ಡಿಕೆಶಿ, ಎಚ್ಡಿಕೆಯನ್ನು ಕಳ್ಳ‌-ಮಳ್ಳ ಎಂದು ಜರಿದ ಬಿಜೆಪಿ ಮುಖಂಡ

ರಾಮನಗರ, ಮಾರ್ಚ್ 22: ಡಿ.ಕೆ. ಶಿವಕುಮಾರ್ ಒಬ್ಬ ಕಳ್ಳ ಮತ್ತು ಎಚ್.ಡಿ. ಕುಮಾರಸ್ವಾಮಿ ಒಬ್ಬ ಮಳ್ಳ ಎಂದು ರಾಮನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಗದೀಶ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಬೆಂಬಲಿಗನಾಗಿರುವ ಜಗದೀಶ್ ಗೌಡ ತನ್ನ ಫೇಸ್ ಬುಕ್ ಅಕೌಂಟ್ ಮೂಲಕ ಇಬ್ಬರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಎಚ್ಡಿಕೆ ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ಕಣ್ಣೀರು ಸುರಿಸುತ್ತಾ ಕುಮಾರಸ್ವಾಮಿ ಎಮೋಷನಲ್ ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಎಚ್ಡಿಕೆಯಿಂದ ರಾಮನಗರ ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಿಲ್ಲ. ಚನ್ನಪಟ್ಟಣಕ್ಕೆ ಹೋಗಿ ಅವರೇನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Ramanagara BJP leader slams HD Kumaraswamy and DK Shivakumar

ನೈತಿಕತೆಯಿದ್ದರೆ ಚನ್ನಪಟ್ಟಣದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಲಿ. ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕಡೆ ಸ್ಪರ್ಧಿಸಿದರೆ ಎರಡೂ ಕಡೆ ಸೋತು ಮನೆ ಸೇರುತ್ತಾರೆ ಎಂದು ತಿಳಿಸಿದ್ಧಾರೆ.

ಇನ್ನೂ ಡಿ.ಕೆ .ಶಿವಕುಮಾರ್ ವಿರುದ್ಧವೂ ಹರಿಹಾಯ್ದಿರುವ ಜಗದೀಶ್ ಗೌಡ, "ಡಿಕೆಶಿಗೆ ಯಾರು ಬಕೆಟ್ ಹಿಡಿಯುತ್ತಾರೋ ಅವರಿಗೆ ಪಕ್ಷದ ಟಿಕೆಟ್ ಸಿಗುತ್ತದೆ. ಡಿಕೆಶಿ ದರ್ಪ, ದೌರ್ಜನ್ಯಕ್ಕೆ ರಾಮನಗರದ ಜನತೆ ತಕ್ಕ ಪಾಠ ಕಲಿಸುತ್ತಾರೆ. ಇವರಿಬ್ಬರ ಡಬಲ್ ಗೇಮ್ ನೋಡಿ ಜನ ಬೇಸತ್ತಿದ್ದಾರೆ," ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+