Virat Kohli: ವಿರಾಟ್ ಕೊಹ್ಲಿಗೆ ಸವಾಲಾದ ಆಕಿಬ್ ನಬಿ.. ಯುವ ವೇಗಿಗೆ ಬೆದರಿದ್ರಾ ಕಿಂಗ್?
Virat Kohli: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನವೆಲ್ಲ ನೆಟ್ಸ್ ಅಭ್ಯಾಸದತ್ತ ಹರಿದಿದೆ. ಟೀಮ್ ಇಂಡಿಯಾ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಕಠಿಣ ತರಬೇತಿಯಲ್ಲಿ ನಿರತರಾಗಿದ್ದು, ಈ ವೇಳೆ ಯುವ ಭಾರತೀಯ ವೇಗಿ ಆಕಿಬ್ ನಬಿ ಅವರ ಬೌಲಿಂಗ್‌ಗೆ ವಿರಾಟ್ ಪರದಾಡಿದ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಏಕದಿನ ಸರಣಿಗೆ ಸಿದ್ಧತೆ ನಡೆಸಲು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದರು. ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಭಾರತೀಯ ಬ್ಯಾಟರ್‌ಗಳಿಗೆ ಸವಾಲೆಸೆಯಲು ಆಕಿಬ್ ನಬಿ, ಅಂಶುಲ್ ಕಾಂಬೋಜ್ ಮತ್ತು ಗುರ್ನೂರ್ ಬ್ರಾರ್ ಅವರಂತಹ ಯುವ ವೇಗಿಗಳನ್ನು ಬಳಸಿಕೊಳ್ಳಲಾಗಿತ್ತು. ಗುರ್ನೂರ್ ತಮ್ಮ ಎತ್ತರದ ಲಾಭವನ್ನು ಪಡೆದು ಬೌನ್ಸ್ ನೀಡಿದರೆ, ಕಾಂಬೋಜ್ ನಿಖರ ಲೈನ್ ಮತ್ತು ಲೆಂತ್‌ನಿಂದ ದಾಳಿ ನಡೆಸಿ ಗಮನ ಸೆಳೆದರು.

ವಿರಾಟ್ ಕೊಹ್ಲಿಗೆ ಸವಾಲಾದ ಆಕಿಬ್ ನಬಿ
ಗಾಯಗೊಂಡ ಪ್ರಸಿದ್ಧ್ ಕೃಷ್ಣ ಅವರ ಬದಲಿಗೆ ಏಕದಿನ ತಂಡಕ್ಕೆ ಸೇರ್ಪಡೆಯಾಗಿರುವ ಯುವ ವೇಗಿ ಆಕಿಬ್ ನಬಿ ನೆಟ್ಸ್‌ನಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದರು. ಇತ್ತೀಚೆಗೆ 'ಇಂಡಿಯಾ ಎ' ಪರ ಅದ್ಭುತ ಪ್ರದರ್ಶನ ನೀಡಿದ್ದ ನಬಿ ಅವರು ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿಗೆ ತೀವ್ರ ಸವಾಲೊಡ್ಡಿದರು.
ಆಕಿವಗ ನಬಿ ಬೌಲಿಂಗ್ ದಾಳಿ ವೇಳೆ ಪದೇ ಪದೇ ಬೀಟ್ ಆದ ಕಾರಣ ವಿರಾಟ್ ಕೊಹ್ಲಿ ಕೆಲ ಕ್ಷಣಗಳ ಕಾಲ ತೀವ್ರ ಕಿರಿಕಿರಿ ಮತ್ತು ನಿರಾಶೆ ವ್ಯಕ್ತಪಡಿಸಿದ್ದು ಕಂಡುಬಂತು. ಆದರೂ ನಬಿ ಅವರ ಆಕ್ರಮಣಕಾರಿ ಸ್ಪೆಲ್ ಮುಗಿಯುತ್ತಿದ್ದಂತೆ ಕಿಂಗ್ ಕೊಹ್ಲಿ ಅದನ್ನು ಬದಿಗೊತ್ತಿ ರೋಹಿತ್ ಶರ್ಮಾ ಅವರೊಂದಿಗೆ ಹರಟೆ ಹೊಡೆಯುತ್ತಾ ಗಮನ ಸೆಳೆದರು.
ಕ್ರೀಸ್‌ಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದ ರೋಹಿತ್
ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಹೆಚ್ಚು ಆಕ್ರಮಣಕಾರಿಯಾಗಿ ಆಡದೆ, ರಕ್ಷಣಾತ್ಮಕ ಆಟ ಆಡಿ ಕ್ರೀಸ್‌ಗೆ ಹೊಂದಿಕೊಳ್ಳಲು ಪ್ರಯತ್ನಿಸಿದರು. ಶುಭಮನ್ ಗಿಲ್ ಈ ತರಬೇತಿ ಸಂದರ್ಭದಲ್ಲಿ ಭಾಗವಹಿಸಿರಲಿಲ್ಲ. ಕೆ.ಎಲ್.ರಾಹುಲ್ ಮತ್ತು ಋತುರಾಜ್ ಗಾಯಕ್ವಾಡ್ ಕೂಡ ನೆಟ್ಸ್‌ನಲ್ಲಿ ಸಮಯ ಕಳೆದು ತಮ್ಮ ಸಿದ್ಧತೆ ನಡೆಸಿದರು. ಮೊದಲ ಏಕದಿನ ಪಂದ್ಯಕ್ಕೆ ಇನ್ನು ಕೆಲವೇ ದಿನಗಳಿರುವಾಗ, ಯುವ ವೇಗಿಗಳ ಈ ಸವಾಲಿನ ಬೌಲಿಂಗ್ ಹಿರಿಯ ಬ್ಯಾಟರ್‌ಗಳಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸರಣಿಗೆ ಉತ್ತಮವಾಗಿ ಸಿದ್ಧರಾಗಲು ಉತ್ತಮ ನೆರವು ನೀಡಿದೆ ಅಂತಲೇ ಹೇಳಬಹುದು.


Click it and Unblock the Notifications
