ಐಪಿಎಲ್ ತೊರೆದು ಕೊವಿಡ್ 19 ಹೋರಾಟಕ್ಕೆ ಅಶ್ವಿನ್ ಸಾಥ್
ಚೆನ್ನೈ, ಏಪ್ರಿಲ್ 26: ಕೊವಿಡ್ 19 ನಡುವೆ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಡೆ ಬಗ್ಗೆ ಪರ -ವಿರೋಧ ಚರ್ಚೆ ನಡೆದಿದೆ. ಈ ನಡುವೆ ಟೂರ್ನಮೆಂಟ್ ಮಧ್ಯದಲ್ಲೇ ಅನೇಕ ಆಟಗಾರರು ತಂಡ ತೊರೆಯುತ್ತಿದ್ದು, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಪಟ್ಟಿಗೆ ಹೊಸ ಸೇರ್ಪಡೆ.
I would be taking a break from this years IPL from tomorrow. My family and extended family are putting up a fight against #COVID19 and I want to support them during these tough times. I expect to return to play if things go in the right direction. Thank you @DelhiCapitals 🙏🙏
— Stay home stay safe! Take your vaccine🇮🇳 (@ashwinravi99) April 25, 2021
ಮುಂಬೈನಲ್ಲಿ ಕಠಿಣ ಕರ್ಫ್ಯೂ ಕೋವಿಡ್ ನಿಯಮಗಳಿದ್ದರೂ ಐಪಿಎಲ್ ಆಯೋಜನೆಗೆ ಅನುಮತಿ ಹೇಗೆ ನೀಡಲಾಗಿದೆ ಎಂದು ಅನೇಕರು ಪ್ರಶ್ನಿಸಿದ್ದರು. ಐಪಿಎಲ್ ವೇಳಾಪಟ್ಟಿ, ಕ್ರೀಡಾಂಗಣ ಬದಲಾವಣೆ ಬಗ್ಗೆ ಸುದ್ದಿ ಬಂದಿತ್ತು. ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕೊವಿಡ್ 19 ಮಾರ್ಗಸೂಚಿ ನಡುವೆ ಮುಂಬೈನಲ್ಲಿ ಎಂದಿನಂತೆ ಪಂದ್ಯಗಳು ನಡೆಯಲಿವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
Go well Ash. Hope your family and the whole situation in the country gets better soon.
— Irfan Pathan (@IrfanPathan) April 25, 2021
ಈಗ ಚೆನೈ, ಮುಂಬೈ ನಂತರ ಅಹಮದಾಬಾದ್ ಸ್ಟೇಡಿಯಂನಲ್ಲಿ ಎಂದಿನಂತೆ ಐಪಿಎಲ್ ಮುಂದುವರೆಯಲಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಆರ್ ಅಶ್ವಿನ್ ಅವರು ತಮ್ಮ ಕುಟುಂಬಸ್ಥರು ಕೊವಿಡ್ 19 ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಅವರ ಹೋರಾಟಕ್ಕೆ ನಾನು ಬೆಂಬಲ ನೀಡಬೇಕಾಗಿದೆ. ಐಪಿಎಲ್‌ನಿಂದ ನಾಳೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ, ಪರಿಸ್ಥಿತಿ ತಿಳಿಕೊಂಡರೆ ಮತ್ತೆ ಐಪಿಎಲ್ ಕಣಕ್ಕಿಳಿಯುತ್ತೇನೆ ಎಂದು ಟ್ವೀಟ್ ಮಾಡಿದ್ದೇನೆ.
It’s sad that you’ve decided to quit this years IPL for your family. IPL is greater than Covid. Now Think about all the other poor & underprivileged families suffering from corona. Imagine if all IPL players quit & support these poor families. Great sportsmanship, poor humanity.
— Joshua D'souza (@TheJoshuaDsouza) April 25, 2021

ಅಶ್ವಿನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್, ನಿಮ್ಮ ಕುಟುಂಬಸ್ಥರು ಹಾಗೂ ಇಡೀ ದೇಶದ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಆಶಿಸೋಣ ಎಂದಿದ್ದಾರೆ. ಅಶ್ವಿನ್ ಅವರ ನಿರ್ಧಾರ ಸೂಕ್ತವಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಮತ್ತೆ ಕೆಲವರು ಡೆಲ್ಲಿ ತಂಡದ ಆಡುವ ಹನ್ನೊಂದರಲ್ಲಿ ಅಶ್ವಿನ್ ಸ್ಥಾನ ಪಡೆಯುವುದು ಕಷ್ಟಕರ ಸ್ಥಿತಿ ಇದೆ ಹೀಗಾಗಿ, ತಂಡ ತೊರೆಯುತ್ತಿರಬಹುದು ಎಂದಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications