ಕೇರಳದಲ್ಲಿ ಬೃಹದಾಕಾರದ ಹಲಸಿನ ಹಣ್ಣು, ಗಿನ್ನಿಸ್ ದಾಖಲೆಗೆ ರೆಡಿ
ತಿರುವನಂತಪುರಂ, ಮೇ 15: ಕೇರಳದ ರೈತರೊಬ್ಬರ ತೋಟದಲ್ಲಿ ಬೃಹತ್ ಆಕಾರದ ಹಲಸಿನ ಹಣ್ಣು ದೊರೆತಿದೆ.
ಹಲಸಿನ ಹಣ್ಣು ಬರೋಬ್ಬರಿ 51.4 ಕೆಜಿಯಷ್ಟು ತೂಕವಿದೆ ಎನ್ನಲಾಗಿದೆ. ಹೀಗಾಗಿ ಅತಿ ಹೆಚ್ಚು ಭಾರವುಳ್ಳ ಹಲಸಿನಹಣ್ಣು ಎಂದು ಗಿನ್ನಿಸ್ ದಾಖಲೆಗೆ ಕಳುಹಿಸಲು ಮುಂದಾಗಿದೆ.
ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿದ ವಿಟ್ಲದ ಅಪರ್ಣಾ
ಈ ಹಿಂದೆ 42.7 ಕೆಜಿ ಅತಿ ಹೆಚ್ಚು ಭಾರವಿರುವ ಹಲಸಿನ ಹಣ್ಣು ಎಂದು ಗಿನ್ನಿಸ್ ದಾಖಲೆಯಲ್ಲಿ ದಾಖಲಾಗಿತ್ತು. ಇದೀಗ ಅದಕ್ಕಿಂತ ಸುಮಾರು 10 ಕೆಜಿ ಹೆಚ್ಚಿನ ತೂಕದ ಹಲಸಿನ ಹಣ್ಣು ದೊರೆತಿದೆ.
ಯಲಮುಳಕಲ್ಲು ಪ್ರದೇಶದಲ್ಲಿರುವ ತೋಟದಲ್ಲಿ ಹಣ್ಣು ಲಭ್ಯವಾಗಿದೆ. ಈ ಹಣ್ಣು 51.4 ಕೆಜಿಯಷ್ಟಿದ್ದು, 97 ಸೆಂ.ಮೀ ಉದ್ದವಿದೆ.
ಗೂಗಲ್‌ನಲ್ಲಿ ಹುಡುಕಿದಾಗ ಪುಣೆಯಲ್ಲಿ 42.72 ಗಾತ್ರದ ಹಲಸಿನಹಣ್ಣು ಇದ್ದಿದ್ದು ತಿಳಿಯಿತು ಹಾಗಾಗಿ ಗಿನ್ನಿಸ್ ದಾಖಲೆಗೆ ನೀಡುತ್ತಿದ್ದೇನೆ ಎಂದು ಮಾಲೀಕರು ತಿಳಿಸಿದ್ದಾರೆ.