RCB 2026 Squad: 2026ಕ್ಕೆ ಆರ್‌ಸಿಬಿ ಕಟ್ಟಿದ ಬಲಿಷ್ಠ ತಂಡ ಹೀಗಿದೆ

RCB 2026 Squad: ಈಗಾಗಲೇ ಡಬ್ಲ್ಯೂಪಿಎಲ್‌ ಮೂರು ಆವೃತ್ತಿ ಮುಗಿದಿದ್ದು, ಇದೀಗ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದೆ. ಈಗಾಗಲೇ ಪಂದ್ಯಗಳಿಗೆ ದಿನಾಂಕ ಕೂಡ ಫಿಕ್ಸ್‌ ಆಗಿದ್ದು, ಆರ್‌ಸಿಬಿ ಕಡಿಮೆ ಹಣದಲ್ಲಿ ಉತ್ತಮ ತಂಡವನ್ನು ಕಟ್ಟಿದೆ. ಹಾಗಾದ್ರೆ ಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

2023ರಲ್ಲಿ ಮುಂಬೈ ಇಂಡಿಯನ್ಸ್‌, 2024 ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ 2025ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್‌ ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದುಕೊಂಡಿತು. ಇದೀಗ ಮುಂದಿನ ಬಾರಿಗೆ ಬಲಿಷ್ಠ ತಂಡವನ್ನು ಒಳಗೊಂಡಿರುವ ಆರ್‌ಸಿಬಿ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಯಾರೆಲ್ಲಾ ಆಟಗಾರ್ತಿಯರು ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

RCB WPL 2026 Squad Full List of Retained and Newly Signed Players for Upcoming Season

ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಪರ್ಸ್‌ನಲ್ಲಿ ಕಡಿಮೆ ಹಣವನ್ನು ಹೊಂದಿತ್ತು. ಈ ವೇಳೆ ಐದು ಆಟಗಾರ್ತಿಯನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಸಹ ಪ್ರಾಂಚೈಸಿಯು 8.85 ಕೋಟಿ ರೂಪಾಯಿಗೆ ನಾಲ್ಕು ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿತು. ಹೆಚ್ಚಿನ ಆಟಗಾರ್ತಿಯರನ್ನು ಖರೀದಿಸುವ ಅಗತ್ಯ ಇದ್ದು, ಅದರಂತೆಯೇ ಬಲಿಷ್ಠ ತಂಡವನ್ನು ಕಟ್ಟಿದೆ.

ಪುರುಷರ ವಿಭಾಗದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಇರುವಂತೆ ಮಹಿಳೆಯರ ವಿಭಾಗದಲ್ಲೂ ಅಷ್ಟೇ ಬಲಿಷ್ಠ ಆಟಗಾರರನ್ನು ಒಳಗೊಂಡಿದೆ. ಹರಾಜಿಗೂ ಮುನ್ನ, ಸ್ಮೃತಿ ಮಂದಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಕನ್ನಡತಿ ಶ್ರೇಯಾಂಕ ಪಾಟೀಲ್‌ ಅವರನ್ನು ಉಳಿಸಿಕೊಂಡಿತ್ತು. ಬಳಿಕ ಕಡಿಮೆ ಹಣದಲ್ಲೇ ಉತ್ತಮ ಆಟಗಾರ್ತಿಯನ್ನು ಕೊಂಡುಕೊಳ್ಳುವ ಮೂಲಕ ಬಲಿಷ್ಠ ತಂಡ ಕಟ್ಟಿದೆ.

