• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸ್ಲಿಂ ಆಗಿದ್ದರೆ ನಮ್ಮ ಫಾರ್ಮ್‌ನಿಂದ ಕೋಳಿ ಕೊಡಲ್ಲ ಅಂತಿದ್ದಾರೆ ರೈತರು

|

ಪುಣೆ,ಏಪ್ರಿಲ್ 7: ಇಷ್ಟು ದಿನ ಕೋಳಿ ಹಾಗೂ ಕೊರೊನಾ ವೈರಸ್‌ಗೆ ಸಂಬಂಧವಿದೆ ಎನ್ನುವ ಸುಳ್ಳು ಸುದ್ದಿಯಿಂದ ಕೋಳಿ ಸಾಕಾಣಿಕೆ, ಮಾರಾಟ ಎಲ್ಲವೂ ನಿಂತು ಹೋಗಿತ್ತು.

ಇಲ್ಲ ಕೋಳಿಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕು ಎಂದು ಮನದಟ್ಟಾದ ಬಳಿಕ ಲಾಕ್‌ಡೌನ್ ನಡುವೆಯೇ ಮಾರಾಟ ನಡೆಯುತ್ತಿತ್ತು.

ಆದರೆ ಈಗ ಮತ್ತೊಂದು ತಲೆನೋವು ಶುರುವಾಗಿದೆ. ಕೋಳಿ ಸಾಕಾಣಿಕೆ ಮಾಡುವವರು ಕೋಳಿಗಳನ್ನು ತೆಗೆದುಕೊಳ್ಳುವವರು ಮುಸ್ಲಿಂ ಎಂದು ತಿಳಿದರೆ ಅವರಿಗೆ ಕೋಳಿ ತೆಗೆದುಕೊಂಡು ಹೋಗುವುದಕ್ಕೆ ನಿರಾಕರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ 9 ಸಾವಿರಕ್ಕೂ ಅಧಿಕ ಮುಸ್ಲಿಮರು ತಾವಾಗಿಯೇ ಆಸ್ಪತ್ರೆಗೆ ದಾಖಲಾಗಿಲ್ಲ ಎಂಬ ಮಾಹಿತಿ ಕೇಳಿರುವ ಕೋಳಿ ಸಾಕಾಣಿಕೆ ಮಾಡುವವರು ಮುಸ್ಲಿಂ ಡ್ರೈವರ್‌ಗಳೇನಾದರೂ ಕೋಳಿಗಳನ್ನು ಕೊಳ್ಳಲು ಬಂದರೆ ಖಡಾಖಂಡಿತವಾಗಿ ನಿರಾಕರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೀಗಾಗಿ ಗ್ರಾಹಕರಿಗೆ ಫ್ರೆಶ್ ಆಗಿರುವ ಕೋಳಿ, ಕೋಳಿ ಮಾಂಸ ದೊರೆಯುತ್ತಿಲ್ಲ ಎನ್ನುವುದು ಸತ್ಯದ ಸಂಗತಿ.

ಇನ್ನು ಪಂಜಾಬ್‌ ಸರ್ಕಾರ ಮುಂದಿನ 24 ಗಂಟೆಯೊಳಗೆ ತಬ್ಲಿಘಿಗಳು ತಾವೇ ಬಂದು ಆಸ್ಪತ್ರೆಯಲ್ಲಿ ದಾಅಖಲಾಗದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

English summary
After a disastrous March, when rumours about links between poultry products and the coronavirus (COVID-19) outbreak saw sales plummet, the industry is now facing another issue: farmers refusing to allow pick-up vehicles enter villages to transport market-ready birds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X