ಜಮ್ಮುವಿನಲ್ಲಿ ಪಾಕ್‌ ಗುಂಡಿನ ದಾಳಿಗೆ 9 ತಿಂಗಳ ಕೂಸು ಸೇರಿ ಮೂವರ ಬಲಿ

Recommended Video

      Surgical Strike 2: ಜಮ್ಮುವಿನಲ್ಲಿ ಪಾಕ್‌ ಗುಂಡಿನ ದಾಳಿಗೆ 9 ತಿಂಗಳ ಕೂಸು ಸೇರಿ ಮೂವರ ಬಲಿ

      ಜಮ್ಮು ಮತ್ತು ಕಾಶ್ಮೀರ, ಮಾರ್ಚ್ 2: ಪಾಕ್‌ನಲ್ಲಿ ಸಿಲುಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಭಾರತಕ್ಕೆ ಬಂದಿರುವ ಸಂಭರಮದಲ್ಲಿದ್ದರೆ ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ.

      ಗಡಿನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪುಂಡಾಟ ಮುಂದುವರಿದಿದೆ. ರಜೌರಿ, ಪೂಂಚ್​ ಮತ್ತು ಮೇಂದಾರ್​ ವಲಯಗಳಲ್ಲಿ ಪಾಕ್​ ಯೋಧರು ಗುಂಡಿನ ದಾಳಿ ಮುಂದುವರಿಸಿದ್ದಾರೆ. ನಾಗರಿಕ ವಸತಿ ಪ್ರದೇಶದ ಮೇಲೆ ಶೆಲ್​ ದಾಳಿ ಮಾಡುತ್ತಿದ್ದಾರೆ.

      ರುಬಾನಾ ಕೌಸರ್​ (24), ಫಜಾನ್​ (5) ಮತ್ತು ಶಬನಂ (9 ತಿಂಗಳ ಮಗು) ಮೃತರು. ರುಬಾನಾ ಕೌಸರ್​ ಪತಿ ಮೊಹಮ್ಮದ್​ ಯೂನಿಸ್​ ಗಂಭೀರವಾಗಿ ಗಾಯಗೊಂಡಿದ್ದಾರೆ.

      Three of a family killed as Pakistan continues heavy shelling in Jammu and kashmir

      ಮನ್​ಕೋಟ್​ನಲ್ಲಿ ನಸೀಂ ಅಖ್ತರ್​ ಎಂಬ ಮಹಿಳೆಗೂ ಪಾಕ್​ ಯೋಧರು ಸಿಡಿಸಿದ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದಲ್ಲದೆ ಕೃಷ್ಣಘಾಟಿ ಮತ್ತು ಬಾಲಕೋಟ್​ ಪ್ರದೇಶದಲ್ಲಿ ಕೂಡ ಪಾಕ್​ ಯೋಧರು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದಾರೆ ಎನ್ನಲಾಗಿದೆ.

      ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ನಾಗರಿಕ ವಸತಿ ಪ್ರದೇಶದ ಮೇಲೆ ತೀವ್ರತರದ ದಾಳಿ ನಡೆಸಿದ ಪಾಕ್​ ಯೋಧರು, ಮಾರ್ಟಾರ್​ ಬಾಂಬ್​ಗಳನ್ನು ಸಿಡಿಸುತ್ತಿದ್ದಾರೆ. ಹೋವಿಟ್ಜರ್​ 105 ಎಂಎಂ ಸೇರಿ ಭಾರಿ ಗನ್​ಗಳನ್ನು ಬಳಸಿ ಗುಂಡಿನ ಸುರಿಮಳೆಗೈಯ್ಯುತ್ತಿದ್ದಾರೆ.

      ಈ ದಾಳಿಯಲ್ಲಿ ಪೂಂಚ್​ನ ಸಲ್ಟೋರಿ ಎಂಬಲ್ಲಿ 9 ತಿಂಗಳ ಹೆಣ್ಣು ಮಗು, 5 ವರ್ಷದ ಬಾಲಕ ಹಾಗೂ ಒಬ್ಬ ಮಹಿಳೆ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+