ನಾಯಕಿ ಸ್ಮೃತಿ ಮಂದಾನ ಜೊತೆಗೆ ಕಣಕ್ಕಿಳಿಯಲು ಆರ್‌ಸಿಬಿಗೆ ಆರಂಭಿಕ ಆಟಗಾರ್ತಿಯಾಗು ಯಾರು ಕಣಕ್ಕಿಳಿಸುವುದು ಎನ್ನುವ ಚಿಂತೆಯಲ್ಲಿ ಆರ್‌ಸಿಬಿ ಇತ್ತು. ಆದರೆ, ಕೊನೆಗೂ ಇದೀಗ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅವರನ್ನು ಖರೀದಿ ಮಾಡಿ ಈ ಸ್ಥಾನಕ್ಕೆ ಆಡಿಸಲು ನಿರ್ಧರಿಸಿದೆ. ಜೊತೆಗೆ ದಯಾಲನ್ ಹೇಮಲತಾ ಮತ್ತು ಗೌತಮಿ ನಾಯಕ್ ಅವರನ್ನು ಬ್ಯಾಕಪ್ ಆಗಿ ಇಟ್ಟುಕೊಂಡಿದೆ.

ಇನ್ನೂ ಆಲ್‌ರೌಂಡರ್ ಎಲಿಸ್ ಪೆರ್ರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಆದರೆ, ತಂಡದಲ್ಲಿ ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಯಾರನ್ನೂ ಆಡಿಸಬೇಕು ಎಂಬುದೇ ಇದೀಗ ಪ್ರಶ್ನೆಯಾಗಿದೆ. ಆರನೇ ಸ್ಥಾನದಲ್ಲಿ ರಿಚಾ ಘೋಷ್ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಇಲ್ಲ. ಪ್ರತ್ಯೂಷ ಕುಮಾರ್, ಗ್ರೇಸ್ ಹ್ಯಾರಿಸ್ ಮತ್ತು ಗೌತಮಿ ಇದೀಗ ಸಂಭಾವ್ಯ ಆಟಗಾರ್ತಿಯರಾಗಿದ್ದಾರೆ. ಆವೃತ್ತಿ ಆರಂಭವಾಗುವ ಮುನ್ನವೇ ಇದಕ್ಕೆ ಉತ್ತರ ಕಂಡುಕೊಳ್ಳುವತ್ತ ತಂಡ ಗಮನಹರಿಸಿದೆ ಎನ್ನಲಾಗಿದೆ.

ಆರ್‌ಸಿಬಿ ಪಡೆ: ಸ್ಮೃತಿ ಮಂದಾನ (ನಾಯಕಿ), ಜಾರ್ಜಿಯಾ ವೋಲ್, ರಿಚಾ ಘೋಷ್ (ವಿ.ಕೀ), ಪ್ರತ್ಯೂಷಾ ಕುಮಾರ್, ಎಲ್ಲಿಸ್ ಪೆರ್ರಿ, ಪೂಜಾ ವಸ್ತ್ರಾಕರ್, ನಾಡಿನ್ ಡಿ ಕ್ಲರ್ಕ್, ಗ್ರೇಸ್ ಹ್ಯಾರಿಸ್, ದಯಾಲನ್ ಹೇಮಲತಾ, ಗೌತಮಿ ನಾಯ್ಕ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್, ಅರುಂಧತಿ ರೆಡ್ಡಿ, ಪ್ರೇಮಾ ರಾವತ್.

ಒಟ್ಟಿನಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರಡು ವಿಭಾಗದಲ್ಲಿ ಆಡಲು ಉತ್ತಮ ಆಟಗಾರ್ತಿಯರೇನು ಇದ್ದಾರೆ. ಆದರೆ ಯಾರನ್ನೂ ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕು ಎನ್ನುವುದೇ ಇದೀಗ ದೊಡ್ಡ ಚಿಂತೆಯಾಗಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಹೇಳೊದಾದ್ರೆ ಕಳೆದ ಬಾರಿಯಂತೆ ಈ ಬಾರಿಯೂ ಕೂಡ ತಂಡ ಬಲಿಷ್ಠ ತಂಡ ಹೊಂದಿದೆ. ಆದ್ದರಿಂದ ಮುಂದಿನ ಬಾರಿ ಟ್ರೋಫಿ ಎತ್ತುವುದು ಗ್ಯರಾಂಟಿ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+