Get Updates
Get notified of breaking news, exclusive insights, and must-see stories!

ವಿಡಿಯೋ: ಕ್ರೀಡಾಂಗಣದಲ್ಲಿ ಮಾರಾಮಾರಿ- ಪಾಕಿಸ್ತಾನಿ ಬೆಂಬಲಿಗರನ್ನು ಥಳಿಸಿದ ಅಫ್ಘಾನ್ ಅಭಿಮಾನಿಗಳು

ಏಷ್ಯಾಕಪ್ ಸೂಪರ್-4 ಸುತ್ತಿನಲ್ಲಿ ಬುಧವಾರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಅತ್ಯಂತ ಜಿದ್ದಾಜಿದ್ದಿನ ಪಂದ್ಯ ನಡೆದಿದ್ದು, ಕೊನೆಯ ಓವರ್‌ನಲ್ಲಿ ಪಾಕಿಸ್ತಾನ 1 ವಿಕೆಟ್‌ನಿಂದ ಅಫ್ಘಾನ್ ತಂಡವನ್ನು ಸೋಲಿಸಿತು. ಈ ರೋಚಕ ಪಂದ್ಯವು ಶಾರ್ಜಾ ಮೈದಾನದಲ್ಲಿ ನಡೆಯಿತು. ಅಲ್ಲಿ ಪಂದ್ಯದ ನಂತರ ನಾಚಿಕೆಪಡುವಂತಹ ಘಟನೆ ಸಂಭವಿಸಿದೆ. ಪಂದ್ಯದ ನಂತರ ಅಫ್ಘಾನ್ ಮತ್ತು ಪಾಕಿಸ್ತಾನಿ ಅಭಿಮಾನಿಗಳು ಕ್ರೀಡಾಂಗಣದಲ್ಲಿಯೇ ಹೊಡೆದಾಡಿಕೊಂಡಿದ್ದಾರೆ.

Recommended Video

      Mohammad Nawaz ನಮಗೆ ಗೆಲುವು ಒಂದೇ ಮುಖ್ಯ | *Cricket | OneIndia Kannada

      ಪಂದ್ಯ ಸೋತ ಬಳಿಕ ಅಫ್ಘಾನಿಸ್ತಾನದ ಅಭಿಮಾನಿಗಳು ಪಾಕಿಸ್ತಾನದ ಅಭಿಮಾನಿಗಳನ್ನು ಥಳಿಸುತ್ತಿದ್ದ ದೃಶ್ಯ ಕಂಡುಬಂದಿದೆ. ಕೆಲವು ಆಫ್ಘನ್ ಅಭಿಮಾನಿಗಳು ಕ್ರೀಡಾಂಗಣದ ಕುರ್ಚಿಗಳನ್ನು ಕಿತ್ತು ಪಾಕಿಸ್ತಾನಿ ಬೆಂಬಲಿಗರ ಮೇಲೆ ಎಸೆದಿದ್ದಾರೆ. ಪಂದ್ಯ ಸೋತ ಬಳಿಕ ಅಫ್ಘಾನಿಸ್ತಾನ ಅಭಿಮಾನಿಗಳು ಕೋಪಗೊಂಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹರಡುತ್ತಿದೆ. ನಿಜಕ್ಕೂ ಅಫ್ಘಾನಿಸ್ತಾನ ಮೈದಾನದಲ್ಲಿ ಅದ್ಭುತ ಆಟ ಪ್ರದರ್ಶನ ನಡೆದಿತ್ತು. ಆದರೆ ಅಭಿಮಾನಿಗಳು ಈ ನಾಚಿಕೆಗೇಡಿನ ವರ್ತನೆಯಿಂದ ತಂಡದ ಮುಖಕ್ಕೆ ಕಳಂಕ ತಂದಂತಾಗಿದೆ.

