ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: 5‌ ಕೋಟಿ ರೂಪಾಯಿ ಮೌಲ್ಯದ ಕಳವು ಮಾಲುಗಳನ್ನು ಹಿಂದಿರುಗಿಸಿದ ಪೋಲಿಸರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್‌, 30: ಜಿಲ್ಲೆಯಲ್ಲಿ 2022 ನೇ ಸಾಲಿನಲ್ಲಿ ನಡೆದಿದ್ದ ದರೋಡೆ, ಕಳ್ಳತನ, ಸುಲಿಗೆ ಸೇರಿದಂತೆ ಇನ್ನೂ ಹಲವು ಪ್ರಕರಣಗಳನ್ನು ಜಿಲ್ಲಾ ಪೋಲಿಸರು ಭೇದಿಸಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಸುಮಾರು 5 ಕೋಟಿ ಮೌಲ್ಯದ ಚಿನ್ನಾಭರಣ ಒಳಗೊಂಡಂತೆ ವಿವಿಧ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದರು.

ಕೇಂದ್ರ ವಲಯ ಐಜಿ ಕೆ.ಚಂದ್ರಶೇಖರ್ ನೇತೃತ್ವದಲ್ಲಿ 2022ನೇ ಸಾಲಿನಲ್ಲಿ ನಡೆದಿದ್ದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಚಿನ್ನ ಸೇರಿದಂತೆ ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ಕಳವು ಮಾಲುಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಗಿದೆ. ಪ್ರಾಪರ್ಟಿ ರಿಟರ್ನ್ ಕಾರ್ಯಕ್ರಮ ಇಂದು ಜಿಲ್ಲಾ ಪೊಲೀಸ್ ಭವನದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಉಪಸ್ಥಿತರಿದ್ದರು.

ಕಣ್ವ ಜಲಾಶಯಕ್ಕೆ 76ನೇ ವಸಂತ: ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯಕಣ್ವ ಜಲಾಶಯಕ್ಕೆ 76ನೇ ವಸಂತ: ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯ

ವಾರಸುದಾರರಿಗೆ 10 ಕೆ.ಜಿ ಚಿನ್ನ ವಾಪಸ್ಸು

ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಇಲ್ಲಿಯವರೆಗೆ ವರದಿಯಾದ ದರೋಡೆ, ಸುಲಿಗೆ‌ ಸೇರಿದಂತೆ ಸುಮಾರು ಒಟ್ಟು 236 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಪ್ರಕರಣಗಳಲ್ಲಿನ 10 ಕೆ.ಜಿ 863 ಗ್ರಾಂ ಚಿನ್ನವನ್ನು, 13 ಗ್ರಾಂ ಬೆಳ್ಳಿ ವಸ್ತುಗಳನ್ನು, 101 ದ್ವಿಚಕ್ರ ವಾಹನ, 14 ಇತರೆ ವಾಹನ, 58 ಮೊಬೈಲ್‌ಗಳು ಹಾಗೂ 6 ಟಿ.ವಿ, ಲ್ಯಾಪ್ಟಾಪ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಇನ್ನು 1 ವಾಚ್, 1006 ಕೆ.ಜಿಯುಳ್ಳ 500 ಮೀಟರ್ ಕಾಪರ್ ಮತ್ತು ಅಲ್ಯೂಮಿನಿಯಂ ವೈರ್, 3 ಕೆ.ಜಿ 500 ಗ್ರಾಂ ಒಣಗಿದ ಗಾಂಜಾ, 4 ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳಾದ ವಟೀಪೈಡ್ ಬಾಕ್ಸ್, ಪಾರ್ಕಿಂಗ್ ಟೈಲ್ಸ್ ಬಾಕ್ಸ್, ಹಾಗೂ 1 ಟನ್ ಟೆಲಿಪೋನ್ ಕೇಬಲ್ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

Police recovered stolen goods worth Rs 5 crore

ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

ವಸ್ತುಗಳನ್ನು ಕಳೆದು ಕೊಂಡಿದ್ದ ವಾರಸುದಾರಿಗೆ ಮತ್ತೆ ಅವುಗಳನ್ನು ಹಿಂತಿರುಗಿಸಲಾಯಿತು. ನಂತರ ಮಾತನಾಡಿದ ಕೇಂದ್ರ ವಲಯ ಐಜಿ ಕೆ.ಚಂದ್ರಶೇಖರ್, ಜಿಲ್ಲೆಯಲ್ಲಿ ನಮ್ಮ ಪೊಲೀಸರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಪ್ರಕರಣಗಳು ಕಡಿಮೆ ಸಮಯದಲ್ಲೇ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚಗೆ ವ್ಯಕ್ತಪಡಿಸಿದರು. ಅಲ್ಲದೇ ಇನ್ನು ಹಲವು ಪ್ರಕರಣಗಳು ತನಿಖೆಯ ಹಂತದಲ್ಲಿದ್ದು, ಆ ಪ್ರಕರಣಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತಾರೆ ಎಂಬ ವಿಶ್ವಾಸವಿದೆ. ಒಡವೆ, ವಾಹನ ಸೇರಿದಂತೆ ಹಲವು ವಸ್ತುಗಳನ್ನು ಕಳೆದುಕೊಂಡು ನೋವು ಆನುಭಿಸಿದ ಜನರು, ಕಳೆದುಕೊಂಡ ವಸ್ತುಗಳು ಮತ್ತೆ ಸಿಕ್ಕಾಗ ಅವರ ಮುಖದಲ್ಲಿ ಮೂಡುವ ಮಂದಹಾಸ ಪೊಲೀಸರ ಶ್ರಮಕ್ಕೆ ತೃಪ್ತಿ ತರುತ್ತದೆ ಎಂದರು.

English summary
Ramanagara police seized property worth Rs 5 crore from accused, returned property to owners. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X