ಡಿಕೆ ಶಿವಕುಮಾರ್ ವಿವಾದಾತ್ಮಕ ವ್ಯಕ್ತಿ ಎಂದ ಮಾಜಿ ಶಾಸಕ ಕೆಎನ್ ರಾಜಣ್ಣ

Recommended Video

      ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ಲೀಡರ್ ಹೀಗಾ ಹೇಳೋದು..? | KN Rajanna

      ತುಮಕೂರು, ಸೆಪ್ಟೆಂಬರ್ 9: ಡಿಕೆ ಶಿವಕುಮಾರ್ ವಿವಾದಾತ್ಮಕ ವ್ಯಕ್ತಿ, ಕೆಲವೊಮ್ಮೆ ವಿವಾದಗಳಿಂದ ಅನುಕೂಲವೂ ಆಗುತ್ತೆ, ಅನನುಕೂಲವೂ ಆಗುತ್ತೆ ಇದೀಗ ಅವರು ಅನನುಕೂಲ ಎದುರಿಸುತ್ತಿದ್ದಾರೆ ಎಂದು ಮಧುಗಿರಿ ಮಾಜಿ ಶಾಸಕ ಕೆಎನ್‌ ರಾಜಣ್ಣ ಹೇಳಿದ್ದಾರೆ.

      ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಒಬ್ಬ ಹಿರಿಯ ಮುಖಂಡ ಅವರು ರಾಜಕಾರಣದಲ್ಲಿ ವಿವಾದತ್ಮಕವಾದಂತಹ ವ್ಯಕ್ತಿ, ಕೆಲವೊಮ್ಮೆ ರಾಜಕಾರಣದಲ್ಲಿ ಕಾಂಟ್ರವರ್ಸಿ ಇದ್ರೆ ಬದುಕೋಕೆ ಸಾಧ್ಯ, ಕಾಂಟ್ರವರ್ಸಿ ರಾಜಕಾರಣದಲ್ಲಿ ಕೆಲವು ಬಾರಿ ಅನುಕೂಲನೂ ಆಗುತ್ತೆ ಅನಾನುಕೂಲನೂ ಆಗುತ್ತೆ.

      ಈಗ ಅನಾನುಕೂಲ ಎದುರಿಸುತ್ತಿದ್ದಾರೆ ಅಷ್ಟೆ. ಪ್ರಕರಣ ಕಾನೂನು ಚೌಕಟ್ನಲ್ಲಿರೋದರಿಂದ ಹೆಚ್ಚಿಗೆ ಮಾತಾನಾಡೋಕಾಗಲ್ಲ. ಕೆಲವರು ರಾಜಕೀಯ ಪ್ರೇರಿತ ಅಂತಾರೆ ಇನ್ನೂ ಕೆಲವರು ಉಪ್ಪುತಿಂದವ್ರು ನೀರು ಕುಡಿಯುತ್ತಾರೆ ಅಂತಾರೆ.

       DK Shivakumar Is A Controversial Man

      ಡಿಕೆ ಶಿ ನನ್ನ ಆತ್ಮೀಯ ವ್ಯಕ್ತಿ ಅವರಿಗೆ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದಿದ್ದಾರೆ. ಲಕ್ಷ್ಮಣ ಸವದಿ ಪರ ಕೆ.ಎನ್ ರಾಜಣ್ಣ ಮಾತನಾಡಿ, ಜಾಲತಾಣಗಳಲ್ಲಿ ಇಂಥಾ ವಿಡಿಯೋ ಬರುತ್ತಿರುತ್ತವೆ, ರೋಲ್ ಮಾಡೋವಾಗ ನೋಡಿರಬಹುದು.

      ಸವದಿ ನನ್ನ ಆತ್ಮೀಯ ವ್ಯಕ್ತಿ. ಸವದಿಗೆ ಮಕ್ಕಳು ಮೊಮ್ಮಕ್ಕಳು ಎಲ್ಲಾ ಇದ್ದಾರೆ..ಆತರ ವ್ಯಕ್ತಿತ್ವ ಅವರದಲ್ಲ ಏನೋ ಸುಮ್ಮನೆ ಹಾಗೆ ಬಂದಿರ್ಬಹುದು, ಯಾವಾಗಲೂ ಅದನ್ನೇ ನೋಡ್ಕೋಂಡಿರೋಕಾಗುತ್ತಾ.

      ಪದೆ ಪದೆ ಅವರನ್ನ ನೀಲಿ ಚಿತ್ರ ವೀಕ್ಷಿಸಿದವರು ಎಂದು ಹೇಳುವುದು ಸರಿಯಲ್ಲ, ಸಿದ್ದರಾಮಯ್ಯ ಹೇಳಿದ್ರು ಅಷ್ಟೆ ಯಾರೇ ಹೇಳಿದ್ರು ಅಷ್ಟೇ ಅದು ಸರಿಯಲ್ಲ‌ ಎಂದು ಗುಡುಗಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+