ಮಾಸ್ಕ್‌ ಧರಿಸುವುದರಿಂದ ಆಮ್ಲಜನಕದ ಕೊರತೆ? ತಜ್ಞರು ಏನಂತಾರೆ?

ವಾಷಿಂಗ್ಟನ್, ಅಕ್ಟೋಬರ್ 03: ಮಾಸ್ಕ್ ಧರಿಸುವುದರಿಂದ ಕೊವಿಡ್ 19 ರೋಗ ಹರಡುವುದನ್ನು ತಡೆಗಟ್ಟಬಹುದು. ಆದರೆ ದೀರ್ಘಕಾಲದವರೆಗೆ ಮಾಸ್ಕ್ ಧರಿಸುವುದರಿಂದ ಆಮ್ಲಜನಕ ಕೊರತೆಯುಂಟಾಗುತ್ತದೆ ಎನ್ನುವ ವದಂತಿ ಕೇಳಿಬಂದಿದೆ.

ಹೆಚ್ಚು ಸಿಒ2 (ಕಾರ್ಬನ್ ಡೈಆಕ್ಸೈಡ್) ಸೇವನೆಯಾಗಲಿದ್ದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಹೇಳಲಾಗಿತ್ತು.

ಆದರೆ ಅಮೆರಿಕದ ಥೊರಾಸಿಕ್ ಸೊಸೈಟಿಯ ತಜ್ಞರಾದ ಮೈಕಲ್ ಕ್ಯಾಂಪೋಸ್ ಈ ಅಂಶಗಳನ್ನು ಅಲ್ಲಗಳೆದಿದ್ದು, ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅಪಾಯಗಳೂ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಅನ್ನಲ್ಸ್ ಆಫ್ ದ ಅಮೆರಿಕನ್ ಥೊರಾಸಿಕ್ ಸೊಸೈಟಿ ಅಧ್ಯಯನ ನಡೆಸಿದ್ದು, ವರದಿ ಪ್ರಕಟಿಸಿದೆ. ಉಸಿರಾಟಕ್ಕೆ ಅಡ್ಡಿಪಡಿಸುವ ಸಿಒಪಿಡಿ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಆರೋಗ್ಯಯುತವಾಗಿರುವ ವ್ಯಕ್ತಿಗಳಿಗೂ ದೀರ್ಘ ಕಾಲ ಮಾಸ್ಕ್ ಧರಿಸುವುದರಿಂದ ಆಮ್ಲಜನಕ ಪೂರೈಕೆ ಕೊರತೆ ಉಂಟಾಗಿ ಹೆಚ್ಚು ಸಿಒ2 (ಕಾರ್ಬನ್ ಡೈಆಕ್ಸೈಡ್) ಸೇವನೆಯಾಗಲಿದೆ ಇದರಿಂದಾಗಿ ಉಸಿರಾಟಕ್ಕೆ ಅಡ್ಡಿಯಾಗುವ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗಲಿದೆ ಎಂದು ಫ್ಲೋರಿಡಾ ಮುಂತಾದ ಪ್ರದೇಶಗಳಲ್ಲಿ ವದಂತಿ ಹಬ್ಬಿಸಲಾಗಿತ್ತು.

ಗಾಳಿಯ ಸುಗಮ ಸಂಚಾರಕ್ಕೆ ಅಡೆತಡೆ

ಗಾಳಿಯ ಸುಗಮ ಸಂಚಾರಕ್ಕೆ ಅಡೆತಡೆ

ಮಾಸ್ಕ್ ಧರಿಸಿದಾಗ ಗಾಳಿಯ ಸುಗಮ ಸಂಚಾರಕ್ಕೆ ಸ್ವಲ್ಪ ಅಡೆತಡೆ ಉಂಟಾಗಬಹುದು ಈ ವೇಳೆ ಕಿರಿಕಿರಿ ಆಗುವುದು ಸಹಜ ಆದರೆ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ, ಸಿಒಪಿಡಿ ಸಮಸ್ಯೆ ಉಲ್ಬಣವಾಗುವುದಿಲ್ಲ, ಮಾಸ್ಕ್ ಧರಿಸುವುದರಿಂದ ಉಂಟಾಗುವ ಲಾಭಗಳನ್ನು ಜನತೆ ನಿರ್ಲಕ್ಷ್ಯಿಸಬಾರದು ಎಂದು ತಜ್ಞರು ಹೇಳಿದ್ದಾರೆ.

ಮನೆಯಲ್ಲಿ ಸೋಂಕಿನ ಶಂಕೆ ಇಲ್ಲದಿರುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ

ಮನೆಯಲ್ಲಿ ಸೋಂಕಿನ ಶಂಕೆ ಇಲ್ಲದಿರುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ

ಮುಖ ಗವಸು ನಿಮ್ಮನ್ನು ರಕ್ಷಿಸುವ ಸಾಧನವಾಗಿದೆ. ಆದರೆ ಸಮರ್ಪಕವಾಗಿ ಬಳಸದಿದ್ದರೆ ಅದು ನಿಮ್ಮ ಪ್ರಾಣವನ್ನು ತೆಗೆಯಲೂಬಹುದು.

