ನ್ಯೂಜೆರ್ಸಿ: ಮನೆಯ ಈಜುಕೊಳದಲ್ಲಿ ಭಾರತ ಮೂಲದ ಮೂವರ ಶವ ಪತ್ತೆ
ನ್ಯೂಯಾರ್ಕ್, ಜೂನ್ 24: ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಮನೆಯ ಈಜುಕೊಳದಲ್ಲಿ ಭಾರತ ಮೂಲದ ಮೂವರ ಶವ ಪತ್ತೆಯಾಗಿದೆ.
ಎಂಟು ವರ್ಷದ ಬಾಲಕಿ ಸೇರಿ ಒಂದೇ ಮನೆಯ ಮೂವರ ಶವ ಕಂಡುಬಂದಿದೆ. ನ್ಯೂಜೆರ್ಸಿಯಲ್ಲಿರುವ ಮನೆಯನ್ನು ಇತ್ತೀಚೆಗಷ್ಟೇ ಖರೀದಿಸಿದ್ದರು. ಭರತ್ ಪಟೇಲ್(62), ಸೊಸೆ ನಿಷಾ ಪಟೇಲ್(33), 8 ವರ್ಷದ ಮೊಮ್ಮಗಳು ಎಂದು ಗುರುತಿಸಲಾಗಿದೆ.
ಈಜಲು ಹೋದಾಗ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈಜುಕೊಳದಲ್ಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಲಭ್ಯವಾದ ಮಾಹಿತಿ ಪ್ರಕಾರ ಈಜುಕೊಳ ತುಂಬಾ ಆಳವಾಗಿದೆ.

ಮೂವರಿಗೂ ಸರಿಯಾಗಿ ಈಜು ಬರುತ್ತಿರಲಿಲ್ಲ. ನೀರಿಗೆ ಇಳಿದಾಗ ಈಜು ಬರದೆ ಉಸಿರುಕಟ್ಟಿ ಮೃತಪಟ್ಟಿರಬಹುದು. ಸೋಮವಾರ ಮನೆಯ ಹಿಂಭಾಗದಿಂದ ಕೂಗು ಕೇಳಿಬಂದಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದ್ದಾರೆ.
ಮೇಯರ್ ಬ್ರ್ಯಾಡ್ ಕೊಹೆನ್ ಈ ಮೂವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. ಇಡೀ ಈಸ್ಟ್ ಬ್ರೂನ್ಸ್ವಿಕ್ ಸಮುದಾಯವೇ ಇವರ ಸಾವಿಗೆ ಮರುಕ ವ್ಯಕ್ತಪಡಿಸಿದೆ.












Click it and Unblock the Notifications