ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಬಿಲಿಯನ್ ನಿಮಿಷಗಳ ವೀಕ್ಷಣೆ ಪಡೆದ ಐಪಿಎಲ್ ಮೊದಲ ಪಂದ್ಯ

|
Google Oneindia Kannada News

ಚೆನ್ನೈ, ಏಪ್ರಿಲ್ 16: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಐಪಿಎಲ್ 14ರ ಉದ್ಘಾಟನಾ ಪಂದ್ಯ(ಏಪ್ರಿಲ್ 9ರಂದು)ವು ಭರ್ಜರಿ ವೀಕ್ಷಣೆ ಪಡೆದುಕೊಂಡು ದಾಖಲೆ ಬರೆದಿದೆ. ಐಪಿಎಲ್ 2020 ಹೊರತುಪಡಿಸಿದರೆ ಮಿಕ್ಕೆಲ್ಲ ಆವೃತ್ತಿ ಐಪಿಎಲ್ ಆರಂಭಿಕ ಪಂದ್ಯಗಳಿಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ ಎಂದು ಅಂಕಿ ಅಂಶ ಹೊರ ಬಂದಿದೆ.

ದೇಶದ ಅತಿದೊಡ್ಡ ಕ್ರಿಕೆಟ್ ಲೀಗ್ ಮೇಲೆ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸ್ಟಾರ್ ಹಾಗೂ ಡಿಸ್ನಿ ಇಂಡಿಯಾ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸರಿ ಸುಮಾರು 10 ಬಿಲಿಯನ್ ನಿಮಿಷ (9.7 ಬಿಲಿಯನ್) ಗಳ ಕಾಲ ಮೊದಲ ಪಂದ್ಯದ ವೀಕ್ಷಣೆ ದಾಖಲಾಗಿದೆ. ಜೊತೆಗೆ 323 ಮಿಲಿಯನ್ ಇಂಪ್ರೆಷನ್ ದಾಖಲಿಸಿದೆ ಎಂದು BARC ಅಂಕಿ ಅಂಶ ತಿಳಿಸಿದೆ. ಐದಾರು ತಿಂಗಳಲ್ಲೇ ಮತ್ತೊಂದು ಸೀಸನ್ ಆರಂಭವಾದರು ವೀಕ್ಷಕರ ಸಂಖ್ಯೆ, ಕ್ರಿಕೆಟ್ ಆಸಕ್ತರು ಕಡಿಮೆಯಾಗಿಲ್ಲ.

IPL opening match clocks 10 billion minutes of viewership on Star India network

ಐಪಿಎಲ್ 2021ಗಾಗಿ 8 ಭಾಷೆಗಳಲ್ಲಿ 100 ಮಂದಿ ಕಾಮೆಂಟೆಟರ್ಸ್ಐಪಿಎಲ್ 2021ಗಾಗಿ 8 ಭಾಷೆಗಳಲ್ಲಿ 100 ಮಂದಿ ಕಾಮೆಂಟೆಟರ್ಸ್

Recommended Video

MLA Lakshmi Hebbalkar And Family Members Test Positive For Covid - 19 | Oneindia Kannada

ವೀವೋ ಐಪಿಎಲ್ 2021 ಸುಮಾರು 8 ಭಾಷೆಗಳಲ್ಲಿ ಪ್ರಸಾರವಾಗುತ್ತಿದ್ದು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ವಿವಿಧ ಪ್ರಾದೇಶಿಕ ವೀಕ್ಷಕರನ್ನು ಸೆಳೆಯುತ್ತಿದೆ. ವಿವಿಧ ಭಾಷೆಗಳಲ್ಲಿ 100ಕ್ಕೂ ಅಧಿಕ ಕಾಮೆಂಟೆಟರ್ಸ್ ಈ ಬಾರಿ ಐಪಿಎಲ್ ವಿವರ ವೀಕ್ಷಕರ ಮುಂದಿಡುತ್ತಿದ್ದಾರೆ. ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ.

English summary
Building on the success of IPL last year, the Star India network has clocked 323 million* total impressions for the opening match of Vivo IPL 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X