ಮೊಬೈಲ್ ಗೇಮ್‌ನ ಟಾಸ್ಕ್ ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಂಡ ಯುವಕ

ಪುಣೆ, ಜುಲೈ 20: ಯುವ ಜನತೆಯನ್ನು ಬಲಿಪಡೆಯುವ ಬ್ಲ್ಯೂವೇಲ್ ಮಾದರಿಯ ಮತ್ತೊಂದು ಗೇಮ್ ಬಂದಿದೆ. ಇದರಿಂದ ಯುವಕರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಯೂ ಹೆಚ್ಚಾಗುತ್ತಿದೆ.

ಯುವಕನೊಬ್ಬ ಮೊಬೈಲ್‌ ಗೇಮ್ ಟಾಸ್ಕ್ ಪೂರ್ಣಗೊಳಿಸುವ ಉದ್ದೇಶದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

20 ವರ್ಷದ ಯುವಕನೊಬ್ಬ ಬ್ಲ್ಯೂವೇಲ್ ರೀತಿಯ ಆನ್‌ಲೈನ್ ಗೇಮಿನ ಹುಚ್ಚಿಗೆ ಬಿದ್ದು ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಈಗಾಗಲೇ ಟಿಕ್‌ಟಾಕ್, ಬ್ಲ್ಯೂವೇಲ್ ನಂತಹ ಗೇಮಗಳು ಸಾಕಷ್ಟು ಮಂದಿಯ ಪ್ರಾಣ ಕಸಿದಿದೆ. ಆದರೂ ಜನರು ಅದರ ಗೀಳಿಗೆ ಬೀಳುವುದು ಮಾತ್ರ ಕಡಿಮೆಯಾಗಿಲ್ಲ.

To complete game task he hand himself

ಬ್ಲ್ಯೂವೇಲ್ ಮಾದಿರಿಯ ಆಟವೊಂದು ಈಗ ವಿದ್ಯಾರ್ಥಿಯ ಜೀವ ಕಸಿದಿದೆ. ಕಾಮರ್ಸ್ ವಿದ್ಯಾರ್ಥಿ ದಿವಾಕರ್ ಮಾಲಿ ಲೋನಿಖಂಡ್‌ನ ನಿವಾಸಿಯಾಗಿದ್ದರು.

ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 'ಬ್ಲ್ಯಾಕ್ ಪ್ಯಾಂಥರ್ ಈಗ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ, ಈಗ ಆತನಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ' ಎಂದು ಪತ್ರವೊಂದನ್ನು ಬರೆದಿಟ್ಟಿದ್ದ. ಇದು ಆತ ಮೊಬೈಲ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಎನ್ನುವುದನ್ನು ತಿಳಿಸುತ್ತದೆ.

ಆತನ ಕುಟುಂಬದವರು ಹಾಗೂ ನೆರೆಹೊರೆಯವರ ಪ್ರಕಾರ ಇದು ಬ್ಲ್ಯೂವೇಲ್ ರೀತಿಯದ್ದೇ ಗೇಮ್ ಆಗಿದೆ. ಆತ ಕೆಲವು ಟಾಸ್ಕ್ ಗಳನ್ನು ಪೂರ್ಣಗೊಳಿಸುವುದಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಮೂರು ಹೊತ್ತು ಮೊಬೈಲ್ ಹಿಡಿದುಕೊಂಡಿರುತ್ತಿದ್ದ, ನಾವು ಏನೇ ಹೇಳಿದರೂ ಅದನ್ನು ಬಿಡಿಸಲು ಸಾಧ್ಯವಾಗಿರಲಿಲ್ಲ ಎಂದು ಆತನ ತಾಯಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+