Get Updates
Get notified of breaking news, exclusive insights, and must-see stories!

ಕೊವಿಡ್ 19: ಏಕಾಏಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆ ನಿಲ್ಲಿಸಿದ ಅಮೆರಿಕ

ವಾಷಿಂಗ್ಟನ್, ಜೂನ್ 16: ಅಮೆರಿಕದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಬಳಕೆ ನಿಲ್ಲಿಸಿರುವುದಾಗಿ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಕೊವಿಡ್ 19 ರೋಗಿಗಳಿಗೆ ಈ ಔಷಧ ನೀಡಲಾಗುತ್ತಿತ್ತು.ಕೆಲವು ದಿನಗಳ ಕಾಲ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಮಾತ್ರೆಯನ್ನು ತೆಗೆದುಕೊಂಡಿದ್ದರು.

Recommended Video

      Careful! Your sanitizer may be poisonous, CBI issues alert for the first time | Oneindia Kannada

      ಒಂದೊಮ್ಮೆ ಈ ಮಾತ್ರೆಯನ್ನು ರಫ್ತು ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತಕ್ಕೆ ಧಮ್ಕಿಯನ್ನು ಹಾಕಿದ್ದರು. ಇದೀಗ ಕ್ಲೋರೊಕ್ವಿನ್ ಹಾಗೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇವನೆ ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಕೊರೊನಾ ವೈರಸ್ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆ ಔಷಧಿ ಮೇಲಿನ ತನ್ನ ಅಧಿಕಾರವನ್ನು ವಾಪಸ್ ತೆಗೆದುಕೊಂಡಿದೆ ಎಂದು ಹೇಳಿದೆ.

      ಎಫ್ ಡಿಎಯ ಚೀಫ್ ಸೈಂಟಿಸ್ಟ್ ಡಿನೈಸ್ ಹಿನ್ ಟನ್ ಈ ಕುರಿತು ಘೋಷಣೆ ಹೊರಡಿಸಿದ್ದು, ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಿ ನಡೆಸಿದ ಸಂಶೋಧನೆಗಳಿಂದ ಯಾವುದೇ ಆ್ಯಂಟಿ ವೈರಸ್ ಗಳನ್ನು ಸೃಷ್ಟಿಸುತ್ತಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳುವ ಮೂಲಕ ಔಷಧಿ ಬಳಕೆಯನ್ನು ನಿಲ್ಲಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

      ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ನಿಲ್ಲಿಸಿದ್ದೇಕೆ?

      ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ನಿಲ್ಲಿಸಿದ್ದೇಕೆ?

      ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಎಂಬುದು ತಿಳಿದುಬಂದಿದೆ. ಹೆಚ್ಚು ದಿನಗಳ ಕಾಲ ಆ ಮಾತ್ರೆ ಸೇವಿಸಲು ಸಾಧ್ಯವಿಲ್ಲ.ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ಎಫ್‌ಡಿಎ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

      ತುರ್ತು ಸಂದರ್ಭದಲ್ಲಿ ಬಳಕೆ

      ತುರ್ತು ಸಂದರ್ಭದಲ್ಲಿ ಬಳಕೆ

      ಕೊವಿಡ್ 19 ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡಬಹುದು ಎಂದು ಮಾರ್ಚ್ 28 ರಂದು ಎಫ್‌ಡಿಎ ತಿಳಿಸಿತ್ತು. ಏಪ್ರಿಲ್ 24ರಷ್ಟೊತ್ತಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಕುರಿತು ಎಚ್ಚರಿಕೆ ಸಂದೇಶವನ್ನು ರವಾನಿಸಿತ್ತು. ಇದು ಹೃದಯ ಬಡಿತದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿತ್ತು. ಇದರಿಂದ ಸಾವು ಕೂಡ ಸಂಭವಿಸಬಹುದು ಎಂದು ಹೇಳಿತ್ತು.

      ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಎಲ್ಲಿ

      ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಎಲ್ಲಿ

      ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಮಲೇರಿಯಾ ರೋಗಿಗಳಿಗೆ ನೀಡಲಾಗುತ್ತದೆ. ಆದರೆ ಅದನ್ನು ಕೊವಿಡ್ 19 ರೋಗಿಗಳಿಗೆ ನೀಡಲು ಸಾಧ್ಯವಿಲ್ಲ. ಹೈಡ್ರಾಕ್ಷಿಕ್ಲೊರಿಕ್ವಿನ್ ಮಾತ್ರೆಯ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯನ್ನು ಮುಂದುವರೆಸುತ್ತೇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.

      ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಜಾಗತಿಕ ವರದಿಯನ್ನಾಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕೊರೊನಾ ರೋಗಿಗಳಿಗೆ ಬಳಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದ ಬೆನ್ನಲ್ಲಿಯೇ ಐಸಿಎಂಆರ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

      ಎಷ್ಟು ಮಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ

      ಎಷ್ಟು ಮಂದಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ

      ಸುಮಾರು 15 ಸಾವಿರ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ನೀಡಲಾಗಿದೆ. ಈ ಮಂದಿಯ ಚಿಕಿತ್ಸೆಯಲ್ಲಿ ಈ ಔಷಧ ನೆರವಾಗಿದೆ. ಅಮೆರಿಕ ಕೆಲವು ವಿಜ್ಞಾನಿಗಳು ತಾತ್ಕಾಲಿಕವಾಗಿ ಈ ಔಷಧ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+