ಕಳೆದ 3 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸತ್ತ ಉಗ್ರರೆಷ್ಟು?ಹುತಾತ್ಮರಾದ ಸೈನಿಕರೆಷ್ಟು?
ಜಮ್ಮು ಕಾಶ್ಮೀರ, ಜೂನ್ 26: ಕೆಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 733 ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ ಎಂದು ಗೃಹಸಚಿವಾಲಯ ಮಾಹಿತಿ ನೀಡಿದೆ.
ಗೃಹ ಸಚಿವ ಜಿ ಕಿಶನ್ ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ 2019ರ ಜೂನ್ 16ರವರೆಗೆ 113 ಉಗ್ರರನ್ನು ಸದೆಬಡಿಯಲಾಗಿದೆ. 2018ರಲ್ಲಿ 257 ಉಗ್ರರು, 2017ರಲ್ಲಿ 213, 2016ರಲ್ಲಿ 150 ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದು ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ದೇಶದಿಂದ ಭಯೋತ್ಪಾದನೆಯನ್ನು ತೊಲಗಿಸಲು ಸೇನೆ ನಿತ್ಯವೂ ಕಷ್ಟಪಡುತ್ತಿದೆ. ಹಾಗೆಯೇ ಭಯೋತ್ಪಾದಕರಿಗೆ ಯಾರು ಬೆಂಬಲ ನೀಡುತ್ತಿದ್ದಾರೆ ಎನ್ನುವ ಕುರಿತು ಕೂಡ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.

2016-2018ರವರೆಗೆ 253 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.2016ರಲ್ಲಿ 82, 2017ರಲ್ಲಿ 70, 2018ರಲ್ಲಿ 91 ಸೈನಿಕರು ಹುತಾತ್ಮರಾಗಿದ್ದಾರೆ.












Click it and Unblock the Notifications