ಕೊರೊನಾ: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಕ್ಕೆ ನಿರ್ಧಾರ

ತಿರುವನಂತಪುರಂ, ಏಪ್ರಿಲ್ 22: ವಿಶ್ವವನ್ನೇ ಭಯಕ್ಕೆ ದೂಡಿರುವ ಕೊರೊನಾ ವೈರಸ್ ಕೇರಳದಲ್ಲೂ ತನ್ನ ಅಟ್ಟಹಾಸ ಮುಂದುವರೆಸಿದೆ.

ಕೇರಳ ಸರ್ಕಾರವು ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.ವಿವಿಧ ಹಂತಗಳಲ್ಲಿ ಈ ಹಣವನ್ನು ವಾಪಸ್ ನೀಡಲಾಗುವುದು, ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಳ್ಳಲಿದ್ದು ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಕಡಿತಗೊಳಿಸಿದ ಒಂದು ತಿಂಗಳ ಸಂಬಳವನ್ನು ನಿರ್ದಿಷ್ಟ ಅವಧಿಯ ನಂತರ ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಸಲ್ಲಿಸಿದೆ.

Kerala To Cut One Months Salary Of Govt Employees In 5 Instalments

ಕೇರಳದಲ್ಲಿ 408 ಮಂದಿಗೆ ಕೊರೊನಾ ಸೋಂಕಿದೆ. ಮೂರು ಮಂದಿ ಮೃತಪಟ್ಟಿದ್ದಾರೆ. ದೇಶಾದ್ಯಂತ 19,984 ಮಂದಿ ಕೊರೊನಾ ಸೋಂಕಿತರಿದ್ದು 3870 ಮಂದಿ ಗುಣಮುಖರಾಗಿದ್ದಾರೆ. 640 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಶ್ವದಾದ್ಯಂತ ಇದುವರೆಗೆ 25,65,059 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 6,86,634 ಮಂದಿ ಗುಣಮುಖರಾಗಿದ್ದಾರೆ.1,77,496 ಮಂದಿ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+