ಕೇರಳ ಚುನಾವಣೆಗೆ 6 ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ತಿರುವನಂತಪುರಂ, ಮಾರ್ಚ್ 17: ಕೇರಳ ವಿಧಾನಸಭಾ ಚುನಾವಣೆಗೆ ಬಾಕಿ ಉಳಿದ ಆರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಆರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ ಸಿ ವಿಷ್ಣುನಾಥ್ ಅವರು ಕುಂದಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡಲಾಗಿದೆ. ನೀಲಂಬೂರ್ ವಿಧಾನಸಭಾ ಕ್ಷೇತ್ರದಿಂದ ವಿ ವಿ ಪ್ರಕಾಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 140 ಕ್ಷೇತ್ರಗಳ ಪೈಕಿ 92 ಕಡೆಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಕಳೆದ ಮಾರ್ಚ್ 14ರಂದು 86 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದ ಆರು ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ಕಾಂಗ್ರೆಸ್ ಬಿಡುಗಡೆಗೊಳಿಸಿದ 6 ಅಭ್ಯರ್ಥಿಗಳ ಪಟ್ಟಿ:
ಅಭ್ಯರ್ಥಿ ಹೆಸರು - ಕ್ಷೇತ್ರ
ವಕೀಲ ಟಿ ಸಿದ್ದಿಕಿ - ಕಲ್ಪೆಟ್ಟ
ವಿ ವಿ ಪ್ರಕಾಶ್ - ನೀಲಂಬೂರು
ಫಿರೋಜ್ ಕುನ್ನುಪರಂಬಿಲ್ - ತವನೂರ್
ರಿಯಾಜ್ ಮುಕ್ಕೋಳಿ - ಪತ್ತಂಬಿ
ಪಿ ಸಿ ವಿಶ್ವನಾಥ್ - ಕುಂದಾರ
ವೀಣಾ ನಾಯರ್ - ವಟ್ಟಿಯೂರ್ ಕಾವು
ಕಾಂಗ್ರೆಸ್ ಯುವಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ. 92 ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 46 ಕಾಂಗ್ರೆಸ್ ಅಭ್ಯರ್ಥಿಗಳು 25-50 ವರ್ಷದೊಳಗಿನವರೇ ಆಗಿದ್ದಾರೆ. ಬಾಕಿ ಉಳಿದ ಶೇ.50ರಷ್ಟು ಕ್ಷೇತ್ರಗಳಲ್ಲಿ ಹಿರಿಯರಿಗೆ ಅವಕಾಶ ನೀಡಲಾಗಿದೆ.












Click it and Unblock the Notifications