ನೀವು ರಸ್ತೆ, ಪಾರ್ಕ್ ಇತ್ಯಾದಿಗಳಂತಹ ತೆರೆದ ಸ್ಥಳದಲ್ಲಿದ್ದಾಗ ಮಾತ್ರ ಮಾಸ್ಕ್ ಧರಿಸಿ, ಅಪರಿಚಿತ ವ್ಯಕ್ತಿಗಳೊಡನೆ ಸ್ಥಳವನ್ನು ಹಂಚಿಕೊಂಡಾಗ ಅಥವಾ ಜನಸಂದಣಿಯ ಪ್ರದೇಶದಲ್ಲಿದ್ದಾಗ ಮಾಸ್ಕ್ ನಿಮ್ಮ ಮತ್ತು ಬಾಯಿಯನ್ನು ಮುಚ್ಚಿರಲಿ, ಕಾರ್ಯ ನಿಮಿತ್ತ ಅನ್ಯವ್ಯಕ್ತಿಯ ಸಮೀಪದಲ್ಲಿದ್ದಾಗ, ಮನೆಯಲ್ಲಿ ಶಂಕಿತ ಸೋಂಕಿತ ವ್ಯಕ್ತಿಯಿದ್ದಾಗ ಮಾಸ್ಕ್ ಧರಿಸಿ, ಕುಟುಂಬದ ಯಾವುದೇ ಸದಸ್ಯರಿಗೆ ಸೋಂಕಿನ ಶಂಕೆ ಇಲ್ಲದಿದ್ದಾಗ ಮನೆಯಲ್ಲಿ ಮಾಸ್ಕ್ ಧರಿಸಬೇಕಿಲ್ಲ.
ಪ್ರತಿದಿನ 30 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಿ

ಪ್ರತಿದಿನ 30 ನಿಮಿಷ ಬಿಸಿಲಿನಲ್ಲಿ ಕುಳಿತುಕೊಳ್ಳಿ

ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳಿ, ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ. ವಿಟಮಿನ್ ಸಿ ಪೂರಕಗಳನ್ನೂ ಸೇವಿಸಬಹುದು.ಆದರೆ ವೈದ್ಯರ ಶಿಫಾರಸು ಮುಖ್ಯವಾಗಿದೆ. ತಣ್ಣನೆಯ ಆಹಾರದಿಂದ ದೂರವಿರಿ.

ಕೆಲವು ಸಂದರ್ಭದಲ್ಲಿ ಮಾಸ್ಕ್ ಅಪಾಯವನ್ನು ಒಡ್ಡಬಹುದು

ಕೆಲವು ಸಂದರ್ಭದಲ್ಲಿ ಮಾಸ್ಕ್ ಅಪಾಯವನ್ನು ಒಡ್ಡಬಹುದು

ಮಾಸ್ಕ್ ಕೊರೊನಾ ವೈರಸ್ ವಿರುದ್ಧ ಪ್ರಮುಖ ರಕ್ಷಣಾ ಸಾಧನವಾಗಿದೆ ಮತ್ತು ಭವಿಷ್ಯದಲ್ಲಿಯೂ ಕೊವಿಡ್ 19 ಹಾಗೂ ಮಾಸ್ಕ್ ಜೊತೆ ಬದುಕುವುದನ್ನು ನಾವು ಕಲಿಯಬೇಕಿದೆ. ಆದರೆ ಮಾಸ್ಕ್‌ನ್ನು ದೀರ್ಘಕಾಲ ಬಳಸುವುದು ಆರೋಗ್ಯಕ್ಕೆ ಅಪಾಯವನ್ನೂ ತಂದೊಡ್ಡಬಹುದು. ಸೀಮಿತ ಅವಧಿಗೆ ಮಾಸ್ಕ್‌ನ ಬಳಕೆ ಅಥವಾ ಆಗಾಗ ತಾಜಾ ಗಾಳಿಯನ್ನು ಕೂಡ ಉಸಿರಾಡಿ.

-ಉಸಿರು ತೆಗೆದುಕೊಳ್ಳಲು ಕಷ್ಟವಾಗಬಹುದು

-ಉಸಿರು ತೆಗೆದುಕೊಳ್ಳಲು ಕಷ್ಟವಾಗಬಹುದು

-ಹೈಪರ್‌ಕ್ಯಾಪ್ನಿಯಾ ಅಥವಾ ಕಾರ್ಬನ್ ಡೈಆಕ್ಸೈಡ್ ವಿಷತ್ವ ಉಂಟಾಗಬಹುದು ಮತ್ತು ತೀವ್ರ ಹದಗೆಟ್ಟ ಪರಿಸ್ಥಿತಿಯಲ್ಲಿ ಸಾವಿಗೂ ಕಾರಣವಾಗಬಹುದು ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+