26 ಮಂದಿಗೆ ಕ್ಷಮಾದಾನ ಘೋಷಿಸಿದ ಟ್ರಂಪ್
ವಾಷಿಂಗ್ಟನ್, ಡಿಸೆಂಬರ್ 24: ತಮ್ಮ ಅಧಿಕಾರಾವಧಿಯ ಅಂತಿಮ ದಿನಗಳಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ 26 ಮಂದಿಗೆ ಕ್ಷಮಾದಾನ ಘೋಷಿಸಿದ್ದಾರೆ.
ತಮ್ಮ ಆಪ್ತ ರೋಜರ್ ಸ್ಟೋನ್, ಪಾಲ್ ಮಾನಾಫೋರ್ಟ್ ಹಾಗೂ ವೈಟ್ ಹೌಸ್ ನ ಹಿರಿಯ ಸಲಹೆಗಾರ ಚಾರ್ಲ್ಸ್ ಕುಶ್ನರ್ ಒಳಗೊಂಡಂತೆ 26 ಮಂದಿಗೆ ಕ್ಷಮಾದಾನ ಘೋಷಿಸಿದ್ದಾರೆ.
ಈ ಹಿಂದೆ ಕೆಲವು ಅಧ್ಯಕ್ಷರು ತಮ್ಮ ಅಧಿಕಾರಾವಧಿಯ ಅಂತಿಮದಲ್ಲಿ ವಿವಾದಾತ್ಮಕ ಕ್ಷಮಾದಾನಗಳನ್ನು ನೀಡಿದ್ದರು. ಟ್ರಂಪ್ ಈಗ ತಮ್ಮ ಕಚೇರಿಯ ವಿಶೇಷ ಅಧಿಕಾರ ಬಳಸಿಕೊಂಡು, ತಮ್ಮ ಸ್ನೇಹಿತರನ್ನು ಒಳಗೊಂಡಂತೆ 26 ಮಂದಿಗೆ ಕ್ಷಮಾದಾನ ನೀಡಿದ್ದಾರೆ. ವಿಶೇಷ ಸಲಹೆಗಾರ ರಾಬರ್ಟ್ ಮುಲ್ಲರ್ಸ್ ತನಿಖೆಯಲ್ಲಿ ಶಿಕ್ಷೆಗೊಳಗಾದ ಟ್ರಂಪ್ ಮಾಜಿ ಪ್ರಚಾರಕ ರೋಜರ್ ಸ್ಟೋನ್ ಹಾಗೂ ಮಿತ್ರ ಚಾರ್ಲ್ಸ್ ಗೆ ಸಂಪೂರ್ಣ ಕ್ಷಮಾದಾನ ನೀಡಿರುವುದು ವಿಶೇಷವಾಗಿದೆ.

ಪಾಲ್ ಮಾನಾಫೋರ್ಟ್ ಹಾಗೂ ರೋಜರ್ ಸ್ಟೋನ್ ಅವರು ರಾಬರ್ಟ್ ಮುಲ್ಲರ್ ಇಂದ ದೋಷಾರೋಪ ಪಡೆದುಕೊಂಡಿದ್ದರು. 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ರೋಜರ್, ಪಾಲ್ ಶಾಮೀಲಾಗಿದ್ದ ಆರೋಪ ಕೇಳಿಬಂದು, ಈ ಪ್ರಕರಣದಲ್ಲಿ ಇವರಿಬ್ಬರೂ ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆ ವಿಧಿಸಲಾಗಿತ್ತು.
ಇವರೊಂದಿಗೆ ಮಾರ್ಗರೆಟ್ ಹಂಟರ್, ಜಾನ್ ಟೇಟ್, ಜೆಸ್ಸಿ ಬೆಂಟನ್, ಸ್ಟಿಫಾನಿ ಮೋರ್, ಗ್ಯಾರಿ ಬ್ರಗ್ ಮನ್, ಮೇರಿ ಮ್ಯಾಕರ್ಟ್, ಮಾರ್ಕ್ ಸಿಲ್ಜಂದರ್, ಕ್ರಿಸ್ಟೊಫರ್, ರಾಬರ್ಟ್ ಕಾಗ್ಲಿನ್ ಮುಂತಾದ ಇಪ್ಪತ್ತಾರು ಮಂದಿಗೆ ಕ್ಷಮಾದಾನ ದೊರೆತಿದೆ












Click it and Unblock the Notifications