ವಿಜಯಪುರದಲ್ಲಿ ಅಕ್ರಮವಾಗಿ ರೆಮ್‌ಡೆಸಿವಿರ್ ಮಾರಾಟಕ್ಕೆ ಯತ್ನ: ಐವರ ಬಂಧನ

ವಿಜಯಪುರ, ಏಪ್ರಿಲ್ 30: ಮಹಿಳೆಯನ್ನು ಮುಂದೆ ಬಿಟ್ಟು ಅಕ್ರಮವಾಗಿ ರೆಮ್ಡೆಸಿವಿರ್ ಔಷಧ ಮಾರಾಟಕ್ಕೆ ಯತ್ನಿಸಿದ 5 ಜನ ಆರೋಪಿಗಳನ್ನು ವಿಜಯಪುರ ನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಆನಂದ ಸೋಹನಲಾಲ್ ರುಣವಾಲ್, ಆದಿತ್ಯ ಅಣ್ಣಾರಾವ್ ಜೋಶಿ, ವಿಜಯ ಪ್ರಭಾಕರ್ ದೇಶಪಾಂಡೆ, ಶೃತಿ ಮಹೇಶ ಹಡಪದ, ಮಹಮದ್ ಅಬ್ದುಲ್ ಆಲಂ ಮುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ಅಕ್ರಮವಾಗಿ ದುಪ್ಪಟ್ಟು ಹಣಕ್ಕೆ ರೆಮ್ಡೆಸಿವಿರ್ ಔಷಧ ಮಾರಾಟಕ್ಕೆ ಯತ್ನಿಸಿದ್ದು, ಬಂಧಿತರಿಂದ 3,490 ಮೌಲ್ಯದ ಎರಡು ರೆಮ್ಡೆಸಿವಿರ್ ಔಷಧೀಯ ಬಾಟಲ್ ಹಾಗೂ ನಾಲ್ಕು ಮೊಬೈಲ್ ಸೇರಿದಂತೆ ಸುಮಾರು 22,980 ರೂ.ಮೌಲ್ಯದ ವಸ್ತುಗಳು ವಿಜಯಪುರದ ಗೋಳಗುಮ್ಮಟ್ ಪೊಲೀಸರು ಜಪ್ತಿ ಮಾಡಿದ್ದಾರೆ.

5 held For Illegal Sale Of Remdesivir Vials In Vijayapura

ಗೋಳಗುಮ್ಮಟ್ ಪೊಲೀಸ್ ಇನಾಮದಾರಗೆ ರೆಮ್ಡೆಸಿವಿರ್ ಔಷಧ ನೀಡುವುದಾಗಿ ಆರೋಪಿ ಶೃತಿ ಹೇಳಿದ್ದು, ಇಲ್ಲಿನ ಮನಗೂಳಿ ಅಗಸಿ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಐವರ ಬಂಧನ ಮಾಡಿದ್ದಾರೆ. ಗೋಳಗುಮ್ಮಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+