ಮತ್ತೊಮ್ಮೆ ಮುಖ್ಯಮಂತ್ರಿ ಆಗೋ 'ಯೋಗ' ನನಗಿದೆ ಎಂದು ಹೇಳಿದ್ದಾರೆ: ಎಚ್ಡಿಕೆ

ರಾಮನಗರ, ಮಾರ್ಚ್ 5: "ಹಿಂದೆ ಆರೋಗ್ಯವಾಗಿದ್ದೆ, ಹೆಚ್ಚು ಓಡಾಡುತ್ತಿದ್ದೆ. ಈಗ ಎರಡೆರಡು ಬಾರಿ ಚಿಕಿತ್ಸೆ ಆಗಿರುವುದರಿಂದ ಹಿಂದಿನ ಸ್ಪೀಡ್ ನನ್ನಲಿಲ್ಲ. ನನಗೂ ಅರವತ್ತು ವರ್ಷ ದಾಟಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

"ಹಿಂದೆ ಸಮಯ ಕೊಟ್ಟ ಹಾಗೆ, ಈಗ ನನಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ, ಇದಕ್ಕೆ ಕಾರಣ ನನ್ನ ಆರೋಗ್ಯ. ನಾನೀಗ ಸೀನಿಯರ್ ಸಿಟಿಜನ್. ಕುಮಾರಸ್ವಾಮಿಯವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

"ಇವತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ನಿಮ್ಮಂತಹ ತಂದೆ ತಾಯಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ನಾನು ಎಂದೂ ದ್ರೋಹ ಬಗೆದವನಲ್ಲ" ಎಂದು ಎಚ್ಡಿಕೆ ಹೇಳಿದ್ದಾರೆ.

I Have A Confidence That I Will Become CM Again: HD Kumaraswamy

"ನನ್ನ ತಂದೆ ದೇವೇಗೌಡರನ್ನು ಮತ್ತು ನನ್ನನ್ನು ಪ್ರೀತಿಯಿಂದ ಕಾಣುತ್ತಿರುವಂತಹ ಲಕ್ಷಾಂತರ ಜನರಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ವಿಶ್ವಾಸ ನನ್ನಲಿದೆ" ಎನ್ನುವ ಭರವಸೆಯ ಮಾತನ್ನು ಕುಮಾರಸ್ವಾಮಿ ಆಡಿದ್ದಾರೆ.

"ಆರೋಗ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಸಾಕಾಗುವುದಿಲ್ಲ. ಆದರಲ್ಲಿ ಆಸ್ಪತ್ರೆಗಳಿಗೆ ಸುಣ್ಣ ಬಣ್ಣ ಬಳಿಯುವುದಕ್ಕೂ ಸಾಧ್ಯವಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನ ಮುಂದುವರಿಸಲಾಗಿದೆ. ಅಲ್ಲದೆ ಈ ಬಾರಿ ಮಂಡಿಸಲಾದ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಯವರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+