• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ; ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ

By ರಾಮನಗರ ಪ್ರತಿನಿಧಿ
|

ರಾಮನಗರ, ಜನವರಿ 05: ಆಕಸ್ಮಿಕವಾಗಿ ಬ್ಯಾಟರಿ ತಯಾರಿಕಾ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಮಂಗಳವಾರ ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ವಲಯದಲ್ಲಿರುವ ಶಕ್ತಿ ಬ್ಯಾಟರೀಸ್ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ತಯಾರಿಕಾ ಘಟಕದ ಥರ್ಮಕೋಲಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರ್ಖಾನೆಗೆ ಹಬ್ಬಿದೆ.

ದೆಹಲಿ-ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ

ಕಾರ್ಖಾನೆಯ ಒಳಗೆ ಬೆಂಕಿ ಕಾಣಿಸಿಕೊಂಡ ತಕ್ಷಣ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಕಾರ್ಮಿಕರು ತಕ್ಷಣವೇ ಹೊರಗೆ ಓಡಿ ಹೋಗಿದ್ದಾರೆ. ಇದರಿಂದಾಗಿ ಯಾರಿಗೂ ಅಪಾಯವಾಗಿಲ್ಲ.

ಚಿಕ್ಕಮಗಳೂರು; ಚುನಾವಣಾ ದ್ವೇಷಕ್ಕೆ ಕೊಟ್ಟಿಗೆಗೆ ಬೆಂಕಿ ಇಟ್ಟರು

ಕ್ಷಣ-ಕ್ಷಣಕ್ಕೂ ಬೆಂಕಿ ಹೆಚ್ಚಾಗಿ ವ್ಯಾಪಿಸುತ್ತಿದೆ. ಶಕ್ತಿ ಬ್ಯಾಟರೀಸ್ ಕಂಪನಿಯ ಸುತ್ತಲೂ ದಟ್ಟವಾದ ಹೊಗೆ ಅವರಿಸಿದೆ. ಅಕ್ಕ ಪಕ್ಕದಲ್ಲಿ ಹಲವಾರು ಕಾರ್ಖಾನೆಗಳಿದ್ದು, ಅವುಗಳಿಗು ಬೆಂಕಿ ವ್ಯಾಪಿಸುವ ಆತಂಕ ಎದುರಾಗಿದೆ.

ನಿಂತಿದ್ದ ಬಸ್‌ಗೆ ಏಕಾಏಕಿ ಬೆಂಕಿ; ಸುಟ್ಟು ಕರಕಲಾದ ಬಸ್

ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನವನ್ನು ಪಡುತ್ತಿದ್ದಾರೆ. ಕತ್ತಲೆ ಮತ್ತು ದಟ್ಟವಾದ ಹೊಗೆ ಕಾರ್ಯಚರಣೆಗೆ ಅಡ್ಡಿ ಮಾಡಿದೆ. ಕಾರ್ಖಾನೆಯ ಸ್ಥಿತಿ ಕಂಡು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

English summary
Fire accident at Skathi battery production company in Harohalli industrial area of Ramanagara district. Fire engine rushed the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X