ರಾಮನಗರದಲ್ಲಿ ಬಿಜೆಪಿಗೆ ಕೈಕೊಟ್ಟ ಮಗನ ಜೊತೆ ಎಂದಿಗೂ ಮಾತಾಡಲ್ಲ: ಲಿಂಗಪ್ಪ
ರಾಮನಗರ, ನವೆಂಬರ್ 7: ರಾಮನಗರದಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಕೈಕೊಟ್ಟಿರುವುದು ಅಕ್ಷಮ್ಯ ಎಂದಿಗೂ ಮಗನ ಜೊತೆ ಮಾತನಾಡುವುದಿಲ್ಲ , ಕ್ಷಮಿಸುವುದಿಲ್ಲ ಎಂದು ಎಲ್ ಚಂದ್ರಶೇಖರ್ ಅವರ ತಂದೆ ಸಿ.ಎಂ. ಲಿಂಗಪ್ಪ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವು ಮಗ ಎಲ್ಲಿದ್ದಾನ, ಹೇಗಿದ್ದಾನೆ ಎಂಬುದು ನನಗೆ ಗೊತ್ತಿಲ್ಲ ಆದರೆ ನಾನು ಎಂದೂ ಆತನ ಬಳಿ ಮಾತನಾಡುವುದಿಲ್ಲ, ಇದು ಕ್ಷಮಿಸುವಂತಹ ಅಪರಾಧವೂ ಅಲ್ಲ ಹೀಗೆ ಕೊನೆ ಕ್ಷಣದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣೆಯ ಕಣದಿಂದ ಹಿಂದೆ ಸರಿದಿದ್ದು ತಪ್ಪು ಎಂದರು.
ನಮ್ಮ ಕುಟುಂಬ ಇಷ್ಟು ವರ್ಷವೂ ಕಾಂಗ್ರೆಸ್ ಗಾಗಿಗೇ ದುಡಿದಿದೆ, ಚಂದ್ರಶೇಖರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇ ಮೊದಲ ತಪ್ಪು ಸೇರಿದ ಮೇಲೆ ನಿಷ್ಠೆಯಿಂದ ಕೆಲಸ ಮಾಡಬೇಕಿತ್ತು ಆದರೆ ಹೀಗೆ ಏಕಾಏಕಿ ಬಿಫಾರಂ ತೆಗೆದುಕೊಂಡು, ಚುನಾವಣೆಯಲ್ಲಿ ಶಾಸಕನಾಗುತ್ತೇನೆ ಎಂದುಕೊಳ್ಳುವಷ್ಟರಲ್ಲಿ ಚುನಾವಣೆಯಿಂದ ಹಿಂದೆ ಸರಿದಿದ್ದು ಇನ್ನೂ ತಪ್ಪು ಎಂದು ಹೇಳಿದರು.
ಇಷ್ಟು ವರ್ಷದಿಂದ ಕಟ್ಟಿಕೊಂಡು ಬಂದಿದ್ದ ರಾಜಕೀಯ ಸೌಧ ಉರುಳಿ ನುಚ್ಚುನೂರಾಗಿದೆ, ನನ್ನ ಮಗನಿಗೆ ಯೋಗೇಶ್ವರ್ ಹಾಗೂ ರುದ್ರೇಶ್ ಹತ್ತಾರು ಮಾತುಗಳನ್ನು ಹೇಳಿರಬಹುದು. ಆದರೆ ಅವನ ಬುದ್ಧಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ
ರಾಮನಗರದಲ್ಲಿ ವಿಧಾನಸಭೆಗೆ ಬಿಜೆಪಿಯಿಂದ ಬೇರೆ ಅಭ್ಯರ್ಥಿಗಳನ್ನು ನೇಮಿಸಬಹುದಿತ್ತು ಆದರೆ ಯೋಗೇಶ್ವರ್ ಅವರು ಚಂದ್ರಶೇಖರ್ ಅವರನ್ನು ಕರೆತಂದು ಅಭ್ಯರ್ಥಿಯಾಗಿ ಕಣಕ್ಕಿಳಿಸುವಲ್ಲಿ ಸೋತಿದ್ದಾರೆ ಎಂದು ನಿಷ್ಠಾವಂತ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಇದೀಗ ಚಂದ್ರಶೇಖರ್ ಅವರು ಸಮರ ಸಮಯದಲ್ಲೇ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಬಗ್ಗೆ ಹಲವು ಕಾರಣಗಳನ್ನು ನೀಡಿದ್ದಾರೆ.

