ರಾಂಚಿ, ಡಿಸೆಂಬರ್ 12: ಜಾರ್ಖಂಡ್ ರಾಜ್ಯದ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಂದುವರೆದಿದೆ. ಡಿಸೆಂಬರ್ 07ರಂದು 20 ಕ್ಷೇತ್ರಗಳಲ್ಲಿ ಎರಡನೇ ಹಂತ ಮುಕ್ತಾಯದ ಬಳಿಕ ಡಿಸೆಂಬರ್ 12ರಂದು ಮೂರನೇ ಹಂತದಲ್ಲಿ 17 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನ ನಿಗದಿಯಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.
81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದಾರೆ. 3ನೇ ಹಂತದ ಕ್ಷೇತ್ರಗಳ ಅಂಕಿ ಅಂಶ ಹಾಗೂ ಮತದಾನ ಪ್ರಕ್ರಿಯೆ ಅಪ್ಡೇಟ್ಸ್
Dec 12, 2019, 6:54 pm IST
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ರಾಜಕಾರಣಿ ಯಶವಂತ್ ಸಿನ್ಹಾ ಸೇರಿ ಹಲವು ಗಣ್ಯರು ಇಂದು ಮತದಾನ ಮಾಡಿದ್ದಾರೆ.
Dec 12, 2019, 6:53 pm IST
ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ಮುಕ್ತಾಯವಾಗಿದ್ದು 62% ಮತದಾನವಾಗಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇದೆ.
Dec 12, 2019, 3:10 pm IST
ಜಾರ್ಖಂಡ್ ರಾಜ್ಯಪಾಲರ ಮತದಾನ
ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು ರಾಂಛಿಯಲ್ಲಿ ಮತ ಚಲಾಯಿಸಿದರು. ಹಾಗೆಯೇ ಮಾಜಿ ಕೇಂದ್ರ ಸಚಿವ ಸುಬೋಧ್‌ಕಾಂತ್ ಖಿಜ್ರಿಯಲ್ಲಿ ಮತದಾನ ಮಾಡಿದರು.
ಜಾರ್ಖಂಡ್‌ನ 17 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಛಾತ್ರಾದ ಬೂತ್ ನಂಬರ್ 82ನಲ್ಲಿ ನಡೆಯುತ್ತರುವ ಮತದಾನದ ದೃಶ್ಯ
#JharkhandAssemblyPolls: Voting underway at polling booth number 82 in Chatra. Polling in 17 constituencies in the state for the third phase of elections being held today. pic.twitter.com/Nn7yNFfM1I
ಜಾರ್ಖಂಡ್‌ನಲ್ಲಿ ನವೆಂಬರ್ 1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.
Dec 12, 2019, 7:03 am IST
ಮತದಾನಕ್ಕೆ ನಡೆಯುತ್ತಿರುವ ತಯಾರಿ
ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಮೂರನೇ ಹಂತದ ಮತದಾನಕ್ಕೆ ನಡೆಯುತ್ತಿರುವ ತಯಾರಿ,ಬೂತ್ ಮುಂದೆ ಮತದಾನ ಮಾಡಲು ಕಾದುನಿಂತಿರುವ ಮತದಾರರು.
ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ. ಬಳಿಕ ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.
Dec 12, 2019, 1:04 am IST
ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿರರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.
Dec 12, 2019, 1:04 am IST
ಜಾರ್ಖಂಡ್ ಎರಡನೇ ಹಂತದ ಚುನಾವಣೆ: 18 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯ ಶೇ 59.27ರಷ್ಟು ಮತದಾನ ದಾಖಲಾಗಿದೆ. ಸಿಸಾಯಿ ಕ್ಷೇತ್ರದಲ್ಲಿ ಅತ್ಯಧಿಕ ಶೇ 68.6 ರಷ್ಟು ಮತದಾನ. ಜೇಮ್ಶೇಡ್ಪುರ್ ಪೂರ್ವ ಹಾಗೂ ಜೇಮ್ಶೇಡ್ಪುರ್ ಪಶ್ಚಿಮದಲ್ಲಿ ಮಾತ್ರ 5 ಗಂಟೆ ತನಕ ಮತದಾನ ನಡೆಸಲಾಯಿತು.
1:04 AM, 12 Dec

6:58 AM, 12 Dec
ಡಿಸೆಂಬರ್ 23ಕ್ಕೆ ಫಲಿತಾಂಶ
ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ. ಬಳಿಕ ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.
6:59 AM, 12 Dec
ಮೂರನೇ ಹಂತದ ಮತದಾನ ಆರಂಭ
ಜಾರ್ಖಂಡ್‌ನಲ್ಲಿ ಮೂರನೇ ಹಂತದ ಮತದಾನ ಆರಂಭ
7:03 AM, 12 Dec