ಪುಲ್ವಾಮಾ ದಾಳಿ ಸಾಮಗ್ರಿ ಅಮೆಜಾನ್‌ನಿಂದ ಖರೀದಿಸಿದ್ದ ಉಗ್ರರು
ನವದೆಹಲಿ, ಮಾರ್ಚ್ 7: ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಕುರಿತು ದಿನದಿಂದ ದಿನಕ್ಕೆ ಅನೇಕ ಸತ್ಯಗಳು ಹೊರಬೀಳುತ್ತಿವೆ.
ಪುಲ್ವಾಆ ದಾಳಿಗೆ ಬೇಕಾದ ಸಾಮಗ್ರಿಗಳನ್ನು ಉಗ್ರರು ಅಮೆಜಾನ್ ಮೂಲಕ ತರಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
40 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಶ್ರೀನಗರದ ಬಾಗ್ ಎ ಮೆಹತಾಬ್ ನಿವಾಸಿ ವೈಝ್ ಉಲ್ ಇಸ್ಲಾಮ್ ಹಾಗೂ ಪುಲ್ವಾಮಾ ನಿವಾಸಿ ಮೊಹಮ್ಮದ್ ಅಬ್ಬಾಸ್ ಎಂದು ತಿಳಿದುಬಂದಿದೆ.
ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
ವಿಚಾರಣೆಯ ವೇಳೆ ಈ ವೈಝ್ ಉಲ್ ಇಸ್ಲಾಂ, ತಾನು ಇಡಿ ಬಾಂಬ್ ತಯಾರಿಕೆಗೆ ಬೇಕಾದ ರಾಸಾಯನಿಕ ಸಾಮಗ್ರಿಗಳು, ಬ್ಯಾಟರಿಗಳು ಮತ್ತು ಇತರೆ ಉಪಕರಣಗಳನ್ನು ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಉಗ್ರನ ನಿರ್ದೇಶನದಂತೆ ಅಮೆಜಾನ್‌ನಲ್ಲಿ ಆನ್‌ಲೈನ್ ಮೂಲಕ ತರಿಸಿಕೊಂಡಿದ್ದೆ ಎಂಬ ಸಂಗತಿ ಬಹಿರಂಗಗೊಂಡಿದೆ.
ಇದಕ್ಕೂ ಮುನ್ನ ಬಾಂಬ್‌ರ್‌ಗೆ ಆಶ್ರಯ ನೀಡಿದ್ದ ಆರೋಪದ ಮೇರೆಗೆ ತಂದೆ ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಪುಲ್ವಾಮಾ ದಾಳಿಯ ಭಾಗವಾಗಿ ತರಿಸಲಾದ ವಸ್ತುಗಳನ್ನು ತಾನೇ ಸ್ವತಃ ಜೈಷ್ ಉಗ್ರರಿಗೆ ತಲುಪಿಸಿದ್ದಾಗಿಯೂ ಹೇಳಿದ್ದಾನೆ.












Click it and Unblock the Notifications