• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕ: ಮತ ಹಾಕಲು ಬಂದರೆ ಅಲ್ಲಿ ಮತಯಂತ್ರವೇ ಕಣ್ಮರೆ!

|

ಡೆಟ್ರಾಯಿಟ್, ನವೆಂಬರ್ 6: ಅಮೆರಿಕದ ಮಿಚಿಗನ್ ಸ್ಥಳೀಯ ಚುನಾವಣೆಯಲ್ಲಿ ನಡೆದ ಯಡವಟ್ಟು ತಮಾಷೆಯ ವಸ್ತುವಾಗಿ ಅಲ್ಲಿ ಚರ್ಚೆಗೆ ಒಳಗಾಗಿದೆ.

ಮಿಚಿಗನ್ ಸಾರ್ವತ್ರಿಕ ಚುನಾವಣೆಯಲ್ಲಿ ಡೆಟ್ರಾಯಿಟ್‌ನಲ್ಲಿನ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೈಸ್ಕೂಲ್‌ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ, ಮಂಗಳವಾರ ಬೆಳಿಗ್ಗೆ ಚುನಾವಣಾ ಸಿಬ್ಬಂದಿ ಅಲ್ಲಿಗೆ ಬಂದು ನೋಡಿದರೆ ಮತಯಂತ್ರಗಳೇ ಇರಲಿಲ್ಲ. ಮತಹಾಕಲು ಬಂದ ಮತದಾರರೂ ಮತಯಂತ್ರವಿಲ್ಲದೆ ಕಕ್ಕಾಬಿಕ್ಕಿಯಾದರು.

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

ಅಲ್ಲಿ ಇಡಬೇಕಿದ್ದ ಮತಯಂತ್ರಗಳನ್ನು ಎಲ್ಲಿ ಇರಿಸಲಾಗಿದೆ ಎನ್ನುವುದನ್ನು ಕಂಡುಕೊಳ್ಳುವುದೇ ಸಮಸ್ಯೆಯಾಯಿತು. ಅಲ್ಲಿದ್ದ ಸಿಬ್ಬಂದಿಗೆ ಮತಯಂತ್ರ ಎಲ್ಲಿದೆ ಎನ್ನುವುದು ಗೊತ್ತಾಗಲಿಲ್ಲ.

ಕೊನೆಗೂ ವಿಚಾರಣೆ ಮಾಡಿದ ಬಳಿಕ ಶಾಲೆಯ ಇನ್ನೊಂದು ಭಾಗದಲ್ಲಿನ ಕೊಠಡಿಯೊಂದರಲ್ಲಿ ಮತಯಂತ್ರ ಇರಿಸಿರುವುದು ಗೊತ್ತಾಯಿತು.

ಆದರೆ, ಚುನಾವಣಾ ಸಿಬ್ಬಂದಿಗೆ ಆ ಕೊಠಡಿ ತೆರಳಲು ಅನುಮತಿಯೇ ಇರಲಿಲ್ಲ. ಆ ಮತಯಂತ್ರದ ಕೊಠಡಿಯನ್ನು ಕೊನೆಗೂ ತೆರೆದು, ಮತಯಂತ್ರಗಳನ್ನು ಬಳಕೆಗೆ ಸಜ್ಜುಗೊಳಿಸುವ ವೇಳೆಗೆ ಮತದಾರರೆಲ್ಲರೂ ಕಾದು ಬೇಸೆತ್ತು ಮರಳಿದ್ದರು.

English summary
Voters turned away back after the voting machines went missing in Michigan General Election's Detroit voting center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X