ಸಿಕ್ಕ ಪ್ರಸಾದ ಸ್ವೀಕರಿಸಬೇಕು: ಡಿ.ಕೆ. ಶಿವಕುಮಾರ್ ಸಲಹೆ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada
   ಡಿ ಕೆ ಶಿವಕುಮಾರ್ ರಿಂದ ಕಾಂಗ್ರೆಸ್ ನಾಯಕರಿಗೊಂದು ಕಿವಿಮಾತು | Oneindia Kannada

   ರಾಮನಗರ, ಏಪ್ರಿಲ್ 16: ಪಕ್ಷದಲ್ಲಿ ಯಾರಿಗೂ ಯಾವುದೇ ವೈಮನಸ್ಯವಿಲ್ಲ. ಪ್ರತಿಯೊಬ್ಬರು ಏನು ಪ್ರಸಾದ ಸಿಗುತ್ತದೆ ಅದನ್ನು ಸ್ವೀಕರಿಸಿ ಕೆಲಸ ಮಾಡಬೇಕೆಂದು ಟಿಕೆಟ್ ವಂಚಿತರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.

   ಕರ್ನಾಟಕದ ಜನತೆಗೆ ಅಭಿನಂದನೆ ಸಲ್ಲಿಸಿದ ಡಿಕೆ ಶಿವಕುಮಾರ್

   ಕನಕಪುರದಲ್ಲಿ ಭಾನುವಾರ ಸಂಜೆ ನೂತನ ಕಾಂಗ್ರೆಸ್ ಭವನ ಉದ್ಘಾಟಿಸಿ ಮಾತನಾಡಿದ ಅವರು ಇರುವ ಒಂದು ಚೇರ್ ಹಂಚಿಕೊಳ್ಳಬೇಕು. ನನಗೂ ಮಂತ್ರಿಸ್ಥಾನ ಸಿಕ್ಕಿರಲಿಲ್ಲ. ಸುಮ್ಮನೆ ಕೂತಿರಲಿಲ್ವಾ. ರಾಮಸ್ವಾಮಿಯವರು ನಮ್ಮ ಪಕ್ಷದ ನಾಯಕರು. ನನ್ನನ್ನ ದೂರುವುದು ಸಹಜ. ಅದರಿಂದ ನನಗೇನು ಬೇಜಾರಿಲ್ಲ ಎಂದು ತಿಳಿಸಿದರು.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   No one has any jealousy in the congress party

   ಸರ್ವೇ ಮಾಡಿರುವ ಪ್ರಕಾರ ಯಾರಿಗೆ ಜನಪ್ರಿಯತೆಯಿದೆ, ಯಾರು ನಿಂತ್ರೆ ಗೆಲ್ತಾರೆ ಎನ್ನುವ ಆಧಾರದ ಮೇಲೆ ಟಿಕೇಟ್ ತೀರ್ಮಾನ ಮಾಡಲಾಗಿದೆ. ಭಿನ್ನಮತದಿಂದ ಏನು ಪ್ರಯೋಜನವಿಲ್ಲ. ತಾಳ್ಮೆಯಿಂದ ಕಾಯಬೇಕು. ಎಷ್ಟೋ ಜನ ಮಂತ್ರಿಗಳನ್ನ ಬದಲಾವಣೆ ಮಾಡಲಾಯ್ತು. ಈಗ ಅವರೆಲ್ಲಾ ಒಟ್ಟಿಗೆ ಕೆಲಸ ಮಾಡ್ತಿಲ್ವಾ, ಅಭ್ಯರ್ಥಿಗಳಾಗಿಲ್ವಾ ಎಂದು ಪ್ರಶ್ನಿಸಿದರು.

   No one has any jealousy in the congress party

   ಶರದ್ ಪವಾರ್ ಹಾಗು ಚಂದ್ರಬಾಬು ನಾಯ್ಡು ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   DK Shivakumar inaugurated New Congress Bhavan on Sunday evening at Kanakapura. Then he spoke No one has any jealousy in the party. Ramaswamy is the leader of our party. It's normal to blame.I'm not hesitant. Everyone loves the Congress.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