ಪುಲ್ವಾಮಾದಲ್ಲಿ ಸುಧಾರಿತ ಬಾಂಬ್ ಸ್ಫೋಟ, ಓರ್ವ ನಾಗರಿಕನಿಗೆ ಗಾಯ
ಪುಲ್ವಾಮಾ, ಮಾರ್ಚ್ 2: ಸುಧಾರಿತ ಬಾಂಬ್ ಸ್ಫೋಟ ಸಂಭವಿಸಿದ ಓರ್ವ ನಾಗರಿಕ ಗಾಯಗೊಂಡಿರುವ ಘಟನೆ ಪುಲ್ವಾಮಾದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಉಗ್ರರು ತಮ್ಮ ಅಟ್ಟಹಾಸವನ್ನು ಮುಂದುವರೆಸಿದ್ದಾರೆ. ಪಾಕ್ ಶಾಂತಿ ಮಂತ್ರಿ ಪಠಿಸಿದಂತೆ ನಟಿಸಿ ಇದೀಗ ಮತ್ತೊಮ್ಮೆ ಬಾಲ ಬಿಚ್ಚಿದ್ದಾರೆ. ಶುಕ್ರವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 9 ತಿಂಗಳ ಹಸುಗೂಸು ಸೇರಿದಂತೆ ಮೂವರು ಮೃತಪಟ್ಟಿದ್ದರು.
ಇದೀಗ ಪುಲ್ವಾಮಾದ ತ್ರಾಲ್‌ನಲ್ಲಿ ಸುಧಾರಿತ ಬಾಂಬ(ಐಇಡಿ) ಸ್ಫೋಟಗೊಂಡಿದ್ದು ಓರ್ವ ನಾಗರಿಕನಿಗೆ ಗಂಭೀರ ಗಾಯಗಳಾಗಿವೆ.

ಸೇನಾ ಪಡೆಯನ್ನು ಗುರಿಯಾಗಿಟ್ಟುಕೊಂಡು ಸ್ಫೋಟಿಸಿದ್ದಾರೆ, ಹಾಗೆಯೇ ಭಾರತದ ಸೈನಿಕರಿಗೆ ನೀಡುವ ಪಡಿತರದಲ್ಲಿ ವಿಷವನ್ನು ಬೆರೆಸಲು ಪಾಕ್ ಏಜೆಂಟ್‌ಗಳು ಷಡ್ಯಂತ್ರ ರೂಪಸಿದ್ದರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.












Click it and Unblock the Notifications