3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ
ಸುಮಾರು ಮೂರು ವರ್ಷ, 83 ಇನ್ನಿಂಗ್ಸ್ ಬಳಿಕ ಕೊನೆಗೂ ಕಿಂಗ್ ಕೊಹ್ಲಿ 100ರನ್ ಗಡಿ ದಾಟಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅಭಿಮಾನಿಗಳ ಸತತ ಕಾಯುವಿಕೆಗೆ ಕಿಂಗ್ ಕೊಹ್ಲಿ ಕೊನೆಗೂ ಅಂತ್ಯ ಹಾಡಿದ್ದಾರೆ. ಏಷ್ಯಾಕಪ್ 2022ರಲ್ಲಿ ಉಭಯ ತಂಡಗಳಿಗೂ ಅಷ್ಟೇನು ಮಹತ್ವವಿಲ್ಲದ ಸೂಪರ್ 4 ಹಂತದ ಪಂದ್ಯದಲ್ಲಿ ಕೊಹ್ಲಿ 'ವಿರಾಟ್' ಸ್ವರೂಪಕ್ಕೆ ಅಫ್ಘನ್ನರು ಬೆಚ್ಚಿದ್ದಾರೆ.
ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಎಲ್ಲರ ಕಣ್ಣು ಕೊಹ್ಲಿ ಮೇಲೆ ನೆಟ್ಟಿತ್ತು. ಫಾರ್ಮ್ ಕಳೆದುಕೊಂಡು, ಕ್ರಿಕೆಟ್ ಬ್ಯಾಟ್ ಹಿಡಿಯದೆ ತಿಂಗಳು ಕಳೆದಿದ್ದ ವಿರಾಟ್ ಕೊಹ್ಲಿ ಮೇಲೆ ಸಹಜವಾಗಿ ಒತ್ತಡವಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ವಿಶೇಷ ಬ್ಯಾಟ್‌ನೊಂದಿಗೆ ಕೊಹ್ಲಿ ಕಣಕ್ಕಿಳಿದಿದ್ದರು. ಎಂಆರ್ ಎಫ್ ಗೋಲ್ಡ್ ವಿಝಾರ್ಡ್ ಗುಣಮಟ್ಟದ ವಿಶೇಷ ಬ್ಯಾಟ್ ಹಿಡಿದು ಕ್ರೀಸ್ ನಲ್ಲಿ ಕಾಣಿಸಿಕೊಂಡ ಕೊಹ್ಲಿ ಮತ್ತೆ ಲಯಕ್ಕೆ ಮರಳಿರುವ ಕುರುಹು ತೋರಿದ್ದಲ್ಲದೆ, ಸೂಪರ್ 4 ಹಂತ ತಲುಪುವ ವೇಳೆ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ತಂಡವನ್ನು ಕೆಎಲ್ ರಾಹುಲ್ ಮುನ್ನೆಡೆಸುತ್ತಿದ್ದು, ಆರಂಭಿಕರಾಗಿ ಕಣಕ್ಕಿಳಿದು ಉತ್ತಮವಾಗಿ ಆಡಿ ಅರ್ಧಶತಕ 62ರನ್(41 ಎಸೆತ) ಗಳಿಸಿ ಔಟಾದರು. ಇನ್ನೊಂದು ತುದಿಯಲ್ಲಿ ರನ್ ಹೊಳೆ ಹರಿಸುವುದನ್ನು ಮುಂದುವರೆಸಿದ ಕೊಹ್ಲಿ ಅರ್ಹ ಶತಕ ಗಳಿಸಿ ಮುಗುಳ್ನಗೆ ಬೀರಿದರು. ಟೀಂ ಇಂಡಿಯಾ 20 ಓವರ್ ಗಳಲ್ಲಿ2 ವಿಕೆಟ್ ಕಳೆದುಕೊಂಡು 212ರನ್ ಗಳಿಸಿತು.

100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್
ಆಗಸ್ಟ್ 28ರಂದು ನಡೆದ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ್ದು ವಿಶೇಷ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಯಲ್ಲೂ 100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಹುಬ್ಬಳ್ಳಿ ಫಾನ್ಸ್‌ಗೆ ನಿರಾಶೆ; ಭಾರತ ಎ-ನ್ಯೂಜಿಲೆಂಡ್ ಎ ನಡುವಿನ ಟೆಸ್ಟ್‌ನ ಮೊದಲ ದಿನದಾಟ ರದ್ದು ಇಂದು(ಸೆ.8) ಅಫ್ಘಾನಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 61 ಎಸೆತಗಳಲ್ಲಿ 122ರನ್ ಗಳಿಸಿ ಅಜೇಯರಾಗಿ ಉಳಿದರು. 12 ಬೌಂಡರಿ, 6 ಸಿಕ್ಸರ್ ಸಿಡಿಸಿದ ಕೊಹ್ಲಿ 200ರನ್ ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿ ರಂಜಿಸಿದರು.ಈ ಪಂದ್ಯದಲ್ಲಿ ಶತಕ ಗಳಿಸಿ ಒಟ್ಟಾರೆ 71ನೇ ಅಂತಾರಾಷ್ಟ್ರೀಯ ಶತಕ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. 71ನೇ ಶತಕ ಗಡಿ ದಾಟಲು ಸಚಿನ್ ಗಿಂತ ಕೊಹ್ಲಿ ಒಂದು ಇನ್ನಿಂಗ್ಸ್ ಕಡಿಮೆ ತೆಗೆದುಕೊಂಡಿದ್ದಾರೆ.
ಕೊಹ್ಲಿ ದಾಖಲೆಗಳು
2010ರಲ್ಲಿ ಜಿಂಬಾಬ್ವೆ ವಿರುದ್ಧ ಚೊಚ್ಚಲ ಟಿ20ಐ ಪಂದ್ಯವಾಡಿದ ಕೊಹ್ಲಿ 21 ಎಸೆತಗಳಲ್ಲಿ 26ರನ್ ಗಳಿಸಿ, ಗೆಲುವಿಗೆ ತಮ್ಮ ಕೊಡುಗೆ ನೀಡಿದ್ದರು. ಭರ್ಜರಿ ಸ್ಟ್ರೈಕ್ ರೇಟ್ ಬಗ್ಗೆ ಗಮನ ಹರಿಸದೆ, ನಿರಂತರವಾಗಿ ರನ್ ಗಳಿಕೆ ಮೂಲಕ ರನ್ ಚೇಸ್ ಮಾಡಿ, ತಂಡಕ್ಕೆ ಗೆಲುವು ತಂದು ಕೊಡುವ ಅಭ್ಯಾಸ ಮಾಡಿಕೊಂಡ ಕೊಹ್ಲಿ ಈ ಮಾದರಿಯಲ್ಲಿ ದಿಗ್ಗಜ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
2ನೇ ಅತ್ಯಧಿಕ ರನ್ ಗಳಿಕೆ
3497ರನ್ ಗಳಿಸಿದ್ದ ಮಾರ್ಟಿನ್ ಗಪ್ಟಿಲ್ ಹಿಂದಿಕ್ಕಿ ಕೊಹ್ಲಿ(3584ರನ್) ಎರಡನೇ ಸ್ಥಾನಕ್ಕೇರಿದ್ದಾರೆ. ರೋಹಿತ್ ಶರ್ಮ 3620ರನ್ ಗಳಿಸಿ ಮುಂದಿದ್ದಾರೆ.

ಅತ್ಯಧಿಕ ವೈಯಕ್ತಿಕ ಗರಿಷ್ಠ ಮೊತ್ತ
2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮ ಗಳಿಸಿದ್ದ 118ರನ್ ಇಲ್ಲಿ ತನಕ ಭಾರತ ಬ್ಯಾಟ್ಸ್ ಮನ್ ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಕೊಹ್ಲಿ ಅಜೇಯ 122ರನ್ ಗಳಿಸಿ ಟಿ20ಐನಲ್ಲಿ ಅತ್ಯಧಿಕ ಗರಿಷ್ಠ ಮೊತ್ತ ದಾಖಲೆ ಬರೆದಿದ್ದಾರೆ. ಮೂರನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 117ರನ್ (ಇಂಗ್ಲೆಂಡ್ 2022)
ವಿಡಿಯೋ: ಕ್ರೀಡಾಂಗಣದಲ್ಲಿ ಮಾರಾಮಾರಿ- ಪಾಕಿಸ್ತಾನಿ ಬೆಂಬಲಿಗರನ್ನು ಥಳಿಸಿದ ಅಫ್ಘಾನ್ ಅಭಿಮಾನಿಗಳು
ಐದನೇ ಭಾರತೀಯ ಬ್ಯಾಟ್ಸ್ ಮನ್
ವಿರಾಟ್ ಕೊಹ್ಲಿಗೂ ಮುನ್ನ ಟಿ20ಐನಲ್ಲಿ ಸುರೇಶ್ ರೈನಾ (1), ರೋಹಿತ್ ಶರ್ಮ (4), ಕೆಎಲ್ ರಾಹುಲ್ (2) ಹಾಗೂ ಸೂರ್ಯ ಕುಮಾರ್ ಯಾದವ್ (1) ಶತಕ ಬಾರಿಸಿದ್ದಾರೆ.
- ವಿರಾಟ್ ಕೊಹ್ಲಿ 122 ಅಜೇಯ;
- ರೋಹಿತ್ ಶರ್ಮ 118, ಅಜೇಯ 111, 106, ಅಜೇಯ 100
- ಸೂರ್ಯ ಕುಮಾರ್ ಯಾದವ್ 117
- ಕೆಎಲ್ ರಾಹುಲ್ ಅಜೇಯ 110, ಅಜೇಯ 101
- ದೀಪಕ್ ಹೂಡಾ 104
- ಸುರೇಶ್ ರೈನಾ 101

ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಇನ್ನಿಂಗ್ಸ್ ಬಳಿಕ
ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಇನ್ನಿಂಗ್ಸ್ ಬಳಿಕ ಕೊಹ್ಲಿ ಅಂಕಿ ಅಂಶ: 104 ಪಂದ್ಯ; 96 ಇನ್ನಿಂಗ್ಸ್; 27 ಬಾರಿ ನಾಟೌಟ್; 3584 ರನ್; ಅಜೇಯ 122 ಗರಿಷ್ಠ ರನ್; 51.94 ರನ್ ಸರಾಸರಿ; 138.38 ಸ್ಟ್ರೈಕ್ ರೇಟ್; 32 ಅರ್ಧಶತಕ; 319 ಬೌಂಡರಿ; 104 ಸಿಕ್ಸರ್
71ನೇ ಶತಕದ ಜೊತೆಗೆ 24,000ರನ್ ಪೂರೈಸಿರುವ ಕೊಹ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ 250 ಸಿಕ್ಸರ್ ಗಡಿ ದಾಟಿದ್ದಾರೆ. ಟಿ20ಐನಲ್ಲಿ 3,500ರನ್ ಪೂರೈಸಿದ್ದಾರೆ.

ಟಿ20ಐಯಲ್ಲಿತ್ವರಿತ ಗತಿಯಲ್ಲಿ 1000ರನ್ ಗಳಿಕೆ
ಟಿ20ಐಯಲ್ಲಿತ್ವರಿತ ಗತಿಯಲ್ಲಿ 1000ರನ್ ಗಳಿಕೆ ಪಟ್ಟಿಯಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. 27 ಇನ್ನಿಂಗ್ಸ್ ನಲ್ಲಿ 1000ರನ್ ದಾಟಿ, ನಾಲ್ಕನೇ ಸ್ಥಾನದಲ್ಲಿದ್ದರೆ, 56 ಇನ್ನಿಂಗ್ಸ್ ನಲ್ಲಿ 2000ರನ್ (2ನೇ ತ್ವರಿತ ಗತಿ ಗಳಿಕೆ) ಹಾಗೂ 68 ಇನ್ನಿಂಗ್ಸ್ ನಲ್ಲಿ 2500ರನ್ ಗಳಿಸಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಟಿ20ಐಯಲ್ಲಿ 12 ಬಾರಿ ಗಳಿಸಿದ್ದರೆ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 13 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ, ಸರಣಿ ಶ್ರೇಷ್ಠ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 7 ಬಾರಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.












Click it and Unblock the Notifications