ಕೊಲೆಗಡುಕ ಆದಿಲ್ ಹತ್ತೇ ಕಿಮೀ ದೂರದಲ್ಲಿ ಹೊಂಚು ಹಾಕಿ ಕುಳಿತಿದ್ದ!

Recommended Video

      Pulwama : ಯೋಧರ ಮೇಲಿನ ದಾಳಿಗೂ ಮುನ್ನ ಉಗ್ರ ಹೇಳಿದ್ದೇನು ಗೊತ್ತಾ? | Oneindia Kannada

      ಶ್ರೀನಗರ, ಫೆಬ್ರವರಿ 15: ಜಮ್ಮುವಿನಿಂದ ಶ್ರೀನಗರದತ್ತ 78 ಬಸ್‌ನಲ್ಲಿ ತೆರಳುತ್ತಿದ್ದ ಯೋಧರನ್ನು ಕೊಲ್ಲಲು ಯಮನಂತೆ ಕೊಲೆಗಡುಕ ಆದಿಲ್ ಕೇವಲ ಹತ್ತೇ ಕಿ.ಮೀ ಅಂತದಲ್ಲಿ ಹೊಂಚು ಹಾಕಿ ಕುಳಿತಿದ್ದ.

      ಬಸ್‌ಗಳಲ್ಲಿ 2547 ಸಿಆರ್‌ಪಿಎಫ್ ಯೋಧರು ಬರುತ್ತಿದ್ದಂತೆಯೇ 350 ಕೆಜಿ ಸ್ಫೋಟಕಗಳನ್ನು ಹೊತ್ತ ವಾಹನವನ್ನು 42 ಮಂದಿ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ.

      ಸರ್ಜಿಕಲ್ ದಾಳಿ ಬಳಿಕ ದೆಹರಿ ಬಿಲ ಸೇರಿಕೊಂಡಿದ್ದ ಪಾಕ್ ಉಗ್ರರು ಮತ್ತೊಮ್ಮೆ ಬಾಲ ಬಿಚ್ಚಿದ್ದಾರೆ. ಆದಿಲ್ ಅಹಮದ್ ಒಂದು ವರ್ಷದ ಹಿಂದೆ ಪಾಕಿಸ್ತಾನ ಮೂಲದ ಉಗ್ರರ ಪಡೆಯನ್ನು ಸೇರಿಕೊಂಡಿದ್ದ. ಕಾಶ್ಮೀರದ ಗಾಂಧಿಭಾಗದ ಮೂಲದವನಾದ ಆದಿಲ್ ಶಾಲೆಯಿಂದ ಹೊರಗುಳಿದಿದ್ದ, 2017ರಲ್ಲಿ ಶಾಲೆ ಬಿಟ್ಟಿದ್ದ ಅದಾದ ಬಳಿಕ ಒಂದು ವರ್ಷ ಬಿಟ್ಟು ಮಸೂದ್ ಅಜರ್ ನೇತೃತ್ವದ ಉಗ್ರ ಸಂಘಟನೆ ಸೇರಿದ್ದ. ಆತ್ಮಾಹುತಿ ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಹಾಗೂ ಅವನ ಫೋಟೊಗಳು ಲಭ್ಯವಾಗಿದೆ.

      Terrorist Lived 10 km From Site Where He Killed 40 Soldiers In Kashmir

      ಹವಾಮಾನ ವೈಪರೀತ್ಯದ ಕಾರಣಕ್ಕೆ ಎರಡು ದಿನಗಳಿಂದ ಶ್ರೀನಗರ್- ಜಮ್ಮು ಹೆದ್ದಾರಿ ಮುಚ್ಚಲಾಗಿತ್ತು. ಆದ್ದರಿಂದ ಏಕ ಕಾಲಕ್ಕೆ ದೊಡ್ಡ ಸಂಖ್ಯೆಯಲ್ಲಿ ಯೋಧರು ಪ್ರಯಾಣಿಸುತ್ತಿದ್ದರು. ಈ ಸೇನಾ ವಾಹನ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಹೊರಟಿತ್ತು. ಅತ್ಮಹತ್ಯಾ ದಾಳಿಕೋರನು ಬಸ್ಸಿಗೆ ಎದುರಿನಿಂದ ಬಂದು ಗುದ್ದಿಸಿದ್ದ. ಅದರಲ್ಲಿ 42 ಮಂದಿ ಯೋಧರು ಹುತಾತ್ಮರಾದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+