು ಭಾಷಣ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬವೇ ನಿಯಮವನ್ನು ಉಲ್ಲಂಘಿಸಿದೆ.
ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹಾಗೂ ಆಕೆಯ ಪತಿ ಜರೇದ್ ಕುಶ್ನರ್ ಜೆವಿಶ್ ಹಾಲಿಡೇ ಎಂಜಾಯ್ ಮಾಡಲು ನ್ಯೂಜರ್ಸಿಯಲ್ಲಿರುವ ಫಾರ್ಮ್ ಹೌಸ್‌ಗೆ ಹೋಗಿದ್ದಾರೆ. ಮಾರಕ ಕೊರೊನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ನರಹಂತಕ ವೈರಾಣುವಿಗೆ ಅಮೆರಿಕದಲ್ಲಿ ಇದುವರೆಗೂ 30,990 ಜನ ಬಲಿಯಾಗಿದ್ದಾರೆ.
ಕೊರೊನಾ ವೈರಸ್ ಕುರಿತು ಖುದ್ದು ಟ್ರಂಪ್ ಕುಟುಂಬದಲ್ಲೇ ಉಡಾಫೆಯ ಮನೋಭಾವ ಇದೆಯೇ ಎಂಬ ಅನುಮಾನ ಇದೀಗ ಕಾಡತೊಡಗಿದೆ. ಯಹೂದಿಗಳ ಹಾಲಿಡೇ ಟ್ರಿಪ್‌ನ್ನು ಆಚರಿಸಲು ಇವಾಂಕಾ ಹಾಗೂ ಜೇರೆಡ್ ಕುಶ್ನರ್ ನ್ಯೂಜೆರ್ಸಿಯ ಬೆಡ್‌ಮಿನ್ಸಟರ್‌ನಲ್ಲಿರುವ ಅವರ ಖಾಸಗಿ ಫಾರ್ಮ್‌ಹೌಸ್‌ಗೆ ತೆರಳಿದ್ದಾರೆ ಲಭ್ಯವಾಗಿದೆ.

ಈ ಕುರಿತು ಖುದ್ದು ಮಾಹಿತಿ ನೀಡಿರುವ ಶ್ವೇತಭವನ, ಇವಾಂಕಾ ಹಾಗೂ ಜೇರೆಡ್ ಪ್ರವಾಸದ ಕುರಿತು ಮೊದಲೇ ಮಾಹಿತಿ ಇತ್ತು ಎಂದು ಹೇಳಿದೆ. ಅಲ್ಲದೇ ದಂಪತಿಯ ಪ್ರವಾಸಕ್ಕೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಇಡೀ ದೇಶ ಕೊರೊನಾ ವೈರಸ್‌ನಿಂದಾಗಿ ನರಳುತ್ತಿರುವಾಗ ಅಧ್ಯಕ್ಷರ ಕುಟುಂಬವೇ ಪ್ರವಾಸ ಕೈಗೊಂಡಿರುವುದು ಅಮೆರಿಕನ್ನರ ಕಣ್ಣು ಕೆಂಪಾಗಿಸಿದೆ.












Click it and Unblock the Notifications