ಕೇರಳದಲ್ಲಿ ಮತ್ತೆ 3 ಕೊರೊನಾ ವೈರಸ್ ಪ್ರಕರಣ ಪತ್ತೆ
ತಿರುವನಂತಪುರಂ, ಮಾರ್ಚ್ 17: ಕೇರಳದಲ್ಲಿ ಮೂರು ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ.
Recommended Video
ಜಾಗತಿಕವಾಗಿ 1.5 ಲಕ್ಷ ಜನರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದು, ಈ ಸೋಂಕು ತಡೆಗಾಗಿ ಅನೇಕ ರಾಜ್ಯಗಳು ಮುಂದಾಗಿರುವುದರಿಂದ ದೇಶಾದ್ಯಂತ ಆಘೋಷಿತ ಬಂದ್ ವಾತವಾರಣದಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.
ಪ್ರಸ್ತುತ ಕೇರಳದಲ್ಲಿ ಒಟ್ಟು 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಈ ಸೋಂಕು ತಗುಲಿದವರ ಸಂಖ್ಯೆ 117ಕ್ಕೆ ಏರಿಕೆ ಆಗಿದೆ.

ಕರ್ನಾಟಕದಲ್ಲೂ ದಿನೇ ದಿನೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುಮುಖವಾಗಿ ಸಾಗುತ್ತಿದ್ದು, ಡೆಡ್ಲಿ ವೈರಸ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಸೋಮವಾರ ಬೆಂಗಳೂರಿನಲ್ಲಿ 32 ವರ್ಷದ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ವರದಿ ಬಂದಿದೆ. ಅಮೆರಿಕಾದಿಂದ ಆಗಮಿಸಿದ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಯಲ್ಲಿ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳ ದೃಢಪಟ್ಟಿದೆ.
ಈ ಸೋಂಕು ರಾಷ್ಟ್ರದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿಯೂ ಹೆಚ್ಚಿನ ಸಂಖ್ಯೆಯ ಜನರು ಈ ಸೋಂಕಿಗೆ ಒಳಗಾಗಿದ್ದು, ಜನರ ರಕ್ಷಣೆ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಿವೆ.












Click it and Unblock the Notifications