ಡಿಕೆಶಿ ಸಿಎಂ ಆಗುವವರೆಗೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಅಭಿಮಾನಿ ಪ್ರಮಾಣ
ಕನಕಪುರ (ರಾಮನಗರ), ಅಕ್ಟೋಬರ್ 27: "ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗುವವರೆಗೆ ನಾನು ಮದುವೆ ಮಾಡಿಕೊಳ್ಳುವುದಿಲ್ಲ" ಎಂದು ಡಿಕೆಶಿ ಅಭಿಮಾನಿಯೊಬ್ಬರು ಪ್ರಮಾಣ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಡಿಕೆಶಿ ಜೈಲು ಪಾಲಾದ ಸಂದರ್ಭದಲ್ಲಿ ತಲೆ ಬೋಳಿಸಿಕೊಂಡು ಇದೇ ವ್ಯಕ್ತಿ ಅಭಿಮಾನ ಮೆರೆದಿದ್ದರು.
"ಈ ದೇಹ ಮಣ್ಣಿಗೆ, ಪ್ರಾಣ ಡಿಕೆಶಿ ಅಣ್ಣನಿಗೆ. ಅಣ್ಣ ಸಿಎಂ ಅಗುವವರೆಗೆ ನಾನು ಮದುವೆ ಅಗುವುದಿಲ್ಲ. ಡಿಕೆ ಸಾಹೇಬರು ರಾಜ್ಯದ ಸಿಎಂ ಸ್ಥಾನ ಅಲಂಕರಿಸಿದ ನಂತರ ಮದುವೆ ಮಾಡಿಕೊಳ್ಳುತ್ತೇನೆ" ಎನ್ನುತ್ತಿರುವ ವ್ಯಕ್ತಿ ಕನಕಪುರದ ಮೇಳೆಕೋಟೆಯ ನಿವಾಸಿ ರಿಜ್ವಾನ್ ಪಾಷಾ. ಈ ವ್ಯಕ್ತಿಯು ಡಿ. ಕೆ. ಶಿವಕುಮಾರ್ ಅವರ ಅಪ್ಪಟ ಅಭಿಮಾನಿ.

ನೆಚ್ಚಿನ ನಾಯಕ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಲವಾರು ಮಂದಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹಲವು ಹರಕೆಗಳನ್ನು ಮಾಡಿಕೊಂಡು ಡಿಕೆಶಿ ಮೇಲಿನ ಅಭಿಮಾನ ತೋರಿಸಿದ್ದರು. ಅದರೆ ರಿಜ್ವಾನ್ ಪಾಷಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಿವಕುಮಾರ್ ಈ ರಾಜ್ಯದ ಮುಖ್ಯಮಂತ್ರಿ ಆಗುವವರೆಗೂ ಮದುವೆ ಆಗುವುದಿಲ್ಲ ಎಂದು ಪ್ರಮಾಣ ಮಾಡಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.












Click it and Unblock the Notifications