ರಾಮನಗರ; ಅತ್ತ ಡಿಸಿಎಂ ಸಭೆ, ಇತ್ತ ಅಧಿಕಾರಿಗಳ ಮೊಬೈಲ್ ಆಟ

ರಾಮನಗರ, ಅಕ್ಟೋಬರ್ 21: ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವಥ್ ನಾರಾಯಣ್ ಇಂದು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಮನಗರದಲ್ಲಿ ಕೆಡಿಪಿ ಸಭೆಯನ್ನು ಕರೆದಿದ್ದರು.

Recommended Video

      ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

      ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ಬಸಪ್ಪ, ಸಿಇಒ ಜಯವಿಭವಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲಿ ಚರ್ಚೆ ನಡೆಯುವುದಕ್ಕಿಂತ ಹೆಚ್ಚಾಗಿ ಮೊಬೈಲ್ ನಲ್ಲಿ ಆಟವಾಡುತ್ತಿದ್ದವರೇ ಹೆಚ್ಚಿದ್ದರು.

      ಚರ್ಚೆ ನಡೆಯುತ್ತಿದ್ದ ಸಂದರ್ಭ ಮೊಬೈಲ್ ನಲ್ಲಿ ಅಧಿಕಾರಿಗಳು ಮಗ್ನರಾಗಿದ್ದು, ಡ್ಯಾನ್ಸ್ ವಿಡಿಯೋ ಜೊತೆಗೆ ಆಟಗಳನ್ನು ಆಡುತ್ತಿದ್ದರು. ಸಭೆ ಬಗ್ಗೆ ಗಮನ ನೀಡದೇ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದ ದೃಶ್ಯ ಕಂಡುಬಂದಿತು.

      Officials Playing On Mobile In Dcm Meeting In Ramanagar

      ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನ ಮೂರ್ನಾಲ್ಕು ಕೆಡಿಪಿ ಸಭೆಗಳಲ್ಲೂ ಇದೇ ಕಥೆಯಾಗಿತ್ತು. ಆಗಲೂ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳ ಮೊಬೈಲ್ ಆಟದ ಬಗ್ಗೆ ವರದಿಯಾಗಿತ್ತು. ಆದರೂ ಡೋಂಟ್ ಕೇರ್ ಸಂಸ್ಕೃತಿಯನ್ನು ಈ ಅಧಿಕಾರಿಗಳು ಅನುಸರಿಸುತ್ತಿದ್ದಾರೆ. ಡಿಸಿಎಂ ತಮ್ಮ ಪಾಡಿಗೆ ಸಭೆ ಮಾಡ್ತಿದ್ದರೆ, ಅಧಿಕಾರಿಗಳು ಅವರ ಪಾಡಿಗೆ ಮೊಬೈಲ್ ನಲ್ಲಿ ಫುಲ್ ಬ್ಯುಸಿಯಾಗಿದ್ದರು.

      Officials Playing On Mobile In Dcm Meeting In Ramanagar

      ಇಂದು ಬೆಳಿಗ್ಗೆ ಚನ್ನಪಟ್ಟಣದ ಕ್ರಾಪ್ ಪಾರ್ಕ್ ನ ಬೊಂಬೆ ತಯಾರಿಕೆಯ ಘಟಕಕ್ಕೆ ಭೇಟಿ ನೀಡಿದ್ದ ಡಿಸಿಎಂ ಅಶ್ವಥ್ ನಾರಾಯಣ್ ನಂತರ ಕೆಡಿಪಿ ಸಭೆ ಹಮ್ಮಿಕೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+