ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ: 5 ಉಗ್ರರು ವಶಕ್ಕೆ
ಶ್ರೀನಗರ, ಮೇ 16: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಲ್ಲಿ ಉಗ್ರರ ಅಡಗುತಾಣಗಳ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Recommended Video
ಆ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಬುದ್ಗಾಂನಲ್ಲಿ ಉಗ್ರರ ಅಡಗುತಾಣಗಳಿರುವುದಾಗಿ ಖಚಿತ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ 53 ಆರ್ಆರ್ ಹಾಗೂ 153ನೇ ಸಿಆರ್'ಪಿಎಫ್ ಬೆಟಾಲಿಯನ್ ಪಡೆಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಗಿತ್ತು.
ನಾಲ್ವರಲ್ಲಿ ರೆಹ್ಮಾನ್ ಲೋನಾ ಎಂಬಾದ ಎಲ್ಇಟಿ ಉಗ್ರರು ನೆಲೆಯೂರಲು ಅವಕಾಶ ಮಾಡಿಕೊಡುತ್ತಿದ್ದ ಎಂದು ತಿಳಿದುಬಂದಿದೆ. ಕೆಲ ತಿಂಗಳಿನಿಂದಲೂ ಈ ಗುಂಪು ಅಡಗಿಕುಳಿತು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.

ಬುದ್ಗಾಂನ ಗ್ರಾಮವೊಂದರಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ನಾಯಕನೊಂದಿಗೆ ನಂಟು ಹೊಂದಿದ್ದ ಜಹೂರ್ ವಾನಿ ಎಂಬಾತನನ್ನು ಬಂಧಿಸುವಲ್ಲಿ ಭದ್ರತಾಪಡೆಗಳು ಯಶಸ್ವಿಯಾಗಿವೆ.
ಉಳಿದಂತೆ ಬಂಧನಕ್ಕೊಳಗಾಗಿರುವ ನಾಲ್ವರನ್ನು ಯೂನಿಸ್ ಮಿರ್, ಅಸ್ಲಾಂ ಶೇಖ್, ಪರ್ವೈಜ್ ಶೇಖ್ ಹಾಗೂ ರೆಹ್ಮಾನ್ ಲೋನೆ ಎಂದು ಗುರ್ತಿಸಲಾಗಿದ್ದು, ಈ ನಾಲ್ವರೂ ಬುದ್ಗಾಂನ ಖಾನ್ಸೈಬ್ ಗ್ರಾಮದ ನಿವಾಸಿಗಳೇ ಆಗಿದ್ದಾರೆಂದು ಹೇಳಲಾಗುತ್ತಿದೆ.












Click it and Unblock the Notifications