ನಿಗೂಢ ಬರ್ಮುಡಾ ಟ್ರಯಾಂಗಲ್‌: 100 ವರ್ಷಗಳ ಹಳೆಯ ಹಡಗು ಪತ್ತೆ

ಫ್ಲೋರಿಡಾ, ಜನವರಿ 29: ಸುಮಾರು ನೂರು ವರ್ಷಗಳ ಹಳೆಯ ಹಡಗು ಫ್ಲೋರಿಡಾದ ಕರಾವಳಿಯಲ್ಲಿ ಪತ್ತೆಯಾಗಿದೆ.

ಈ ನಿಗೂಢ ಬರ್ಮುಡಾ ಟ್ರಯಾಂಗಲ್‌ನಲ್ಲಿ ಕಾಣೆಯಾದವರು ಅಥವಾ ಕಾಣೆಯಾದ ಹಡಗುಗಳು ಯಾವತ್ತೂ ಯಾವತ್ತೂ ವಾಪಸ್ ಬರುವುದಿಲ್ಲ ಎಂಬ ಮಾತಿದೆ. ಆದರೆ ವಿಶೇಷವೆಂದರೆ 100 ವರ್ಷಗಳ ಹಿಂದೆ ಕಾಣೆಯಾಗಿದ್ದ ಹಡಗು ಈಗ ಪತ್ತೆಯಾಗಿದೆ.

ಬರ್ಮುಡಾ ಟ್ರಯಾಂಗಲ್‌ನಿಂದ ಸುಮಾರು ನೂರು ವರ್ಷಗಳ ಹಿಂದೆ ಈ ಹಡಗು ಕಾಣೆಯಾಗಿತ್ತು. ಈ ಹಡಗು ಬರ್ಮುಡಾ ಟ್ರಯಾಂಗಲ್‌ನಿಂದ ಕ್ಯೂಬಾದ ಹವಾನಾಕ್ಕೆ ತೆರಳಬೇಕಿತ್ತು. ಹಡಗಿನಲ್ಲಿದ್ದ 32 ಮಂದಿ ಕೂಡ ನಾಪತ್ತೆಯಾಗಿದ್ದರು. ಈ ಹಡಗು ಕಾಣೆಯಾಗಿರುವ ಬಗ್ಗೆ ಹಲವು ಕತೆಗಳೂ ಕೂಡ ಘಟನೆ ಹಿಂದೆಯೇ ಹುಟ್ಟಿಕೊಂಡಿದ್ದವು.

ನವೆಂಬರ್ 1925 ರಂದು ಕಾಣೆಯಾಗಿದ್ದ ಹಡಗು

ನವೆಂಬರ್ 1925 ರಂದು ಕಾಣೆಯಾಗಿದ್ದ ಹಡಗು

ಈ ಹಡಗು 1925ರ ನವೆಂಬರ್‌ನಲ್ಲಿ ಹೊರಟಿತ್ತು, ಕಲ್ಲಿದ್ದಲನ್ನು ಸಾಗಿಸಲು ಬಳಸುತ್ತಿದ್ದ ಹಡಗು ಇದಾಗಿತ್ತು. ಬಳಿಕ ಡಿಸೆಂಬರ್‌ನಲ್ಲಿ ಇದು ಸಿಗ್ನಲ್ ಕಳೆದುಕೊಂಡಿತ್ತು. ಯಾರಿಗೂ ಪತ್ತೆಮಾಡಲು ಸಾಧ್ಯವೇ ಆಗಿರಲಿಲ್ಲ. ಹಡಗಿನ ಬಿಡಿಭಾಗಗಳಾಗಲಿ ಅಥವಾ ಮನುಷ್ಯರ ಶವವಾಗಿಲಿ ಯಾವುದೂ ದೊರೆತಿರಲಿಲ್ಲ.

ಹಡಗು ನಾಪತ್ತೆ ಹಿಂದೆ ಸುಳ್ಳು ಕತೆ ಕಟ್ಟಿದ್ದರು

ಹಡಗು ನಾಪತ್ತೆ ಹಿಂದೆ ಸುಳ್ಳು ಕತೆ ಕಟ್ಟಿದ್ದರು

ಹಡಗು ನಾಪತ್ತೆ ಕುರಿತು ಹಲವರು ಸಾಕಷ್ಟು ಸುಳ್ಳು ಕತೆಗಳನ್ನು ಹೆಣೆದಿದ್ದರು. ಕ್ಯೂಬಾದ ಕರಾವಳಿ ಪ್ರದೇಶದಲ್ಲಿ ಹಗಡು ಪತ್ತೆಯಾಗಿದೆ ಎಂದು 2015ರಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೇ ರೀತಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ ಎಲ್ಲಾ ಸುದ್ದಿಯೂ ಸುಳ್ಳು ಎನ್ನಲಾಗಿತ್ತು.

ನಿಗೂಢ ಬರ್ಮುಡ ಟ್ರಯಾಂಗಲ್

ನಿಗೂಢ ಬರ್ಮುಡ ಟ್ರಯಾಂಗಲ್

ಬರ್ಮುಡ ಟ್ರಯಾಂಗಲ್ ಎನ್ನುವುದು ಉತ್ತರ ಅಟ್ಲಾಂಟಿಕ್ ಸಾಗರದ ಹತ್ತಿರವಿರುವ ಪ್ರದೇಶವಾಗಿದೆ. ಇದೇ ಪ್ರದೇಶದಲ್ಲಿ 50 ಹಡಗುಗಳು, 20 ವಿಮಾನಗಳು ಕಣ್ಮರೆಯಾಗಿದ್ದವು. ಮಿಯಾಮಿ, ಸನ್ ಜಾನ್ ಹಾಗೂ ಬರ್ಮುಡಾ ಸೇರಿ ತ್ರಿಕೋನ ನಿರ್ಮಾಣವಾಗುತ್ತದೆ. ಇದೇ ಪ್ರದೇಶದಲ್ಲಿ ಹಡಗುಗಳು ಕಾಣೆಯಾಗುತ್ತಿದ್ದು, ಇದನ್ನು ನಿಗೂಢ ಟ್ರಯಾಂಗಲ್ ಎಂದೇ ಹೇಳಲಾಗುತ್ತದೆ.

ಕೊಲಂಬಸ್ ಕೂಡ ಈ ಪ್ರದೇಶದ ಬಗ್ಗೆ ಮಾತನಾಡಿದ್ದರು

ಕೊಲಂಬಸ್ ಕೂಡ ಈ ಪ್ರದೇಶದ ಬಗ್ಗೆ ಮಾತನಾಡಿದ್ದರು

ಅಮೆರಿಕವನ್ನು ಕಂಡು ಹಿಡಿದ ಕ್ರಿಸ್ಟೋಫರ್ ಕೊಲಂಬಸ್ ಕೂಡ ಬರ್ಮುಡಾದ ನಿಗೂಢತೆ ಬಗ್ಗೆ ಮಾತನಾಡಿದ್ದರು. ಈ ತ್ರಿಕೋನದಲ್ಲಿ ಕಂಪಾಸ್ ರೀಡಿಂಗ್ ಮಾಡುವುದೂ ಕೂಡ ಕಷ್ಟವೆಂದು ಹೇಳಿದ್ದರು. ಬರ್ಮುಡಾ ಟ್ರಯಾಂಗಲ್‌ನಿಂದ ಪರಭಾವಿತಗೊಂಡು ಶೇಕ್ಸ್‌ಪಿಯರ್ 1609ರಲ್ಲಿ ಟೆಂಪೆಸ್ಟ್ ರವಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+