ಜಮ್ಮು ಕಾಶ್ಮೀರದ 5 ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಆರಂಭ

ಶ್ರೀನಗರ, ಆಗಸ್ಟ್ 29: ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬೆನ್ನಲ್ಲೇ ಸ್ಥಗಿತಗೊಂಡಿದ್ದ ಮೊಬೈಲ್ ಸೇವೆ ಇಂದಿನಿಂದ ಆರಂಭಗೊಂಡಿದೆ.

ವಿಧಿ 370ರದ್ದುಗೊಳಿಸಿದ್ದರಿಂದ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಹಿಂಪಡೆಯಲಾಗಿತ್ತು. ಹಾಗೆಯೇ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.

ಇಂಟರ್‌ನೆಟ್, ಮೊಬೈಲ್ ಸೇವೆ ಇಲ್ಲದೆ ಜನರು ಪರದಾಡುವಂತಾಗಿದ್ದು, ಫೋನ್‌ಬೂತ್‌ಗಳ ಮುಂದೆ ದಿನಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದಿನಿಂದ ಮೊಬೈಲ್ ಸೇವೆ ಆರಂಭಗೊಂಡಿದ್ದು ಸಾರ್ವಜನಿಕರು ಸ್ವಲ್ಪ ನಿರಾಳರಾಗಿದ್ದಾರೆ.

ಜಮ್ಮು-ಕಾಶ್ಮೀರ ಮತ್ತು ಲಡಾಕ್ ಗೆ ನೀಡಲಾಗಿದ್ದ ಸಂವಿಧಾನ ವಿಧಿ 370ನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಕಳೆದ ಆಗಸ್ಟ್ 4ರಂದು ಮಧ್ಯರಾತ್ರಿಯಿಂದ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಜಮ್ಮು-ಕಾಶ್ಮೀರ ಮತ್ತು ಲಡಾಕ್ ನಲ್ಲಿ ಜಿಲ್ಲಾಡಳಿತ ಅಲ್ಲಿನ ವಾಸ್ತವ ಪರಿಸ್ಥಿತಿ ಬಗ್ಗೆ ನಿಗಾವಹಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ಇರಿಸಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಆರಂಭ

ಯಾವ್ಯಾವ ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಆರಂಭ

ಜಮ್ಮು ಕಾಶ್ಮೀರದ ಡೋಡಾ, ಕಿಷ್ತ್‌ವಾರ್, ರಾಂಬನ್ ಜಿಲ್ಲೆ, ರಜೌರಿ, ಪೂಂಚ್ ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಆರಂಭಗೊಂಡಿದೆ.ಆಗಸ್ಟ್ 5ರಿಂದ ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿತ್ತು.

ಇಂಟರ್‌ನೆಟ್ ಸೇವೆ ಸಧ್ಯಕ್ಕಿಲ್ಲ

ಇಂಟರ್‌ನೆಟ್ ಸೇವೆ ಸಧ್ಯಕ್ಕಿಲ್ಲ

ಮೊಬೈಲ್ ಸೇವೆ ಮಾತ್ರ ಆರಂಭಗೊಂಡಿದೆ, ಆದರೆ ಇಂಟರ್‌ನೆಟ್ ಸೇವೆ ಸಧ್ಯಕ್ಕೆ ಆರಂಭಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆ ಪ್ರದೇಶದಲ್ಲಿ ಸ್ಥಳೀಯರಿಗೊಂತಲೂ ಉಗ್ರರು, ಪಾಕಿಸ್ತಾನಿಗಳೇ ಹೆಚ್ಚು ಮೊಬೈಲ್ ಇಂಟರ್‌ನೆಟ್ ಬಳಕೆ ಮಾಡುವ ಕಾರಣ, ಯಾವುದೇ ಅನಾಹುತಗಳಾಗದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗಾಗಿ ಇನ್ನೂ ಸ್ವಲ್ಪ ದಿನ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅನಗತ್ಯ ವದಂತಿಗಳು ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ

ಅನಗತ್ಯ ವದಂತಿಗಳು ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ

ಇಂತಹ ಅನಗತ್ಯ ವದಂತಿಗಳು ಹರಡದಂತೆ, ಗೊಂದಲ, ಆತಂಕಕಾರಿ ವಾತಾವರಣ ಸೃಷ್ಟಿಯಾಗಬಾರದೆಂದು ಮೊಬೈಲ್ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಇಂದು ಮೊಬೈಲ್ ಸೇವೆ ಆರಂಭವಾಗಿದ್ದು ಇಂಟರ್‌ನೆಟ್‌ ಸೇವೆ ಸದ್ಯದಲ್ಲಿಯೇ ಆರಂಭವಾಗಲಿದೆ. ಬುದ್ಗಾಮ್, ಸೋನಮಾರ್ಗ್ ಮತ್ತು ಮನಿಗಮ್ ಪ್ರದೇಶಗಳಲ್ಲಿ, ಉತ್ತರ ಕಾಶ್ಮೀರದ ಗುರೆಝ್, ತಂಗ್ ಮಾರ್ಗ್, ಉರಿ ಕೆರನ್ ಕರ್ನಾ ಮತ್ತು ಟಂಗ್ ದಾರ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆ ಮರು ಆರಂಭವಾಗಿದೆ. ದಕ್ಷಿಣ ಕಾಶ್ಮೀರದ ಖ್ವಾಜಿಗುಂಡ್ ಮತ್ತು ಪಹಲ್ಗಾಮ್ ಪ್ರದೇಶಗಳಲ್ಲಿ ಕೂಡ ಸ್ಥಿರ ದೂರವಾಣಿ ಸೇವೆಗಳನ್ನು ಮರು ಆರಂಭಿಸಲಾಗಿದೆ.

ಹಂತ ಹಂತವಾಗಿ ನಿಷೇಧಾಜ್ಞೆ ವಾಪಸ್

ಹಂತ ಹಂತವಾಗಿ ನಿಷೇಧಾಜ್ಞೆ ವಾಪಸ್

ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಹೇರಿದ್ದ ನಿಷೇಧಾಜ್ಞೆಗಳಲ್ಲಿ ಹಂತಹಂತವಾಗಿ ಹಿಂತೆಗೆದುಕೊಳ್ಳುತ್ತಾ ಒಂದೊಂದೇ ಸೇವೆಗಳನ್ನು ಮರು ಆರಂಭಗೊಳಿಸುತ್ತಾ ಬಂದಿದೆ. ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಎಂದಿನಂತೆ ಕಾರ್ಯನಿರ್ವಹಣೆ ಆರಂಭಿಸುವಂತೆ ಆದೇಶ ಹೊರಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+