      ಘಟನೆ ಬಗ್ಗೆ ಖಂಡನೆ

      ಘಟನೆ ಬಗ್ಗೆ ಖಂಡನೆ

      ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಖ್ತರ್ ಟ್ವೀಟ್ ಮಾಡಿ ಆಫ್ಘನ್ ಅಭಿಮಾನಿಗಳು ಸಾಕಷ್ಟು ಸುಳ್ಳುಗಳನ್ನು ಹೇಳುವಂತವರು. ಘಟನೆಯ ವಿಡಿಯೊವನ್ನು ಪೋಸ್ಟ್ ಮಾಡಿದ ಅಖ್ತರ್ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ, "ಅಫ್ಘಾನ್ ಅಭಿಮಾನಿಗಳು ಇದನ್ನೇ ಮಾಡುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಮಾಡಿದ್ದು ಹೀಗೆ. ಇದು ಒಂದು ಆಟ ಮತ್ತು ಸರಿಯಾದ ಉತ್ಸಾಹದಲ್ಲಿ ಆಡಲಾಗಿತ್ತು. ಅದನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಶಫೀಕ್ ಸ್ಟಾನಿಕ್ಜೈ ನೀವು ಆಟದಲ್ಲಿ ಮುಂದೆ ಬರಲು ಬಯಸಿದರೆ ನಿಮ್ಮ ಅಭಿಮಾನಿಗಳು ಮತ್ತು ನಿಮ್ಮ ಆಟಗಾರರು ಕೆಲವು ವಿಷಯಗಳನ್ನು ಕಲಿಯಬೇಕಾಗುತ್ತದೆ'' ಎಂದು ಕಿಡಿ ಕಾರಿದ್ದಾರೆ.

      ತಂಡಗಳ ಆಟಗಾರರ ನಡುವೆ ಮನಸ್ತಾಪ

      ತಂಡಗಳ ಆಟಗಾರರ ನಡುವೆ ಮನಸ್ತಾಪ

      ಇದಕ್ಕೂ ಮುನ್ನ ಮೈದಾನದಲ್ಲಿಯೂ ಉಭಯ ತಂಡಗಳ ಆಟಗಾರರ ನಡುವೆ ಸ್ಪರ್ಧೆ ತೀವ್ರ ಪೈಪೋಟಿಗಿಳಿದಿರುವುದು ಕಂಡು ಬಂದಿತ್ತು. ಪಾಕಿಸ್ತಾನದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಆಸಿಫ್ ಅಲಿ ಮತ್ತು ಅಫ್ಘಾನ್ ವೇಗಿ ಫರೀದ್ ಅಹ್ಮದ್ ಮಲಿಕ್ ನಡುವೆ ವಾಗ್ವಾದವೂ ನಡೆಯಿತು. ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಫರೀದ್‌ಗೆ ಸಿಕ್ಸರ್ ಬಾರಿಸಿದ ಆಸಿಫ್ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು.

      ಬ್ಯಾಟ್ ನಿಂದ ಬೆದರಿಕೆ

      ಬ್ಯಾಟ್ ನಿಂದ ಬೆದರಿಕೆ

      ಇದಾದ ನಂತರ ಫರೀದ್ ಅವರಿಗೆ ಏನೋ ಹೇಳಿದ್ದು, ಆಸಿಫ್ ಕೂಡ ಕೋಪದಿಂದ ಫರೀದ್ ಅಹಮದ್ ಕಡೆಗೆ ತೆರಳಿದ್ದಾನೆ. ಆಸಿಫ್ ಕೋಪದಿಂದ ಫರೀದ್ ಅಹ್ಮದ್ ಗೆ ಬ್ಯಾಟ್ ನಿಂದ ಬೆದರಿಕೆ ಹಾಕಿದ್ದಾನೆ. ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಆದರೆ, ಮೈದಾನದಲ್ಲಿದ್ದ ಇತರ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

      ಎರಡು ತಂಡಗಳ ನಡುವೆ ತೀವ್ರ ಪೈಪೋಟಿ

      ಎರಡು ತಂಡಗಳ ನಡುವೆ ತೀವ್ರ ಪೈಪೋಟಿ

      ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 126-9 ಸ್ಕೋರ್ ಮಾಡಿತ್ತು. ಇಬ್ರಾಹಿಂ ಜದ್ರಾನ್ (35) ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದರೆ, ಹಜರತುಲ್ಲಾ ಝಜೈ 21 ರನ್ ಗಳಿಸಿದರು. ಪಾಕ್ ಪರ ಹ್ಯಾರಿಸ್ ರೌಫ್ ಎರಡು ವಿಕೆಟ್ ಪಡೆದರು. ಪಾಕಿಸ್ತಾನದ ಮುಂದೆ 130 ರನ್‌ಗಳ ಗುರಿಯಿತ್ತು, ಆದರೆ 19 ಓವರ್‌ಗಳ ಅಂತ್ಯಕ್ಕೆ ತಂಡವು 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 11 ರನ್ ಗಳಿಸಬೇಕಾಗಿತ್ತು ಮತ್ತು ನಸೀಮ್ ಶಾ ಸ್ಟ್ರೈಕ್‌ನಲ್ಲಿದ್ದರು. ಫಜಲ್ಹಕ್ ಫಾರೂಕಿ ಅವರ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ದೀರ್ಘ ಸಿಕ್ಸರ್‌ಗಳನ್ನು ಸಿಡಿಸಿದ ನಸೀಮ್ ಪಾಕಿಸ್ತಾನಕ್ಕೆ ರೋಚಕ ಜಯ ತಂದುಕೊಟ್ಟರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+