ಕುಲ್ಗಾಮ್‌ನಲ್ಲಿ ಉಗ್ರರ ಅಡಗುದಾಣದ ಮೇಲೆ ದಾಳಿ, ಓರ್ವ ಉಗ್ರ ವಶಕ್ಕೆ
ಶ್ರೀನಗರ, ಮಾರ್ಚ್ 13: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರ ಮತ್ತೊಂದು ಅಡಗುದಾಣವನ್ನು ಯೋಧರು ಪತ್ತೆ ಹಚ್ಚಿ ದಾಳಿ ನಡೆಸಿದ್ದು, ಓರ್ವ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಶಂಕಿತ ಉಗ್ರನನ್ನು ಸ್ಥಳೀಯ ನಿವಾಸಿ ಹಾಗೂ ಅಡಗುದಾಣದ ಮಾಲೀಕ ಅಯೂಬ್ ರಾಥರ್ ಎಂದು ಗುರುತಿಸಲಾಗಿದೆ.
ಸೇನಾ ಮೂಲಗಳು ತಿಳಿಸಿರುವಂತೆ ಅಡಗುದಾಣದಲ್ಲಿದ್ದ ಗ್ರೆನೇಡ್ ಗಳು, ಎಕೆ 47 ಗನ್ ಗಳು, ಬಾಂಬ್ ಗಳು ಮತ್ತು ಇತರೆ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಶ್ಮೀರದ ಕುಲ್ಗಾಮ್ ನ ಯರ್ಲಪೋರಾ ಪ್ರದೇಶದಲ್ಲಿ ಉಗ್ರರ ಅಡಗುದಾಣವಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬುಧವಾರ ದಾಳಿ ನಡೆಸಿದ ಸೇನೆ ಅಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ಅಲ್ಲಿದ್ದ ಓರ್ವ ಶಂಕಿತ ಉಗ್ರಗಾಮಿಯನ್ನು ವಶಕ್ಕೆ ಪಡೆದಿದೆ.












Click it and Unblock the Notifications