ಬುದ್ಗಾಮ್‌ನಲ್ಲಿ ಮಿಗ್-21 ಯುದ್ಧ ವಿಮಾನ ಪತನ, ಇಬ್ಬರು ಪೈಲಟ್ ಸಾವು
Recommended Video

ಜಮ್ಮು ಮತ್ತು ಕಾಶ್ಮೀರ, ಫೆಬ್ರವರಿ 27: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎಂದು ಅಂದಾಜಿಸಲಾಗಿದೆ.
ಬುದ್ಗಾಮ್‌ನಲ್ಲಿ ಗಸ್ತು ತಿರುಗುವಾಗ ಈ ಘಟನೆ ನಡೆದಿದೆ. 2018ರ ಜುಲೈ 18ರಂದೂ ಕೂಡ ಇಂಥದ್ದೇ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು.
ಬುದ್ಗಾಮ್‌ನಲ್ಲಿ ಗಸ್ತು ತಿರುಗುವಾಗ ಈ ಘಟನೆ ನಡೆದಿದೆ. 2018ರ ಜುಲೈ 18ರಂದೂ ಕೂಡ ಇಂಥದ್ದೇ ಘಟನೆಯೊಂದು ಪಂಜಾಬ್‌ನಲ್ಲಿ ನಡೆದಿತ್ತು.

ಮಂಗಳವಾರವಷ್ಟೇ ಮಿರಾಜ್ ಯುದ್ಧ ವಿಮಾನಗಳು ಪಾಕಿಸ್ತಾನದ ಉಗ್ರರ ಸ್ವರ್ಗ ಎಂದೇ ಕರೆಯುವ ಬಾಲಾಕೋಟ್‌ನಲ್ಲಿ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದರು.
ಈಗಾಗಲೇ ಪಾಕ್ ನ ಮೂರು ಜೆಟ್ ವಿಮಾನಗಳು ಭಾರತೀಯ ವಾಯು ಸೇನೆಯ ಗಡಿ ಉಲ್ಲಂಘಟನೆ ಮಾಡಿದೆ.
ಮಿಗ್ 21 ವಿಮಾನ ಪತನವಾಗಿಲ್ಲ, ಸರಕು ಸಾಗಣೆ ಹೆಲಿಕಾಪ್ಟರ್ ಮಿಗ್ 17 ಪತನವಾಗಿದೆ ಎಂದು ಭಾರತೀಯ ವಾಯು ಸೇನೆ ಸ್ಪಷ್ಟನೆ ನೀಡಿದೆ.
ಇನ್ನೊಂದೆಡೆ ಪಾಕಿಸ್ತಾನವು ಒಬ್ಬ ಪೈಲಟ್‌ನ್ನು ಬಂಧಿಸಿದ್ದೇವೆ ಎಂದು ವರದಿ ಮಾಡುತ್ತಿದೆ. ಆದರೆ ವಿಮಾನ ಪತನವಾದ ಜಾಗದಲ್ಲಿ ಎರಡು ಮೃತದೇಹ ಪತ್ತೆಯಾಗಿದ್ದು, ಪಾಕಿಸ್ತಾನದ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಭಾರತ ತಳ್ಳಿ ಹಾಕಿದೆ.












Click it and Unblock the Notifications