ಟ್ರಕ್‌ನಲ್ಲಿ ಅಡಗಿಕುಳಿತಿದ್ದ ಪಾಕಿಸ್ತಾನದ 3 ಉಗ್ರರನ್ನು ಕೊಂದ ಪೊಲೀಸರು
ಜಮ್ಮು ಕಾಶ್ಮೀರ, ಜನವರಿ 31: ಟ್ರಕ್‌ನಲ್ಲಿ ಅಡಗಿಕುಳಿತಿದ್ದ ಮೂವರು ಉಗ್ರರನ್ನು ಪೊಲೀಸರು ಹತ್ಯೆಗೈದಿದ್ದಾರೆ.
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಹೋಗುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಟ್ರಕ್ ಒಂದನ್ನು ತಪಾಸಣೆಗೆಂದು ಪೊಲೀಸರು ತಡೆದಿದ್ದರು. ತಕ್ಷಣವೇ ಟ್ರಕ್‌ನಲ್ಲಿದ್ದ ಉಗ್ರರಿಂದ ಗುಂಡಿನ ಸುರಿಮಳೆ ಆರಂಭವಾಗಿತ್ತು.

ಬಳಿಕ ಪೊಲೀಸರು ಟ್ರಕ್‌ನಲ್ಲಿದ್ದ ಮೂವರು ಉಗ್ರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.












Click it and Unblock the Notifications