Virat Kohli: ಯಾವುದೇ ಕಾರಣಕ್ಕೂ ತಂಡ ಮಾರಾಟ ಮಾಡಲ್ಲ ಎಂದ ಆರ್‌ಸಿಬಿ!
RCB: ಆರ್‌ಸಿಬಿ ತಂಡವು ಸೇಲ್ ಆಗಲಿದೆ ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕತ್ವವವು ಆರ್‌ಸಿಬಿ ಫ್ರಾಂಚೈಸಿ ಮಾರಾಟ ಮಾಡುವ ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟಿದೆ. ಆರ್‌ಸಿಬಿ ತಂಡವನ್ನು ಬರೋಬ್ಬರಿ 17 ಸಾವಿರ ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೂ ಭಾರೀ ಮುಜುಗರ ಹಾಗೂ ಜೈಲು ಭೀತಿ ಎದುರಾಗಿದೆ. ಹೀಗಾಗಿ, ಆರ್‌ಸಿಬಿ ತಂಡವನ್ನು ಸೇಲ್ ಮಾಡಲಾಗುತ್ತದೆ ಎಂದು ಚರ್ಚೆ ಜೋರಾಗಿತ್ತು. ಆದರೆ, ಇದೀಗ ಈ ವಿಚಾರವಾಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಹತ್ವದ ಅಪ್ಡೇಟ್ಸ್ ಹಂಚಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಫ್ರಾಂಚೈಸಿಯನ್ನು ಸೇಲ್‌ಗೆ ಇರಿಸಲಾಗಿದೆ. ಇದನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಗಂಭೀರವಾದ ಚರ್ಚೆ ನಡೆದಿತ್ತು. ಇದೀಗ ಈ ಬಗ್ಗೆ ದೊಡ್ಡ ಅಪ್ಡೇಟ್ಸ್‌ವೊಂದು ಬಂದಿದೆ. ಈ ವರದಿಯನ್ನು ಆರ್‌ಸಿಬಿ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ತಳ್ಳಿಹಾಕಿದ್ದು ಹೊಸದೊಂದು ಮಾಹಿತಿಯನ್ನು ಹಂಚಿಕೊಂಡಿದೆ.

ಕನ್ನಡಿಗರಿಗೆ ಆರ್‌ಸಿಬಿಯೊಂದಿಗೆ ವಿಶೇಷ ಸಂಬಂಧವಿದೆ. ಸುದೀರ್ಘ 18 ವರ್ಷಗಳಿಂದ ಈ ತಂಡವನ್ನು ಕನ್ನಡಿಗರು ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಈ ತಂಡ ಮಾರಾಟವಾಗಲಿದೆ ಎನ್ನುವ ಸುದ್ದಿಯು ಆಘಾತವನ್ನು ತಂದೊಡ್ಡಿತ್ತು. ಇದೊಂದು ಶುದ್ಧ ಸುಳ್ಳು ಸುದ್ದಿ ಹಾಗೂ ಊಹಾಪೋಹ ಎಂದು ತಂಡದ ಮಾಲೀಕರು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಆರ್ಸಿಬಿಯ ಮಾಲಿಕತ್ವವದ ಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ವಿಶೇಷ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ನಮಗೆ ಆರ್‌ಸಿಬಿಯನ್ನು ಮಾರಾಟ ಮಾಡುವ ಯಾವುದೇ ಉದ್ದೇಶವೂ ಈಗ ಇಲ್ಲ ಅಂತ ಆ ಪ್ರಕಟಣೆಯಲ್ಲಿ ಹೇಳಲಾಗಿದೆ.
ಆರ್‌ಸಿಬಿ ತಂಡದ ಮಾಲೀಕತ್ವವನ್ನು ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಎನ್ನುವ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಇನ್ನು ಬ್ಲೂಮ್ಬರ್ಗ್ ವರದಿಯ ಪ್ರಕಾರ, ಡಿಯಾಜಿಯೋ ಸಂಸ್ಥೆಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 17,000 ಕೋಟಿ ರೂಪಾಯಿ ಮೊತ್ತದ ಮೌಲ್ಯವನ್ನು ನಿರೀಕ್ಷಿಸಿದ ಎಂದು ವರದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರ ಭಾರೀ ಚರ್ಚೆಯಾಗಿತ್ತು.
ಇನ್ನು ಬೆಂಗಳೂರಿನಲ್ಲಿ ಈಚೆಗೆ ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿರುವುದು ಕಪ್ಪುಚುಕ್ಕಿಯಾಗಿದೆ. ಹೀಗಾಗಿ, ಆರ್‌ಸಿಬಿ ತಂಡ ಮಾರಾಟವಾಗಲಿದೆ ಎನ್ನುವ ಬಗ್ಗೆ ಗಂಭೀರವಾಗಿಯೇ ಚರ್ಚೆ ನಡೆಸಿತ್ತು. ಇದೀಗ ಆರ್‌ಸಿಬಿ ಮಾಲೀಕತ್ವವು ಈ ಎಲ್ಲಾ ಚರ್ಚೆಗಳಿಗೂ ಬ್ರೇಕ್ ಹಾಕಿದೆ.
ಅಲ್ಲದೇ ಪ್ರಾರಂಭದಲ್ಲಿ ಆರ್‌ಸಿಬಿ ತಂಡದ ಮಾಲೀಕತ್ವವು ವಿಜಯ್ ಮಲ್ಯ ಅವರ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಕೆಳಗಿತ್ತು. ಇದಾದ ಮೇಲೆ ಬದಲಾದ ಪರಿಸ್ಥಿತಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಎನ್ನುವ ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿದೆ. ಇದೀಗ ಆರ್‌ಸಿಬಿ ಮಾಲಕತ್ವವು ಡಿಯಾಜಿಯೋಗೆ ಸೇರಿದೆ. ಆರ್‌ಸಿಬಿ ಗೆದ್ದ ಬೆನ್ನಲ್ಲೇ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರಂತದ ನೋವಿನಲ್ಲೇ ಅಭಿಮಾನಿಗಳು ಇರುವಾಗ ಈ ತಂಡವೂ ಸೇಲ್ ಆಗಲಿದೆ ಎನ್ನುವುದು ಆಘಾತ ಮೂಡಿಸಿತ್ತು. ಆದರೆ ತಂಡ ಸೇಲ್ ಆಗುವುದಿಲ್ಲ ಎನ್ನುವುದು ಖಚಿತವಾಗಿದೆ.












Click it and Unblock the Notifications