ಡಿಕೆ ಸಹೋದರರಿಗೆ ನನ್ನ ಇಮೇಜ್ ಹಾಳುಮಾಡಬೇಕು ಎಂದಿರಲಿಲ್ಲ
ಡಿ.ಕೆ ಬ್ರದರ್ಸ್ ಹೈಜಾಕ್ ಮಾಡಿದ್ದರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿ.ಕೆ ಬ್ರದರ್ಸ್ಗೆ ನನ್ನ ಇಮೇಜ್ ಹಾಳು ಮಾಡಬೇಕು ಎಂದಿರಲಿಲ್ಲ. ಆದರೆ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ಪಣ ತೊಟ್ಟಿದ್ದರು ಎಂದರು.
ಜನರ ನಂಬಿಕೆಗೆ ನಿರಾಸೆ ತಂದಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಮಗನ ಈ ಕೆಲಸದಿಂದ ನಾನು ಏನು ಮಾಡಬಹುದು. ನಮ್ಮ ಮನೆಯಲ್ಲಿ ಈವರೆಗೂ ಸೂತಕದ ಛಾಯೆ ಇದೆ. ನನ್ನ ಹೆಂಡತಿ ಬಹಳ ಸೂಕ್ಷ್ಮ. ಊಟ ನಿದ್ರೆ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೂ ಚಂದ್ರಶೇಖರ್ ನಡೆ ಬಗ್ಗೆ ಬೇಸರವಿದೆ ಎಂದರು.

ಚಂದ್ರಶೇಖರ್ ಮತದಾರರಿಗೆ ಅವಮಾನ ಮಾಡಿದ್ದಾರೆ
ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಿಲುವಿನಿಂದ ಕ್ಷೇತ್ರದ ಮತದಾರರಿಗೆ ಅಪಮಾನವಾಗಿದ್ದು, ಇದೆಲ್ಲ ರಾಜಕೀಯ ಬೆಳವಣಿಗೆಗಳಿಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರೇ ನೇರ ಕಾರಣ ಎಂಬುದು ಹಲವರ ಅಭಿಪ್ರಾಯವಾಗಿದೆ. ಅದು ಹೌದು ಆದರೆ ಏಕಾ ಏಕಿ ಕಣದಿಂದ ಹಿಂದೆ ಸರಿದಿದ್ದು ಸಾವಿರಾರು ಮತದಾರರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಆದರೂ ಅವರಿಗೆ ಜನರು ಸಾವಿರಾರು ಮತಗಳನ್ನು ನೀಡಿ ಬಿಜೆಪಿಗೆ ಗೌರವ ತೋರಿಸಿದ್ದಾರೆ.

ರಾಮನಗರದಲ್ಲಿ ರುದ್ರೇಶ್‌ಗೆ ಟಿಕೆಟ್ ನೀಡಿದ್ದರೆ ಮಾನ ಉಳಿಯುತ್ತಿತ್ತು
ಚಂದ್ರಶೇಖರ್‌ಗೆ ಟಿಕೆಟ್ ನೀಡಿ ಮಾನ ಕಳೆದುಕೊಳ್ಳುವುದಕ್ಕಿಂತ ರುದ್ರೇಶ್‌ಗೆ ಟಿಕೆಟ್ ನೀಡಿ ಮಾನ ಉಳಿಸಿಕೊಳ್ಳಬಹುದಿತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications