ಹುಬ್ಬಳ್ಳಿ ಫಾನ್ಸ್‌ಗೆ ನಿರಾಶೆ; ಭಾರತ ಎ-ನ್ಯೂಜಿಲೆಂಡ್ ಎ ನಡುವಿನ ಟೆಸ್ಟ್‌ನ ಮೊದಲ ದಿನದಾಟ ರದ್ದು
ಹುಬ್ಬಳ್ಳಿ, ಸೆಪ್ಟೆಂಬರ್ 8 : ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಐತಿಹಾಸಿಕ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಲಿತ್ತು. ಆದರೆ ಮಳೆಯ ಕಾರಣ ಅವಳಿ ಟೆಸ್ಟ್‌ನ ಮೊದಲ ದಿನದಾಟ ರದ್ಧಾಗಿದೆ.
ಭಾರತ ಎಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಣ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯವು ಮಧ್ಯಾಹ 12 ಗಂಟೆಯಾದರೂ ಆರಂಭಗೊಂಡಿಲ್ಲ. ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವನ್ನು ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ 10.30ಕ್ಕೆ ಆರಂಭಿಸುವುದಾಗಿ ಅಂಪೈರ್‌ಗಳು ಹಾಗೂ ಪಂದ್ಯದ ರೆಫರಿ ಪ್ರಕಟಿಸಿದರು. ಆದರೆ, ಬೆಳಿಗ್ಗೆ 10.30ರ ವೇಳೆಗೆ ಮತ್ತೆ ಕ್ರೀಡಾಂಗಣ ಪರಿಶೀಲಿಸಿದ ಅವರು, ಮಧ್ಯಾಹ್ನದ ಬಳಿಕ ಪಂದ್ಯ ನಡೆಯಲಿದೆ ಎಂದು ಪ್ರಕಟಿಸಿದ್ದರು. ಆದರೆ ಬುಧವಾರ ರಾತ್ರಿ ಹಾಗೂ ಇಂದು ನಸುಕಿನಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಮೈದಾನದ ತೇವಾಂಶ ಕಡಿಮೆಯಾಗದ ಕಾರಣ ಮೊದಲ ದಿನದಾಟವನ್ನು ರದ್ಧುಗೊಳಿಸಲಾಗಿದೆ.
ಅಪರೂಪಕ್ಕೆ ನಡೆಯುವ ಇಂಥ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಆಗಾಗ್ಗೆ ಕ್ರೀಡಾಂಗಣಕ್ಕೆ ಬರುವ ನ್ಯೂಜಿಲೆಂಡ್ ಹಾಗೂ ಭಾರತ ತಂಡದ ಆಟಗಾರರನ್ನು ಕಂಡು, ಕೂಗಿ, ಕೈಬೀಸಿ ಸಂಭ್ರಮಿಸಿದ ದೃಶ್ಯ ಕಂಡುಬಂತು. ಕಳೆದ ಮೂರು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅವಕಾಶ ನೀಡಿದ್ದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು.

ಆದರೆ ತೇವಾಂಶ ಹಾಗೂ ಮೇಲಿಂದ ಮೇಲೆ ತುಂತುರು ಮಳೆಯಾಗಿದ್ದರಿಂದ ಮೊದಲ ದಿನ ಪಂದ್ಯವನ್ನು ರದ್ಧಗೊಳಿಸಲಾಯಿತು. ಇನ್ನು ಕ್ರಿಕೆಟ್ ಪಂದ್ಯಾವಳಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರು ಒಳಗೊಂಡಂತೆ ಸುಮಾರು 2 ಸಾವಿರ ಜನರಿಗೆ ಉಚಿತ ಪ್ರವೇಶ ನೀಡಲಾಗಿತ್ತು.
ಇದಕ್ಕೂ ಮುನ್ನ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆ ಪಂದ್ಯದಲ್ಲಿ ಭಾರತ 571 ರನ್‌ಗಳಿಸಿತ್ತು. ಅಭಿಮನ್ಯು ಈಶ್ವರನ್ 132, ರಜತ್ ಪಾಟಿದಾರ್ 176 ಹಾಗೂ ತಿಲಕ್ ವರ್ಮಾ 121 ರನ್‌ಗಳಿಸಿದ್ದರು. ನ್ಯೂಜಿಲ್ಯಾಂಡ್ ಎ ಮೊದಲ ಇನ್ನಿಂಗ್ಸ್‌ನಲ್ಲಿ 400/10 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 133/4 ರನ್‌ಗಳಿಸಿತ್ತು.












Click it and Unblock the Notifications