IND Vs PAK Asia Cup 2025 Final: ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಪಾಕ್ ವಿರುದ್ಧ ಟೀಂ ಇಂಡಿಯಾ ಪ್ಲೇಯಿಂಗ್ 11 ಹೇಗಿದೆ?
Ind vs Pak Asia Cup 2025 Final: ಏಷ್ಯಾಕಪ್ 2025 ಟೂರ್ನಿ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಕೆಲವೇ ಕ್ಷಣಗಳಲ್ಲಿ ಭಾರತ-ಪಾಕ್ ನಡುವೆ ಹೈವೋಲ್ಟೇಟ್ ಫೈನಲ್ ಪಂದ್ಯ ಆರಂಭ ಆಗಲಿದೆ. ಹಾಗಾದ್ರೆ, ಟೀಂ ಇಂಡಿಯಾ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲ್ಲೆಯಲ್ಲಿ ಇರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಏಷ್ಯಾಕಪ್ 2025ನಲ್ಲಿ ಭಾರತ್-ಪಾಕ್ ಎರಡು ಬಾರಿ ಮುಖಾಮುಖಿ ಆಗಿದ್ದು, ಎರಡರಲ್ಲೂ ಪಾಕಿಸ್ತಾನ ಹೀನಾಯ ಸೋಲನುಭವಿಸಿತು. ಇನ್ನು ಇಂದು ಅಂದರೆ ಫೈನಲ್ ಪಂದ್ಯದಲ್ಲಿ ಮೂರನೇ ಬಾರಿ ಮುಖಾಮುಖಿ ಆಗಲಿವೆ. ಈ ಕ್ಷಣಕ್ಕಾಗಿ ಬರೀ ಭಾರತ ಅಷ್ಟೇ ಅಲ್ಲದೆ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಈಗಾಗಲೇ ಈ ಹಿಂದಿನ ಪಂದ್ಯಗಳಲ್ಲಿ ಕೆಲಪಾಕಿಸ್ತಾನದ ಕ್ರಿಕೆಟ್ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಕುಚೇಷ್ಠೆ ಮೆರೆದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಟೀಂ ಇಂಡಿಯಾ ಆಟಗಾರರು ಅವರಂತೆ ಕಪಿಚೇಷ್ಠೆ ಮಾಡದೆ, ತಮ್ಮ ಬ್ಯಾಟಿಂಗ್, ಬೌಲಿಂಗ್ ಮೂಲಕವೇ ತಕ್ಕ ಉತ್ತರ ಕೊಡುವ ಕೆಲಸವನ್ನು ಮಾಡಿದರು. ಇನ್ನೂ ಇಂದಿನ ಫೈನಲ್ ಪಂದ್ಯವಂತೂ ವೀಕ್ಷಕರ ಕೂತೂಹಲ ಹೆಚ್ಚಿಸಿದೆ.
2025ರ ಏಷ್ಯಾಕಪ್ ಫೈನಲ್‌ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಆಗುತ್ತಿವೆ. ಈ ರಣರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಟೀಂ ಇಂಡಿಯಾ ದಾಖಲೆಯ 9ನೇ ಏಷ್ಯಾಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ ಹಠದಲ್ಲಿ ಟೀಂ ಇಂಡಿಯಾ ಪಡೆ ಇದೆ.
ಇಂದಿನ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ದಾಖಲೆಯ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ. ಅಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದೆ. ಆದ್ದರಿಂದ ಇಂದಿನ ಫೈನಲ್ ಪಂದ್ಯ ಭಾರತ ತಂಡಕ್ಕೆ ತುಂಬಾ ಪ್ರಮುಖವಾದುದ್ದಾಗಿದೆ. ಮತ್ತೊಂದೆಡೆ ಒಂದೇ ಟೂರ್ನಿಯಲ್ಲಿ ಅದೇ ಪಾಕ್ ತಂಡವನ್ನು ಮೂರು ಬಾರಿ ಸೋಲಿಸಿದ ಮೊದಲ ತಂಡವೆಂಬ ದಾಖಲೆ ಸಹ ನಿರ್ಮಾಣವಾಗಲಿದೆ.
