WPL 2026 RCB: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡುವ ತಂಡ ಇದೇ ನೋಡಿ
WPL 2026 RCB: ಡಬ್ಲ್ಯೂಪಿಎಲ್ 2026 ಕೊನೇ ಘಟಕ್ಕೆ ಬಂದು ತಪುಲಿದ್ದು, ಈಗಾಗಲೇ ಆರ್‌ಸಿಬಿ ನೇರ ಫೈನಲ್ ಪ್ರವೇಶ ಪಡೆದಿದೆ. ಇನ್ನೂ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯಾವ ತಂಡ ಕಾಣಿಸಿಕೊಳ್ಳಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2024ರಲ್ಲಿ ಟ್ರೋಫಿ ಗೆದ್ದು, 2025ರಲ್ಲಿ ಕೈತಪ್ಪಿತ್ತು. ಮೊದಲು 2023 ಹಾಗೂ 2025ರಲ್ಲಿ ಎರಡು ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿತ್ತು. ಇನ್ನೂ ಈ ಬಾರಿ 2026ರ ನಾಲ್ಕನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಲೇಬೇಕು ಎನ್ನುವ ಹಠದಲ್ಲಿ ಬೆಂಗಳೂರು ತಂಡ ಇದೆ. ಈಗಾಗಲೇ ಸ್ಮೃತಿ ಮಂಧಾನ ಬಳಗ ನೇರ ಫೈನಲ್ ಪ್ರವೇಶವನ್ನು ಕೂಡ ಪಡೆದಿದೆ.

ಹೊರಬಿದ್ದ ಎರಡು ತಂಡಗಳು: ಮಹಿಳಾ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತ ಭಾನುವಾರ ಅಂತ್ಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು , ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡವು. ಕೊನೆಯ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಟ ಅಂತಿಮ ದಿನದವರೆಗೆ ಸಾಗಿದ್ದು, ಈ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯುಪಿ ವಾರಿಯರ್ಸ್ ವಿರುದ್ಧ ಜಯ ಸಾಧಿಸಿತು. ಇದರ ಪರಿಣಾಮ ಯುಪಿ ವಾರಿಯರ್ಸ್ ಮಾತ್ರವಲ್ಲದೆ ಎರಡು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡಕ್ಕೂ ಟಾಪ್-3 ಸ್ಥಾನ ತಪ್ಪಿ ಪ್ಲೇ ಆಫ್ ಪ್ರವೇಶ ಸಾಧ್ಯವಾಗಲಿಲ್ಲ.
ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು: ಜನವರಿ 19ರಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 61 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು. ಆರಂಭದಲ್ಲಿ ಗೆಲುವಿನ ಓಟ ಮುಂದುವರೆಸಿದ್ದ ಆರ್‌ಸಿಬಿ ತಂಡವು ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿತು.
ನೇರವಾಗಿ ಫೈನಲ್ ಪ್ರವೇಶಿಸಿದ ಆರ್‌ಸಿಬಿ: ಆದರೂ, ಪಾಯಿಂಟ್ ಪಟ್ಟಿಯಲ್ಲಿ ಬೆಂಗಲೂರು ತಂಡ ಅಗ್ರಸ್ಥಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜನವರಿ 29ರಂದು ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಗಳಿಸುಗ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶಿಸಿತು. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ ಟಾಲ್‌ನಲ್ಲಿರುವ ಆರ್‌ಸಿಬಿಯ ರನ್ ರೇನ್ +1.247 ಇದೆ.
ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ತಂಡವು ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡ ಎರಡನೇ ತಂಡವಾಗಿ ಹೊರಹೊಮ್ಮಿದ್ದು, 10 ಅಂಕಗಳನ್ನು ಪಡೆದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೂಡ 8 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫೆಬ್ರವರಿ 3ರ ಮಂಗಳವಾರ ಎಲಿಮಿನೇಟರ್ ಪಂದ್ಯವನ್ನು ಆಡಲಿವೆ. ಇದರಲ್ಲಿ ಗೆದ್ದ ತಂಡ ಫೆಬ್ರವರಿ 5ರಂದು ವಡೋದರಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕಾದಾಡಲಿದೆ.
ಆರ್‌ಸಿಬಿ ತಂಡದಲ್ಲಿ ಆಲ್‌ರೌಟರ್ ಆಟಗಾರ್ತಿಯರ ದಂಡೇ ಇದೆ. ಬ್ಯಾಟಿಂಗ್, ಬೌಲಿಂಗ್ ಅಪ್ ಉತ್ತಮವಾಗಿದ್ದು, ಈ ಬಾರಿ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ. ಅಷ್ಟರ ಮಟ್ಟಿಗೆ ಎದುರಾಳಿ ತಂಡಗಳನ್ನು ಬಗ್ಗುಬಡಿಯುತ್ತಾ ಬಂದಿದೆ.
ತಂಡದಲ್ಲಿ ದೇಶಿ ಹಾಗೂ ವಿದೇಶಿ ಖ್ಯಾತ ಆಟಗಾರ್ತಿಯರ ದಂಡೇ ಇದೆ. ಅನುಭವಿ ಬ್ಯಾಟರ್‌ಗಳು, ವೇಗದ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳ ಸಮತೋಲನ ತಂಡದ ಬಲವಾಗಿದೆ. ಆಕ್ರಮಣಕಾರಿ ಆಟದ ಶೈಲಿ, ಯುವ ಆಟಗಾರ್ತಿಯರಿಗೆ ಅವಕಾಶ ನೀಡುವ ನೀತಿ ಮತ್ತು ಸ್ಪರ್ಧಾತ್ಮಕ ಮನೋಭಾವ ಮಹಿಳಾ ಆರ್‌ಸಿಬಿ ತಂಡದ ವಿಶೇಷತೆ. ಪ್ರತೀ ಸೀಸನ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನೀಡುವ ಗುರಿಯೊಂದಿಗೆ ತಂಡ ಮೈದಾನಕ್ಕಿಳಿಯುತ್ತದೆ. ಮಹಿಳಾ ಆರ್‌ಸಿಬಿ ತಂಡವು ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ಸಾಹ ನೀಡಿದ್ದು, ಯುವತಿಯರನ್ನು ಕ್ರಿಕೆಟ್ ಕಡೆಗೆ ಆಕರ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮತ್ತೊಂದೆಡೆ, ಬೆಂಗಳೂರು ಅಭಿಮಾನಿಗಳ ಬೆಂಬಲ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ.












Click it and Unblock the Notifications