ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ
ಜಮ್ಮ ಮತ್ತು ಕಾಶ್ಮೀರ, ಜನವರಿ 26: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇಂದು ನಡೆದ ಎನ್‌ಕೌಂಟ್‌ನಲ್ಲಿ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಸದೆಬಡೆದಿದೆ. ಗಣರಾಜ್ಯೋತ್ಸವಕ್ಕೆ ಸಿಕ್ಕ ಉಡುಗೊರೆಯಾದಂತಾಗಿದೆ.
ಉಗ್ರರು ಶಾಲಾ ಕಟ್ಟಡವೊಂದರಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಶನಿವಾರ ಮುಂಜಾನೆಯಿಂದಲೇ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು.
ಈ ವೇಳೆ ಉಗ್ರರು ಯೋಧರ ಕಡೆಗೆ ಗುಂಡು ಹಾರಿಸಿದರು.
#Visuals: Encounter underway between terrorists and security forces in Khonmoh, Srinagar (Visuals deferred by unspecified time) pic.twitter.com/gxLased8PF
— ANI (@ANI) January 26, 2019
ಪ್ರತಿಯಾಗಿ ಸೈನಿಕರು ಉಗ್ರರ ಮೇಲೆ ಗುಂಡಿನ ಮಳೆ ಸುರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಉಗ್ರರು ಹತರಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಸೈನಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈನಿಕರು ಹಾಗೂ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಯೋಧರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಸಿಆರ್‌ಪಿಎಫ್ ಯೋಧರು ಹಾಗೂ ಇಬ್ಬರು ಸೈನಿಕರು ಎನ್‌ಕೌಂಟರ್ ವೇಳೆ ಗಾಯಗೊಂಡಿದ್ದಾರೆ.












Click it and Unblock the Notifications