ಈಗಾಗಲೇ ಎರಡು ಬಾರಿ ಪಾಕ್‌ಗೆ ಪೆಟ್ಟು ಕೊಟ್ಟಿರುವ ಭಾರತ ಟೂರ್ನಿಯ ಎಲ್ಲಾ ಪಂದ್ಯಗಳನ್ನ ಗೆದ್ದು ಅಜೇಯವಾಗಿ ಫೈನಲ್ ಪ್ರವೇಶ ಮಾಡಿದೆ. ಭಾರತ ತಂಡವು ಗುಂಪು ಹಂತದಲ್ಲಿ, ನಂತರ ಸೂಪರ್ 4ರ ಸುತ್ತಿನಲ್ಲಿ ಪಾಕಿಸ್ತಾನಕ್ಕೆ ಮುಣ್ಣುಮುಕ್ಕಿಸಿದೆ. ಇದೀಗ ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿ ಆಗಲು ಸಜ್ಜಾಗಿದ್ದು, ಇದರಲ್ಲೂ ಗೆದ್ದು ಹೊಸ ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಪಡೆ ಸಜ್ಜಾಗಿದೆ.
ಫೈನಲ್ ಪಂದ್ಯಲ್ಲಿ ಬ್ಯಾಟಿಂಗ್ ಲೈನ್ ಅಫ್ ವಿಚಾರಕ್ಕೆ ಬಂದರೆ, ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಬಳಿಕ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಫಿಟ್ ಆಗದಿದ್ದರೆ, ಶಿವಂ ದುಬೆ 6ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಬಳಿಕ ಅಕ್ಷರ್ ಪಟೇಲ್ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಬೌಲಿಂಗ್ ಲೈನ್ ಅಫ್ ವಿಚಾರಕ್ಕೆ ಬಂದ್ರೆ, ಟೀಂ ಇಂಡಿಯಾ ಪರ ಆಡುವ ಪ್ಲೇಯಿಂಗ್ 11ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದು, ಜಸ್ಪ್ರೀತ್ ಬುಮ್ರಾ ಮತ್ತೆ ಮರಳಿದ್ದಾರೆ. ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಸ್ಪಿನ್ನರ್‌ಗಳಾದರೆ, ಬುಮ್ರಾ ವೇಗಿಯಾಗಿ ಆಡಲಿದ್ದಾರೆ. ಹಾರ್ದಿಕ್ ಫಿಟ್ ಆದರೆ, ಫೈನಲ್‌ಗೆ ಮೊದಲು ಅದರ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಆಗ ಅರ್ಷದೀಪ್ ಸಿಂಗ್ ಹೊರಗುಳಿಯಲಿದ್ದಾರೆ ಎನ್ನುವ ಮಾಹಿತಿ ಇದೆ.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಸೈಮ್ ಅಯೂಬ್, ಸಲ್ಮಾನ್ ಅಘಾ (ನಾಯಕ), ಹುಸೇನ್ ತಲಾತ್, ಮೊಹಮ್ಮದ್ ಹ್ಯಾರಿಸ್ (ವಿ.ಕೀ.), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
ಇನ್ನೂ ಭಾರತೀಯ ಕಾಲಮಾನದ ಪ್ರಕಾರ, ಇಂದು (ಸೆಪ್ಟೆಂಬರ್ 28) ಸಂಜೆ 8 ಗಂಟೆಗೆ ಪಂದ್ಯ ಆರಂಭ ಆಗಲಿದ್ದು, ಇದಕ್ಕೂ ಮುಂಚೆ 7:30ಕ್ಕೆ ಟಾಸ್ ಆಗಲಿದೆ. ಇಂದಿನ ಫೈನಲ್ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications