ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ನಿಧನ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ 73 ವರ್ಷದ ಇವಾನಾ ಟ್ರಂಪ್ ಅವರು ಗುರುವಾರ ನಿಧನರಾಗಿದ್ದರು. ಇವಾನಾ ಟ್ರಂಪ್‌ ನಿಧನದ ಬಗ್ಗೆ ಸ್ವತಃ ಡೊನಾಲ್ಡ್‌ ಟ್ರಂಪ್‌ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಮ್ಯಾನ್‌ಹಟನ್‌ ಟೌನ್‌ಹೌಸ್‌ನಲ್ಲಿ ನಿನ್ನೆ ಮಧ್ಯಾಹ್ನ 12:40ಕ್ಕೆ ಅವರು ಹೃದಯಾಘಾತದಿನದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವಾನಾ ಟ್ರಂಪ್ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ತನ್ನ ಪತಿಗೆ ಸಾಥ್‌ ನೀಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್ ನಿನ್ನ ನೆನಪನ್ನು ನನ್ನ ಹೃದಯದಲ್ಲಿ ಜೀವಂತವಾಗಿರಿಸಿಕೊಳ್ಳುತ್ತೇನೆ. ಸ್ಪೂರ್ತಿದಾಯಕ ಜೀವನವನ್ನು ಸಾಗಿಸಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎನ್ನುವ ಮೂಲಕ ವಿದಾಯ ಹೇಳಿದ್ದಾರೆ.

1946ರಲ್ಲಿ ಜೆಕೊಸ್ಲೊವಾಕಿಯಾದಲ್ಲಿ ಇವಾನ ಜನಿಸಿದ್ದರು. ತಂದೆ ಮಿಲೋಸ್ ಝೆಲ್ನೆಕ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರೆ, ತಾಯಿ ಮೇರಿ ಟೆಲಿಫೋನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. 1970ರಲ್ಲಿ ಕೆನಡಾಕ್ಕೆ ವಲಸೆ ಹೋಗಿದ್ದು, ಬಳಿಕ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದರು. 1977ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಇವಾನ ವಿವಾಹವಾಗಿದ್ದರು. ಬಳಿಕ 1992ರಲ್ಲಿ ವಿಚ್ಛೇದನ ಪಡೆದರು. ಇವರಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ.

Former Us President Donald Trump’s First Wife Ivana Passed Away

ತಾಯಿಯ ನಿಧನದ ಬಗ್ಗೆ ಮಗ ಎರಿಕ್ ಟ್ರಂಪ್ 'ಇದು ತುಂಬಾ ದುಃಖದ ದಿನ. 'ನಮ್ಮ ತಾಯಿ ಅದ್ಭುತ ಮಹಿಳೆ. ವ್ಯವಹಾರದಲ್ಲಿ ಅತ್ಯುತ್ತಮರು. ವಿಶ್ವ ದರ್ಜೆಯ ಕ್ರೀಡಾಪಟು. ತುಂಬಾ ಸುಂದರ, ಕಾಳಜಿಯುಳ್ಳ ಮತ್ತು ಉತ್ತಮ ಸ್ನೇಹಿತರಾಗಿದ್ದರು ಎಂದು ಹೇಳಿದರು. ಮಗಳು ಇವಾಂಕಾ ಕೂಡ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡು ತಾಯಿಗೆ ಗೌರವ ಸಲ್ಲಿಸಿದ್ದಾರೆ.

Recommended Video

      West Indies ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ | *Cricket | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+