ಒಬಾಮರ 'ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿ: ವಾರದಲ್ಲೇ 17 ಲಕ್ಷ ಪ್ರತಿ ಮಾರಾಟ
ವಾಷಿಂಗ್ಟನ್, ನವೆಂಬರ್ 25: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಎ ಪ್ರಾಮಿಸ್ಡ್ ಲ್ಯಾಂಡ್ ಕೃತಿ ಒಂದು ವಾರದಲ್ಲೇ 17 ಲಕ್ಷದಷ್ಟು ಮಾರಾಟವಾಗಿದೆ.
ಒಬಾಮ ಅವರ ಪತ್ನಿ ಒಬಾಮಾ ಅವರ ಆತ್ಮಚರಿತ್ರೆ ಬಿಕಮಿಂಗ್ 2018ರಲ್ಲಿ ಬಿಡುಗಡೆಯಾಗಿತ್ತು. ವಿಶ್ವಾದ್ಯಂತ 1 ಕೋಟಿ ಪ್ರತಿಗಳು ಮಾರಾಟವಾಗಿವೆ. ಸದ್ಯ ಈ ಕೃತಿಯು ಅಮೆಜಾನ್.ಕಾಮ್‌ನಲ್ಲಿ ಲಭ್ಯವಿದೆ.
ಎ ಪ್ರಾಮಿಸ್ಡ್ ಲ್ಯಾಂಡ್ ಪುಸ್ತಕದ ಆರಂಭಿಕ ಮುದ್ರಣವನ್ನು 34 ಲಕ್ಷ ಪ್ರತಿಗಳಿಂದ 43 ಲಕ್ಷ ಪ್ರತಿಗಳಿಗೆ ಹೆಚ್ಚಿಸಲಾಗಿದೆ. ಆಡಿಯೋ ಮತ್ತು ಡಿಜಿಟಲ್ ಪುಸ್ತಕ ಕೂಡ ಮಾರಾಟವಾಗುತ್ತಿದೆ.

ಇದೇ ರೀತಿ ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಅನೇಕ ನಾಯಕರ ಹೆಸರನ್ನು ಮತ್ತು ಅವರ ಸ್ವಭಾವವನ್ನು ವರ್ಣಿಸಿದ್ದಾರೆ. ಈ ಪುಸ್ತಕವು ಅವರ ವೈಯಕ್ತಿಕ ಜೀವನಕ್ಕಿಂತಲೂ ಅವರ ರಾಜಕೀಯ ನಿಲುವುಗಳ ಮೇಲೆ ಹೆಚ್ಚು ಗಮನ ಹರಿಸಿದೆ .
ಒಬಾಮ ಅವರ ಹೊಸ ಪುಸ್ತಕವು ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರನ್ನು ಸಹ ಉಲ್ಲೇಖಿಸಿದೆ. ತಮ್ಮ ಮಾಜಿ ಉಪಾಧ್ಯಕ್ಷರಾಗಿದ್ದ ಬೈಡನ್ ಅವರು ಬಹಳ ಯೋಗ್ಯ ಮನುಷ್ಯ. ತಮ್ಮ ಕಡೆಯಿಂದ ನೀಡಬೇಕಿರುವುದನ್ನು ಸಲ್ಲಿಸದೆ ಇದ್ದರೆ ತಪ್ಪಾಗುತ್ತದೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ಎ ಪ್ರಾಮಿಸ್ಡ್ ಲ್ಯಾಂಡ್' ಕೃತಿಯಲ್ಲಿ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿರುವ ಒಬಾಮಾ, 'ರಾಹುಲ್ ಗಾಂಧಿ ದಿಗಿಲಿನ, ರೂಪುಗೊಳ್ಳದ ಗುಣವನ್ನು ಹೊಂದಿದ್ದಾರೆ.
ಅವರು ವಿದ್ಯಾರ್ಥಿಯಾಗಿದ್ದರೆ ಕೋರ್ಸ್ ಕೆಲಸ ಮುಗಿಸಿ ಶಿಕ್ಷಕರಿಂದ ಮೆಚ್ಚಿಸಿಕೊಳ್ಳಲು ಬಯಸಿರುವ ಆದರೆ ಬುದ್ಧಿಮತ್ತೆ ಅಥವಾ ವಿಷಯದಲ್ಲಿ ಪರಿಣತನಾಗುವ ಹಂಬಲದ ಕೊರತೆಯುಳ್ಳವರಂತೆ ಕಾಣಿಸುತ್ತಾರೆ' ಎಂದು ಬರೆದಿದ್ದರು.












Click it and Unblock the Notifications